ಬೆಂಗಳೂರು: ರಾಜದಾನಿ ಬೆಂಗಳೂರಿನಲ್ಲಿ ಈಗಾಗಲೇ ರಸ್ತೆಗುಂಡಿಗಳ ಕುರಿತು ಸಾಕಷ್ಟು ಚರ್ಚೆಯಾಗಿತ್ತು. ಈ ಹಿಂದೆ ಯಲಹಮಕದಲ್ಲಿರುವ ರಸ್ತೆಗುಂಡಿಗೆ ಓರ್ವವ್ಯಕ್ತಿ ಬಲಿಯಾಗಿದ್ದ ಹಿನ್ನೆಲೆಯಲ್ಲಿ, ಬಿಬಿಎಂಪಿ ಆಯುಕ್ತರು ಅಧಿಕಾರಿಗಳಿಗೆ ರಸ್ತೆ ಗುಂಡಿಗಳನ್ನು ಸಂಪೂರ್ಣವಾಗಿ ಮುಚ್ಚಲು ನವೆಂಬರ್ 10 ರಂದು ಗಡವು ನೀಡಿತ್ತು.
ಕಿಲ್ಲರ್ ರಸ್ತೆ ಗುಂಡಿ ಮುಚ್ಚಲು ಇನ್ನೂ 4 ದಿನ ಬಾಕಿ ಉಳಿದಿದೆ. ಹೀಗಾಗಿ ಸಮರೋಪಾದಿಯಲ್ಲಿ ರಸ್ತೆ ಗುಂಡಿ ಮುಚ್ಚುತ್ತಿರೋ ಬಿಬಿಎಂಪಿ ಇಂಜಿನಿಯರ್ಸ್ಗಳು. ರಸ್ತೆ ಗುಂಡಿ ಮುಚ್ಚುವ ಕಾರ್ಯ ಚುರುಕು ಗೊಳಿಸಿದ ಪಾಲಿಕೆ ಅಧಿಕಾರಿಗಳು.
ಸಾವಿನ ಗುಂಡಿಗಳಿಗೆ ಸಾಲು ಸಾಲು ಅವಘಡ ಬೆನ್ನಲ್ಲೇ ಎಚ್ಚೆತ್ತ ಮಹಾನಗರ ಪಾಲಿಕೆ. ನವೆಂಬರ್10 ರೊಳಗೆ ಎಲ್ಲಾ ರಸ್ತೆ ಗುಂಡಿಗಳನ್ನ ಮುಚ್ಚುವ ಗುರಿಯನ್ನು ಹೊಂದಿದೆ. ಡೆಡ್ಲೈನ್ ಒಳಗೆ ರಸ್ತೆ ಗುಂಡಿ ಮುಚ್ಚಿಲ್ಲ ಅಂದ್ರೆ ಎಂಜಿನಿಯರ್ಗಳನ್ನ ಅಮಾನತು ಮಾಡೋ ಎಚ್ಚರಿಕೆ ನೀಡಿರೋ ಪಾಲಿಕೆ ಕಮಿಷನರ್. ಹೀಗಾಗಿ ನಗರದಲ್ಲಿ ಚುರುಕು ಪಡೆದ ರಸ್ತೆ ಗುಂಡಿ ಮುಚ್ಚುವ ಕಾರ್ಯ ನಡೆಯುತ್ತಿದೆ.