Monday, December 23, 2024

ಗಾಯಕರಾದ ರಿಷಬ್.. ಸೆನ್ಸೇಷನಲ್ ಶೆಟ್ರ ಹೊಸ ಕಾಯಕ

ಕಾಂತಾರದಿಂದ ಸೆನ್ಸೇಷನ್ ಸೃಷ್ಟಿಸಿರೋ ಶೆಟ್ರು, ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್ ಅನ್ನೋದ್ರಲ್ಲಿ ಯಾವುದೇ ಡೌಟ್ ಇಲ್ಲ. ಆದ್ರೆ ಅವ್ರು ಹೊಸ ಕಾಯಕ ಶುರು ಮಾಡಿದ್ದಾರೆ. ಅದು ಈಗ ಬೆಳಕಿಗೆ ಬಂದಿದ್ದು, ಅದರೊಟ್ಟಿಗೆ ರೀಲ್ಸ್​ಗಾಗಿ ಪಂಜುರ್ಲಿ ವೇಷ ಧರಿಸಿ, ಎಡವಟ್ ಮಾಡಿಕೊಂಡ ಮೇಕಪ್ ಆರ್ಟಿಸ್ಟ್​ ಬಗ್ಗೆಯೂ ತೋರಿಸ್ತೀವಿ. ನೀವೇ ಓದಿ.

  • ಈಗ ಮುನ್ನೆಲೆಗೆ ಬಂದ ಮೂರು ವರ್ಷದ ಹಳೆಯ ಸಾಂಗ್

ನಿಮ್ಮಂಥವ್ರು ಎಷ್ಟು ಬಂದ್ರೂ ನಮ್ ಗುಂಡ್ಗೆ ಗಟ್ಟಿಗೆ ಐತೆ ಅಂತಿದ್ದಾರೆ ಕಾಂತಾರ ಕ್ರಾಂತಿಯ ರಿಷಬ್ ಶೆಟ್ಟಿ. ಹೌದು.. ಇದು 9 ಸುಳ್ಳು ಕಥೆಗಳು ಅನ್ನೋ ಸಿನಿಮಾಗಾಗಿ ಮೂರು ವರ್ಷದ ಹಿಂದೆ ಹಾಡಿರೋ ಹಾಡು. ಗೆಳೆಯ ಪ್ರಮೋದ್ ಶೆಟ್ಟಿಗಾಗಿ ಹಾಡಿರೋ ಈ ಹಾಡು ಈಗ ವೈರಲ್ ಆಗ್ತಿದೆ. ಕಾರಣ ಶೆಟ್ರು ಈಗ ಟಾಕ್ ಆಫ್ ದಿ ಟೌನ್.

ರಿಷಬ್ ಒಳ್ಳೆ ಬರಹಗಾರ, ನಟ, ನಿರ್ದೇಶಕ ಹಾಗೂ ನಿರ್ಮಾಪಕ ಅನ್ನೋದು ಎಲ್ರಿಗೂ ಗೊತ್ತಿತ್ತು. ಆದ್ರೀಗ ಗಾಯಕ ಅನ್ನೋ ಕಾಯಕ ಕೂಡ ಬೆಳಕಿಗೆ ಬಂದಿದೆ. ವಿಕ್ರಮ್ ವಸಿಷ್ಠ ಸಾಹಿತ್ಯ, ಪ್ರವೀಣ್- ಪ್ರದೀಪ್ ಸಂಗೀತ ಸಂಯೋಜನೆ ಇರೋ ಈ ಹಾಡು ಬಹಳ ಇಂಟರೆಸ್ಟಿಂಗ್ ಆಗಿದ್ದು, ಶೆಟ್ರು ಗಾಯನದಲ್ಲೂ ಪಂಟರ್ ಅನ್ನೋದಕ್ಕೆ ಸಾಕ್ಷಿ ಆಗಿದೆ. ಇದ್ರೀದ ಮತ್ತಷ್ಟು ಸಾಂಗ್ಸ್ ಇವ್ರ ಮನೆ ಬಾಗಿಲು ಬಡಿದರೂ ಅಚ್ಚರಿಯಿಲ್ಲ.

