Monday, December 23, 2024

ಕಿಚ್ಚ & ಮಮ್ಮುಕ ಚಿತ್ರಗಳ ಬಗ್ಗೆ ನಂದಕಿಶೋರ್ ಖಾಸ್​ಬಾತ್

ರಾಣ ನಂತ್ರ ವಾಟ್ ನೆಕ್ಸ್ಟ್ ನಂದಕಿಶೋರ್ ಅಂದ್ರೆ ಕಿಚ್ಚ ಸುದೀಪ್, ಮೋಹಲ್​ಲಾಲ್ ಅಂತಹ ಸೂಪರ್ ಸ್ಟಾರ್​ಗಳ ಕಡೆ ಬೆರಳು ತೋರಿಸ್ತಿದ್ದಾರೆ ವಿಕ್ಟರಿ ಡೈರೆಕ್ಟರ್ ನಂದು. ಯೆಸ್.. ಅಪ್ಪು- ಅಕ್ಷಯ್​ಕುಮಾರ್ ಸಿನಿಮಾದ ಕನಸು ಭಗ್ನಗೊಂಡ ಬಳಿಕ, ಅಂಥದ್ದೇ ಸೂಪರ್ ಸ್ಟಾರ್ಸ್​ ಜೊತೆ ಮಗಧೀಗ ಶೈಲಿಯ ಸಿನಿಮಾ ಮಾಡೋಕೆ ಮುಂದಾಗಿದ್ದಾರೆ. ಈ ಬಗ್ಗೆ ನಮ್ಮ ಫಿಲ್ಮಿ ಪವರ್ ಟೀಂಗೆ ಎಕ್ಸ್​ಕ್ಲೂಸಿವ್ ಆಗಿ ಮಾತನಾಡಿದ್ದಾರೆ.

  • ರಾಣ ರಿಲೀಸ್​ಗೆ ದಿನಗಣನೆ.. ಮಗಧೀರ ಶೈಲಿಯಲ್ಲಿ ವೃಷಭ
  • ಕನಸಾಗೇ ಉಳಿದ ಅಕ್ಷಯ್ ಕುಮಾರ್- ಅಪ್ಪು ಸಿನಿಮಾ ಕನಸು
  • ಸುದೀಪ್​ಗಾಗಿ ಸಿದ್ಧವಾಗ್ತಿದೆ ಹೊಸ ಕಥೆ.. ನಂದು ಫುಲ್ ಬ್ಯುಸಿ..!

ವಿಕ್ಟರಿ ಸಿನಿಮಾದ ವಿಕ್ಟರಿ ಭಾರಿಸಿದ ನಿರ್ದೇಶಕ ನಂದಕಿಶೋರ್, ಸಹೋದರ ತರುಣ್ ಸುಧೀರ್​ನ ಬಿಟ್ಟು ಸೆಪರೇಟ್ ಆಗಿ ಆಫೀಸ್ ಮಾಡಿದ್ದಾರೆ. ಹೊಸ ಆಫೀಸ್​ನಲ್ಲಿ ಅವ್ರ ವಿಕ್ಟರಿ, ಅಧ್ಯಕ್ಷ ಚಿತ್ರದಿಂದ ಇದೇ ತಿಂಗಳು 11ಕ್ಕೆ ರಿಲೀಸ್ ಆಗ್ತಿರೋ ಶ್ರೇಯಸ್​ರ ರಾಣ ಸಿನಿಮಾವರೆಗಿನ ಎಲ್ಲಾ ಸಿನಿಮಾಗಳು ವಾಲ್ ಆಫ್ ಫ್ರೇಮ್ ಸೇರಿವೆ. ಆದ್ರೆ ಅವುಗಳ ಮಧ್ಯೆ ಗಮನ ಸೆಳೆದದ್ದು ಮಾತ್ರ ವೃಷಭ ಅನ್ನೋ ಮೋಹಲ್​ಲಾಲ್​ರ ಹೊಸ ಸಿನಿಮಾ ಲುಕ್​ನ ವಾಲ್ ಫ್ರೇಮ್.

ಯೆಸ್.. ಇದು ಮಗಧೀರ ಶೈಲಿಯ ಹಿಂದಿನ ಜನ್ಮ ಹಾಗೂ ಇಂದಿನ ಜನ್ಮಗಳಿಗೆ ಲಿಂಕ್ ಇರೋ ತೆಲುಗು- ಮಲಯಾಳಂ ಸಿನಿಮಾ ಆಗಲಿದೆ. ಮೋಹಲ್ ಲಾಲ್ ಹಾಗೂ ವರುಣ್ ತೇಜ್ ಲೀಡ್​ನಲ್ಲಿ ಕಾಣಸಿಗಲಿದ್ದು, ಮೆಗಾ ಮಲ್ಟಿಸ್ಟಾರ್ ಸಿನಿಮಾಗೆ ಬಾಲಿವುಡ್ ಪ್ರೊಡಕ್ಷನ್ ಹೌಸ್ ಹಣ ಹೂಡುತ್ತಿದೆ. ಅಲ್ಲದೆ, ಗಾಡ್​ಫಾದರ್ ಕಿಚ್ಚ ಜೊತೆಗೂ ಸಿನಿಮಾಗಾಗಿ ಕಥೆ ರೂಪಿಸ್ತಿದ್ದಾರೆ ನಂದಕಿಶೋರ್.

ಹಾಗಾದ್ರೆ ವೃಷಭ ಹೇಗಿರಲಿದೆ..? ಸುದೀಪ್ ಡೇಟ್ಸ್ ಮೊದಲು ಯಾರಿಗೆ ಅನ್ನೋದ್ರ ಜೊತೆಗೆ ಅಕ್ಷಯ್ ಕುಮಾರ್- ಕರ್ನಾಟಕರತ್ನ ಅಪ್ಪು ಕಾಂಬೋ ಸಿನಿಮಾನ ಕನಸು ಭಗ್ನವಾದ ವಿಷಯಗಳ ಬಗ್ಗೆ ಎಕ್ಸ್​ಕ್ಲೂಸಿವ್ ಆಗಿ ಮಾತನಾಡಿದ್ದಾರೆ ನಂದಕಿಶೋರ್.

ಒಟ್ಟಾರೆ ಕಿಚ್ಚನ ಆಯ್ಕೆ ಯಾವುದು..? ಆರಂಭ ಎಂದು ಅನ್ನೋದು ಸದ್ಯದಲ್ಲೇ ಗೊತ್ತಾಗಲಿದೆ. ಇನ್ನು ಮುಂದಿನ ವರ್ಷ ಮೋಹನ್​ಲಾಲ್​ರ ವೃಷಭ ಸಿನಿಮಾ ಕೂಡ ಸೆಟ್ಟೇರಲಿದ್ದು, ಮರಕ್ಕಾರ್ ರೀತಿ ಫ್ರೆಶ್ ಫೀಲ್ ಕೊಡಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES