Friday, April 4, 2025

ಪ್ರವೀಣ್ ನೆಟ್ಟಾರು ಕೊಲೆ ಕೇಸ್​: ಮತ್ತೆ 3 ಆರೋಪಿಗಳ ಬಂಧನ ಮಾಡಿದ NIA

ಮಂಗಳೂರು; ಬಿಜೆ‍ಪಿ ಕಾರ್ಯಕರ್ತರಾಗಿದ್ದ ಮಂಗಳೂರಿನ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎನ್‌ಐಎ ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದೆ.

ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮೈಸೂರು, ಹುಬ್ಬಳ್ಳಿ, ದಕ್ಷಿಣ ಕನ್ನಡದಲ್ಲಿ ಎನ್ಐಎ ದಾಳಿ ನಡೆಸಿದೆ. ಬೆಳ್ಳಾರೆಯ ಮಹಮ್ಮದ್ ಇಕ್ಬಾಲ್, ಇಸ್ಮಾಯಿಲ್ ಶಾಫಿ, ನಾವೂರಿನ ಇಬ್ರಾಹಿಂ ಷಾ ಎಂಬವರ ಬಂಧನ ಮಾಡಲಾಗಿದೆ.

ಪ್ರವೀಣ್ ಕೊಲೆಗೆ ಸಂಚು ನಡೆಸಿರುವುದರಲ್ಲಿ ಆರೋಪಿಗಳ ಕೈವಾಡ ಇದೆ. ಈವರಗೆ ಹತ್ತು ಮಂದಿಯನ್ನು ಎನ್​ಐ ಬಂಧಿಸಿದ್ದು, ತಲೆಮರೆಸಿಕೊಂಡಿರುವ ನಾಲ್ವರ ಪತ್ತೆಗಾಗಿ ಲುಕೌಟ್ ನೋಟಿಸ್, ಶೋಧ ಮುಂದುವರಿಕೆ ಮಾಡಲಾಗಿದೆ. ದಾಳಿ ವೇಳೆ ಡಿಜಿಟಲ್ ಸಾಕ್ಷ್ಯ, ಮಹತ್ವದ ದಾಖಲೆ ಪತ್ರಗಳು ವಶಕ್ಕೆ ಪಡೆಯಲಾಗಿದೆ.

RELATED ARTICLES

Related Articles

a

TRENDING ARTICLES