Thursday, December 19, 2024

ಬೀದರ್​ನಲ್ಲಿ ಭೀಕರ ಅಪಘಾತ.. 7 ಮಂದಿ ದುರ್ಮರಣ

ಬೀದರ್​ : ಸರ್ಕಾರಿ ಶಾಲೆ ಹತ್ತಿರ ನಿನ್ನೆ ಟಿಪ್ಪರ್ ಮತ್ತು ಆಟೊ ನಡುವೆ ಭೀಕರ ಅಪಘಾತ ಆಟೊದಲ್ಲಿದ್ದ ಏಳು ಮಹಿಳೆಯರು ಮೃತಪಟ್ಟ ಘಟನೆ ಬೀದರ್​ನಲ್ಲಿ ನಡೆದಿದೆ.

ಮೃತಪಟ್ಟ ದುರ್ದೈವಿ ಚಿಟಗುಪ್ಪ ತಾಲ್ಲೂಕಿನ ಉಡುಬನಳ್ಳಿ ಗ್ರಾಮದ ಪ್ರಭಾವತಿ ದೇವೇಂದ್ರ (36), ಯಾದಮ್ಮ ಅಷ್ಮಿತ (40), ಗುಂಡಮ್ಮಾ ನರಸಿಂಗ (60), ಜಗಮ್ಮಾ ಪ್ರಭು (34), ರುಕ್ಮಿಣಿಬಾಯಿ ಅಮೃತ (60), ಈಶ್ವರಮ್ಮ ಬಕ್ಕಪ್ಪ (55) ಪಾರ್ವತಿ ಮಾರುತಿ (42) ಮೃತರು. ಎಲ್ಲರೂ ಕೃಷಿ ಕಾರ್ಮಿಕರಾಗಿದ್ದು, ಕೆಲಸ ಮುಗಿಸಿಕೊಂಡು ಮನೆಗೆ ಮರಳುತಿದ್ದಾಗ ಅವಘಡ ಸಂಭವಿಸಿದೆ.

ಆಟೊ ಚಾಲಕ ಉಡಬನಳ್ಳಿಯ ಜಗನ್ನಾಥ ಸಿದ್ದಪ್ಪ ನಾಟೇಕಾರ (39) ಮತ್ತು ಟಿಪ್ಪರ್ ಚಾಲಕ ಅಶೋಕ ರಾಜಪ್ಪ ಸೇರಿ 11 ಮಂದಿಗೆ ಗಾಯಗಳಾಗಿದು ಇದರಲ್ಲಿ ಇಬ್ಬರು ಗಂಭೀರವಾಗಿ ಗಾಯವಾಗಿದ್ದು, ತೆಲಂಗಾಣದ ನೋಂದಣಿ ಹೊಂದಿದ ಟಿಪ್ಪರ ಮತ್ತು ಆಂಧ್ರ ಪ್ರದೇಶದ ನೋಂದಣಿ ಹೊಂದಿದ ಆಟೊ ಮುಖಾಮುಖಿ ಡಿಕ್ಕಿ ಹೊಡೆದ ರಭಸಕ್ಕೆ ಸ್ಥಳದಲ್ಲಿ ಒಬ್ಬರು ಸಾವನ್ನಪ್ಪಿದರೆ, ತೀವ್ರ ಸ್ವರೂಪದಲ್ಲಿ ಗಾಯಗೊಂಡ 6 ಮಂದಿ ಆಸ್ಪತ್ರೆಯಲ್ಲಿ ಕೊನೆಯುಸಿ ರೆಳೆದರು.

ಆಟೊದಲ್ಲಿ ಒಟ್ಟು 17 ಮಂದಿ ಪ್ರಯಾಣಿಕರು ಇದ್ದರು. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಒಬ್ಬರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ. ಇನ್ನು, ಗ್ರಾಮದಲ್ಲಿ ಸೂತಕದ ವಾತಾವರಣ ಮನೆ ಮಾಡಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

RELATED ARTICLES

Related Articles

TRENDING ARTICLES