Monday, December 23, 2024

ಸುಖಾಂತ್ಯಕಂಡ ಇಡೀ ಬೆಂಗಳೂರು ಪೊಲೀಸ್ರನ್ನ ನಿದ್ದೆಗೆಡಿಸಿದ್ದ ಸ್ಟೋರಿ..!

ಬೆಂಗಳೂರು: 112 ಗೆ ಕರೆ ಬಂದಿದ್ದ ವಿಚಿತ್ರ ಯುವತಿಯ ಕಿಡ್ಯಾಪ್ ಕೇಸ್, ಇಡೀ ಬೆಂಗಳೂರು ಪೊಲೀಸ್ರನ್ನ ನಿದ್ದೆಗೆಡಿಸಿತ್ತು. ಯುವತಿಯ ಕಿಡ್ಯಾಪ್ ಕೇಸ್ ಈಗ ಸುಖ್ಯಾಂತ್ಯಗೊಂಡಿದೆ.

ಬಾಣಸವಾಡಿ ಇನ್ಸ್ ಪೆಕ್ಟರ್ ಕಾರ್ಯ ವೈಖರಿ ಬಗ್ಗೆ ಪೂರ್ವ ವಿಭಾಗ ಡಿಸಿಪಿ ಭೀಮಾ ಶಂಕರ್ ಗುಳೇದ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಪೊಲೀಸ್ರ ಕ್ಷಿಪ್ರ ಕಾರ್ಯವೈಖರಿಗೆ ಈ ಪ್ರಕರಣವೇ ಸಾಕ್ಷಿಯಾಗಿದೆ.

ನಿನ್ನೆ ಬೆಳಗ್ಗೆ 4‌ ಗಂಟೆಗೆ 112 ಗೆ ಕರೆ ಮಾಡಿ ಯುವತಿಯನ್ನ ಕಿಡ್ನಾಪ್ ಮಾಡಿ ಕಾರಲ್ಲಿ ಬಲವಂತವಾಗಿ ಕರೆದೊಯ್ತಿರೋ ಬಗ್ಗೆ ಕರೆ.
ಯುವತಿ ಯಾರು, ಹಿನ್ನಲೆ ಏನು ಯಾವುದೇ ಮಾಹಿತಿ ಇರೋದಿಲ್ಲ. ಬಾಣಸವಾಡಿಯ ಸುಬ್ಬಯ್ಯನಪಾಳ್ಯ ರಸ್ತೆಯಲ್ಲಿ ನಡೆದಿದ್ದ ಘಟನೆ.
ಕೂಡಲೇ ಬಾಣಸವಾಡಿ ಇನ್ಸ್ ಪೆಕ್ಟರ್ ಸಂತೋಷ್ ನೇತೃತ್ವದಲ್ಲಿ ನಾಲ್ಕು ವಿಶೇಷ ತಂಡಗಳಿಂದ ಕಾರ್ಯಾಚರಣೆ. ಕಮೀಷನರ್ ಪ್ರತಾಪ್ ರೆಡ್ಡಿ, ಡಿಸಿಪಿ ಭೀಮಾಶಂಕರ್ ಗುಳೇದ್ ರಿಂದ ಮಾಸ್ಟರ್ ಕಂಟ್ರೋಲ್ ರೂಮ್ ಗೆ ತಕ್ಷಣವೆ ಮಾಹಿತಿ ನೀಡಿದ್ದಾರೆ.

ಬರೋಬ್ಬರಿ ನೂರಕ್ಕೂ ಹೆಚ್ಚು ಸಿಸಿಟಿವಿಗಳನ್ನ ಪರಿಶೀಲಿಸಿದ್ದ ಪೊಲೀಸ್ರು. ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಶೇಖರ್ ರಿಂದ 112 ಗೆ ದೂರು. ಒಂದು ಬೈಕ್ ನಂಬರ್ ಟ್ರ್ಯಾಕ್ ಮಾಡಿ ಸಿಸಿಟಿವಿ ಪರಿಶೀಲನೆ ಮಾಡಿದಾಗ ಕೊನೆಗೂ ಯುವತಿ ಪತ್ತೆ. ದೆಹಲಿಯಲ್ಲಿ ಮಾಡಲಿಂಗ್ ಆಗಿದ್ದ ಯುವತಿ ಅಮೃತ ಎಂಬುದು ಬೆಳಕಿಗೆ. ಯುವತಿಯ ಸ್ನೇಹಿತನನ್ನ ವಿಚಾರಣೆ ಮಾಡಿದಾಗ ಆಶ್ಚರ್ಯ ಸಂಗತಿ ಬೆಳಕಿಗೆ. ನಿನ್ನೆ ಬೆಳಗ್ಗೆ ಸ್ನೇಹಿತನ ಮನೆಗೆ ಬಂದು ಲೋ ಬಿಪಿಯಾಗಿದ್ದ ಯುವತಿ. ರಸ್ತೆಯಲ್ಲಿ ಸುಸ್ತಾಗಿ ನಿಂತಿದ್ದ ಯುವತಿಯನ್ನ ಎತ್ತಿಕೊಂಡು ಕಾರಲ್ಲಿ ಕರೆದೊಯ್ದಿದ್ದ ಸ್ನೇಹಿತ.ಇದನ್ನ ಅದೇ ರಸ್ತೆಯಲ್ಲಿ ಬರ್ತಿದ್ದ ಶೇಖರ್ ಎಂಬ ಉದ್ಯೋಗಿ 112 ಗೆ ಕರೆ ಮಾಡಿ ಕಿಡ್ಯಾಪ್ ಅಂತ ದೂರು ಕೊಟ್ಟಿದ್ದರು. ಸಂಜೆ ಮೂರು ಗಂಟೆಗೆ ಪ್ರಕರಣ ಸುಖಾಂತ್ಯಗೊಂಡು ನಿಟ್ಟಿಸಿರು ಪೋಲಿಸರು ನಿಟ್ಟುಸಿರು ಬಿಟ್ಟಿದ್ದಾರೆ.

RELATED ARTICLES

Related Articles

TRENDING ARTICLES