Monday, January 13, 2025

ಡಾಲಿ ಜತೆಗೆ ಬೆಳ್ಳಿ ತೆರೆಗೆ ಎಂಟ್ರಿ ಕೊಟ್ಟ ಮೋಹಕ ತಾರೆ.!

ಬೆಂಗಳೂರು: ರತ್ನನ್ ಪ್ರಪಂಚ ಚಿತ್ರದಿಂದ ಯಶಸ್ತಿಯಾಗಿದ್ದ ತಂಡದೊಂದಿಗೆ ಮತ್ತೆ ಡಾಲಿ ಧನಂಜಯ್ ಅವರು ‘ಉತ್ತರಕಾಂಡ’ ಎನ್ನೋ ಚಿತ್ರದ ಮೂಲಕ ರಮ್ಯಾ ಕಾಲಿಟ್ಟಿದ್ದಾರೆ.

ಹೌದು. ಇಂದು ಡಾಲಿ ಧನಂಜಯ್​ ಹಾಗೂ ನಟಿ ರಮ್ಯಾ ಜೋಡಿಯಲ್ಲಿ ಮೂಡಿ ಬರುವ ಉತ್ತರಕಾಂಡ ಸಿನಿಮಾ ಮಹೂರ್ತವನ್ನ ಮಾಡಲಾಯಿತು. ಸಿನಿಪ್ರಿಯರು ಕಂಡುಕೊಂಡಂತೆ ಉತ್ತರಕಾಂಡ ಚಿತ್ರದ ಮೂಲಕ ನಟಿ ರಮ್ಯಾ ನಾಯಕಿಯಾಗಿ ಸೆಕೆಂಡ್‌ ಇನ್ನಿಂಗ್ಸ್‌ ಆರಂಭಿಸಲಿದ್ದಾರೆಂದು ಹೇಳಲಾಗುತ್ತಿದ್ದು, ಈ ಚಿತ್ರದ ಮಹೂರ್ತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಸಿನಿಮಾ ಅಭಿಮಾನಿಗಳಿಗೆ ಬಹುತ್​​ ಖುಷಿ ನೀಡಿದ್ದಾರೆ.

ಈ ಸಿನಿಮಾವನ್ನ ನಿರ್ದೇಶಕ ರೋಹಿತ್ ಪದಕಿ, ಹೊಂಬಾಳೆಯ ಅಂಗಸಂಸ್ಥೆ ಕೆ.ಆರ್.ಜಿ ಸಂಸ್ಥೆ ಚಿತ್ರವನ್ನು ನಿರ್ಮಿಸುತ್ತಿದೆ. ಕಾರ್ತಿಕ್ ನಿರ್ಮಿಸುತ್ತಿದ್ದಾರೆ.

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ತಮ್ಮದೇ ನಿರ್ಮಾಣದ ಸಿನಿಮಾದದಲ್ಲಿ ಮೂಡಿ ಬರುತ್ತಿರುವ ರಾಜ್​ ಶೆಟ್ಟಿ ನಟನೆಯ ಚಿತ್ರದ ಮೂಲಕ ಬೆಳ್ಳಿ ತೆರೆಗೆ ಕಾಲಿಡಬೇಕಿತ್ತು. ಆದರೆ, ಬೇರೊಬ್ಬ ನಾಯಕಿಯನ್ನು ತಮ್ಮ ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳುವ ಮೂಲಕ ರಮ್ಯಾ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದರು.

RELATED ARTICLES

Related Articles

TRENDING ARTICLES