Sunday, December 22, 2024

ಅಲೋಕ್​ ಕುಮಾರ್​ ವಿರುದ್ಧ ಶಾಸಕ ರೇಣುಕಾಚಾರ್ಯ ವಾಗ್ದಾಳಿ

ದಾವಣಗೆರೆ: ಪೊಲೀಸ್​ ಅಲೋಕ್​ ಕುಮಾರ್​ ಯಾರ್ರೀ ಅವ್ನು, ಕಾರು ಓವರ್​ ಸ್ಪೀಡ್​ ಯಾರ್ರೀ ಅವರು ತೀರ್ಮಾನ ಮಾಡಲು ಎಂದು ಶಾಸಕ ಎಂ.ಪಿ ರೇಣುಕಾಚಾರ್ಯ ಅವರು ತಮ್ಮ ಸಹೋದರ ಪುತ್ರ ಸಾವು ಪ್ರಕರಣ ಕುರಿತು ಮಾತನಾಡಿದ್ದಾರೆ.

ಇತ್ತೀಚಿಗೆ ರೇಣುಕಾಚಾರ್ಯ ಸಹೋದರನ ಪುತ್ರ ಕಾರು ಕಾಲುವೆಯಲ್ಲಿ ಬಿದ್ದು ಮೃತಪ್ಪಟ್ಟಿದ್ದರು. ಇದಕ್ಕೆ ಕಾರು ಓವರ್​ ಸ್ಪೀಡ್​ ಎಂದು ಅಲೋಕ್​ ಕುಮಾರ್​ ಹೇಳಿದ್ದಾರೆ ಎಂದು ಮಾತನಾಡಿ ರೇಣುಕಾಚಾರ್ಯ, ಯಾರ್ರೀ ಅವರು ತೀರ್ಮಾನ ಮಾಡಲು. ಮನೆಗೆ ಬಂದು ನಮ್ಮನ್ನು ವಿಚಾರಣೆ ಮಾಡಿದ್ದಾರಾ? ಯಾವ ಕಾರಣಕ್ಕೂ ಚಂದ್ರಶೇಖರ್​ಗೆ ಅಪಘಾತ ಆಗಿಲ್ಲ ಎಂದರು.

ನಾನು ರಾಜ್ಯ ಸರ್ಕಾರದ ವಿರುದ್ಧ ಮಾತನಾಡುವುದಿಲ್ಲ. ಪೊಲೀಸ್ ಇಲಾಖೆಯ ಲೋಪದ ಬಗ್ಗೆ ಮಾತನಾಡುತ್ತೇನೆ. ಸಿಎಂ, ಗೃಹ ಸಚಿವರ ಮೇಲೆ ಸಂಪೂರ್ಣ ವಿಶ್ವಾಸವಿದೆ. ಯಾರೋ ಶಿಖಂಡಿಗಳು ಇಂತಹ ಕೃತ್ಯ ಎಸಗಿದ್ದಾರೆ. ಚಂದ್ರು ಕಾಣೆಯಾದ ನಂತರದ 5 ದಿನ ಮೌನವಾಗಿದ್ದೆ, ಇನ್ನೂ ನಾನು ಸಹಿಸಲ್ಲ. ನಾನು ಮುಂದಿಟ್ಟ ಹೆಜ್ಜೆ ಹಿಂದೆ ತೆಗೆಯುವುದಿಲ್ಲ. ರೇಣುಕಾಚಾರ್ಯ ಮತ್ತೊಂದು ಮುಖ ಎಲ್ಲರಿಗೂ ಗೊತ್ತಿದೆ ಎಂದು ಘಟನಾ ಸ್ಥಳಕ್ಕೆ ಭೇಟಿ ನಂತರ ರೇಣುಕಾಚಾರ್ಯ ಹೇಳಿದ್ದಾರೆ.

RELATED ARTICLES

Related Articles

TRENDING ARTICLES