  • ರೀಲ್ಸ್​ಗಾಗಿ ಪಂಜುರ್ಲಿ ವೇಷ.. ನೆಟ್ಟಿಗರಿಂದ ಆಕ್ರೋಶ
  • ಧರ್ಮಸ್ಥಳಕ್ಕೆ ಬಂದ ಹೈದ್ರಾಬಾದ್ ಮಹಿಳೆ ತಪ್ಪೊಪ್ಪಿಗೆ

ಹೌದು.. ಕಾಂತಾರ ಚಿತ್ರದ ಸೆಂಟರ್ ಆಫ್ ಅಟ್ರ್ಯಾಕ್ಷನ್ ಅಥ್ವಾ ಆಧಾರ ಸ್ತಂಭಾನೇ ಪಂಜುರ್ಲಿ ದೈವಾರಾಧನೆ. ಅದು ಜಗಜ್ಜಾಹಿರಾಗ್ತಿದ್ದಂತೆ ಅದನ್ನ ಒಂದಷ್ಟು ಮಂದಿ ರೀಲ್ಸ್ ಮೂಲಕ ಮಿಸ್ ಯೂಸ್ ಮಾಡೋಕೆ ಮುಂದಾದ್ರು. ಹೈದ್ರಾಬಾದ್​ನ ಮೇಕಪ್ ಆರ್ಟಿಸ್ಟ್ ಶ್ವೇತಾ ರೆಡ್ಡಿ ಅನ್ನೋರು ಪಂಜುರ್ಲಿ ವೇಷ ಧರಿಸಿ, ರೀಲ್ಸ್ ಮಾಡಿದ್ರು. ನೆಟ್ಟಿಗರಿಂದ ಆಕೆಗೆ ವ್ಯಾಪಕ ವಿರೋಧ ವ್ಯಕ್ತವಾಯ್ತು.

ಅಷ್ಟೇ ಅಲ್ಲ, ಆರೋಗ್ಯ ತಪ್ಪಿ ವೈಯಕ್ತಿಕ ಜೀವನದಲ್ಲಿ ಏರುಪೇರು ಕೂಡ ಆಗಿದೆ. ಅದೇ ಕಾರಣದಿಂದ ತಪ್ಪಿನ ಅರಿವಾಗಿ, ಧರ್ಮಸ್ಥಳಕ್ಕೆ ಬಂದು ಮಂಜುನಾಥ ಸ್ವಾಮಿಯ ದರ್ಶನ ಪಡೆದು, ಬಳಿಕ ಧರ್ಮಾಧಿಕಾರಿಯಾಗಿದ್ದ ಡಾ. ವೀರೇಂದ್ರ ಹೆಗ್ಡೆ ಅವ್ರಿಗೆ ಕ್ಷಮೆ ಕೂಡ ಯಾಚಿಸಿದ್ದಾರೆ ಶ್ವೇತಾ ರೆಡ್ಡಿ. ಇದು ದೈವವನ್ನು ಕೇವಲವಾಗಿ ನೋಡಿದ್ದಲ್ಲದೆ, ಆ ದೇವರಿಂದಲೇ ಶ್ವೇತಾಗೆ ಜ್ಞಾನೋದಯವಾಗುವಂತೆ ಆಗಿದೆ.

ಇನ್ನು ಮಿಸ್ಟರ್ 360 ಅಂತಲೇ ಕ್ರಿಕೆಟ್ ಲೋಕದಲ್ಲಿ ಫೇಮಸ್ ಆಗಿರೋ ಆರ್​ಸಿಬಿ ಪ್ಲೇಯರ್ ಎಬಿ ಡೆವಿಲಿಯರ್ಸ್​ ಕೂಡ ಕಾಂತಾರ ನೋಡಿ ಥ್ರಿಲ್ ಆಗಿದ್ದಾರೆ. ರಿಷನ್ ಜೊತೆಗೂಡಿ ಸಿನಿಮಾ ವೀಕ್ಷಿಸಿ, ಒಟ್ಟಿಗೆ ನಿಂತು ಸಿನಿಮಾಗೆ ವಿಶ್ ಕೂಡ ಮಾಡಿದ್ದಾರೆ. ಹೊಂಬಾಳೆ ಫಿಲಂಸ್ ಈಗಾಗ್ಲೇ ಆರ್​ಸಿಬಿ ಜೊತೆ ಟೈಯಪ್ ಆಗಿದ್ದು, ಪ್ರೊಮೋಷನ್ಸ್ ಯಾವ ರೇಂಜ್​ಗಿರಲಿದೆ ಅನ್ನೋದ್ರ ಹಿಂಟ್ ಮತ್ತೊಮ್ಮೆ ಬಿಟ್ಟುಕೊಟ್ಟಿದ್ದಾರೆ ಪ್ರೊಡ್ಯೂಸರ್.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES