Sunday, December 22, 2024

ಟಿಟಿ ವಾಹನದಲ್ಲಿ ಬೆಂಕಿ ಕ್ಷಣಾರ್ಧದಲ್ಲಿ ಟಿಟಿ ವಾಹನ ಸಂಪೂರ್ಣ ಭಸ್ಮ.

ತುಮಕೂರು : ಚಲಿಸುತ್ತಿದ್ದ ಟೆಂಪೋ ಟ್ರಾವಲ್ಸ್ ಇದ್ದಕ್ಕಿದ್ದಂತೆ ಕಾಣಿಸಿಕೊಂಡು ಬೆಂಕಿಯಿಂದಾಗಿ ಇಡೀ ವಾಹನವೇ ಕ್ಷಣಾರ್ಧದಲ್ಲಿ ಸುಟ್ಟು ಕರಕಲಾದ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ಹೊರ ವಲಯದ ಬಿದನಗೆರೆ ಬೈ ಪಾಸ್ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆದಿದೆ.

ಇನ್ನೂ ಬೆಂಗಳೂರಿನ ವೈಟ್ ಫೀಲ್ಡ್ ವಾಸಿಗಳು ಹಾಸನದಲ್ಲಿ ಮದುವೆ ಮುಗುಸಿಕೊಂಡು ಟೆಂಪೋ ಟ್ರಾವಲ್ಸ್ ನಲ್ಲಿ ಬೆಂಗಳೂರಿಗೆ ಹಿದಿರುಗುತ್ತಿದ್ದಾಗ ಘಟನೆ ಸಂಭವಿಸಿದ್ದು, ರಾಷ್ಟ್ರೀಯ ಹೆದ್ದಾರಿ 75 ರ ಬಿದನಗೆರೆ ಸಮೀಪ ಆರಂಭದಲ್ಲಿ ವಾಹನದಲ್ಲಿ ಹೊಗೆ ಕಾಣಿಸಿಕೊಂಡಿತ್ತು ತಕ್ಷಣ ವಾಹನದಲ್ಲಿ ಇದ್ದವರು ಕೆಳಗಿಳಿಸಿದ್ದ ಚಾಲಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇನ್ನೂ ಹೊಗೆ ಕಾಣಿಸಿಕೊಂಡ ಕೆಲವೇ ಕ್ಷಣಗಳಲ್ಲಿ ಬೆಂಕಿ ಕಾಣಿಕೊಂಡು ಧಗ ಧಗನೆ ಟಿಟಿ ವಾಹನ ಹೊತ್ತಿ ಉರಿದಿದೆ ತಕ್ಷಣ ಕುಣಿಗಲ್ ಪೊಲೀಸರು ಹಾಗೂ ಅಗ್ನಿಶಾಮಕ ದಳ ಘಟನೆ ಸ್ಥಳಕ್ಕೆ ದೌಡಾಯಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರಾದ್ರು ಆವೇಳೆಗಾಗಲೇ ಸಂಪೂರ್ಣ ಟಿಟಿ ವಾಹನ ಸುಟ್ಟು ಹೋಗಿತ್ತು.

RELATED ARTICLES

Related Articles

TRENDING ARTICLES