Saturday, January 18, 2025

ಉತ್ತರಕಾಂಡದಲ್ಲಿ ಡಾಲಿ ಜತೆ ರಮ್ಯಾ ನ್ಯೂ ಇನ್ನಿಂಗ್ಸ್ ಶುರು

ಜಾಲಿರೆಡ್ಡಿ ಧನಂಜಯನ ಜೊತೆ  ಸ್ಯಾಂಡಲ್​ವುಡ್​ ಕ್ವೀನ್​ ರಮ್ಯಾ ರೊಮ್ಯಾನ್ಸ್​ ಮಾಡಲಿದ್ದಾರೆ. ಅರೆ..! ಏನಿದು ಹೊಸ ಸುದ್ದಿ ಆಂತೀರಾ..? ಯೆಸ್​​​.. ಮೋಹಕ ತಾರೆ ಮತ್ತೆ ಕಂಬ್ಯಾಕ್​​ ಆಗಿರೋ ಸುದ್ದಿ ಹೊಸತೇನಲ್ಲ. ಆದ್ರೆ, ಸ್ವಾತಿ ಮುತ್ತಿನ ಮಳೆಗೆ ಕೋಕ್​​ ಕೊಟ್ಟು ಡಾಲಿ ಕೈ ಹಿಡಿಯೋಕೆ ಸಜ್ಜಾಗಿದ್ದಾರೆ ಚೆಂದುಳ್ಳಿ ಚೆಲುವೆ ರಮ್ಯಾ. ಯಾವ ಸಿನಿಮಾ..? ರಮ್ಯಾ ರೋಲ್​​ ಏನು ಅನ್ನೊದ್ರ ಇಂಟ್ರೆಸ್ಟಿಂಗ್​ ಸ್ಟೋರಿ ಇಲ್ಲಿದೆ.

  • ಮರೆಯಾದ ಸ್ವಾತಿ ಮುತ್ತಿನ ಮಳೆ.. ಪದ್ಮಾವತಿ ನ್ಯೂ ಚಾಪ್ಟರ್​​​​

ಸ್ಯಾಂಡಲ್​​ವುಡ್​ಗೆ ಕಂಬ್ಯಾಕ್​​​​​ ಆಗೋದಾಗಿ ಗುಡ್​ ನ್ಯೂಸ್​ ಕೊಟ್ಟಿದ್ದ ರಮ್ಯಾ ತಮ್ಮದೇ ಬ್ಯಾನರ್ ಸಿನಿಮಾದಲ್ಲಿ ನಟಿಸೋದಾಗಿ ಗ್ರೀನ್​ ಸಿಗ್ನಲ್​​ ಕೊಟ್ಟಿದ್ರು. ಆದ್ರೆ, ತಮ್ಮ ಸೀಟ್​ನ್ನು ಮತ್ತೊಬ್ಬರಿಗೆ ಬಿಟ್ಟುಕೊಟ್ಟು ಅಭಿಮಾನಿಗಳಿಗೆ ನಿರಾಸೆ ಮಾಡಿಬಿಟ್ರು. ಇದೀಗ ಮತ್ತೊಮ್ಮೆ ಮೋಹಕ ತಾರೆ ಬಣ್ಣ ಹಚ್ಚಿ ಬೆಳ್ಳಿ ತೆರೆಯ ಮೇಲೆ ಮಿಂಚಲಿದ್ದಾರೆ.

ಯೆಸ್​​​.. ಕೆಆರ್​​ಜಿ ಸ್ಟುಡಿಯೊಸ್​ ಬ್ಯಾನರ್​ನ್ ಬಿಗ್​ ಬಜೆಟ್​ ಸಿನಿಮಾದಲ್ಲಿ ರಮ್ಯಾ ಕಂಬ್ಯಾಕ್​ ಆಗಲಿದ್ದಾರಂತೆ. ಇತ್ತ ನಟ ರಾಕ್ಷಸ ಡಾಲಿ ಧನಂಜಯ ಬ್ಯಾಕ್​ ಟು ಬ್ಯಾಕ್​​ ಹಿಟ್​ ಸಿನಿಮಾಗಳ ಮೂಲಕ ಅಬ್ಬರಿಸ್ತಿದ್ದಾರೆ. ಈ ನಡುವೆ ರಮ್ಯಾ ಜೊತೆ ಹೊಸ ಚಿತ್ರದಲ್ಲಿ ಡುಯೆಟ್​ ಆಡೋಕೆ ಸಜ್ಜಾಗಿದ್ದಾರೆ ಜಾಲಿರೆಡ್ಡಿ. ಸದ್ಯ ಈ ಸುದ್ದಿ ಬೆಂಕಿ ಬಿರುಗಾಳಿಯಂತೆ ಗಾಂಧಿ ನಗರದಲ್ಲಿ ಸದ್ದು ಮಾಡ್ತಿದ್ದು, ಸದ್ಯದಲ್ಲೇ ಅಧಿಕೃತವಾಗಿ ಘೋಷಣೆ ಹೊರಬೀಳಬೇಕಿದೆ. ಈ ನಡುವೆ ಹಾಸ್ಟೆಲ್​ ಹುಡುಗರು ಚಿತ್ರದಲ್ಲೂ ರಮ್ಯಾ ಕಂಪು ಹರಡಲಿದೆ.

ಡಾಲಿ ಉತ್ತರಾಖಂಡ ಚಿತ್ರದಲ್ಲಿ ಹೊಸ ಅವತಾರದಲ್ಲಿ ಕಾಣಿಸಿಕೊಳ್ತಿದ್ದಾರೆ. ಔಟ್​ ಅಂಡ್​ ಔಟ್​ ಕಮರ್ಷಿಯಲ್​ ಸಿನಿಮಾ ಇದಾಗಿದ್ದು ಕೆಆರ್​ಜಿ ಸ್ಟುಡಿಯೋಸ್​ ಮೂಲಕ ಕಾರ್ತಿಕ್​​ ಮತ್ತು ಯೋಗಿ.ಜಿ ಆರ್​ ನಿರ್ಮಾಣ ಮಾಡ್ತಿದ್ದಾರೆ. ರೋಹಿತ್​ ಪದಕಿ ನಿರ್ದೇಶನದ ಈ ಚಿತ್ರ ಪೋಸ್ಟರ್​ ಮೂಲಕವೇ ಎಲ್ಲರ ಚಿತ್ತವನ್ನು ತನ್ನತ್ತ ಸೆಳೆದಿದೆ.

ರಾಜ್​​​​​​​​​ ಬಿ ಶೆಟ್ಟಿಗೆ ಕೈಕೊಟ್ಟು ಡಾಲಿ ಕೈ ಹಿಡಿಯಲಿರುವ ರಮ್ಯಾ ಈ ಚಿತ್ರದಲ್ಲಿ ಯಾವ ಗೆಟಪ್​​ನಲ್ಲಿ ಕಾಣಿಸಿಕೊಳ್ತಾರೆ ಅನ್ನೋ ಕುತೂಹಲ ಮನೆ ಮಾಡಿದೆ. ಮನುಷ್ಯನ ಅಂತರಾಳವನ್ನು ಅರ್ಥಪೂರ್ಣವಾಗಿ ತೋರಿಸೋ ಪ್ರಯತ್ನವನ್ನು ಉತ್ತರಕಾಂಡ ಚಿತ್ರದಲ್ಲಿ ಮಾಡಲಾಗ್ತಿದೆ. ಚರಣ್​ ರಾಜ್​ ಮ್ಯೂಸಿಕ್​​​ ಚಿತ್ರಕ್ಕಿರಲಿದ್ದು ಯಾರೆಲ್ಲಾ ಕಲಾವಿದ್ರು ಇರ್ತಾರೆ ಅನ್ನೋದು ಸದ್ಯದಲ್ಲೇ ಗೊತ್ತಾಗಲಿದೆ. ಎನವೇ,  ರಮ್ಯಾ ಕಂಬ್ಯಾಕ್​ಗೆ ಆಲ್​ ದಿ ಬೆಸ್ಟ್​​ ಹೇಳೋಣ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯುರೋ, ಪವರ್ ಟಿವಿ

RELATED ARTICLES

Related Articles

TRENDING ARTICLES