Thursday, January 23, 2025

ಮದ್ಯದ ಅಮಲಿನಲ್ಲಿ ಮೆಟ್ರೋ ನಿಲ್ದಾಣದಲ್ಲಿ ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿ.!

ದೆಹಲಿ: ದೆಹಲಿಯ ಮೆಟ್ರೋ ನಿಲ್ದಾಣದಲ್ಲಿ ನಡೆದ ಅತ್ಯಂತ ಮುಜುಗರದ ಘಟನೆಯ ವಿಡಿಯೋ ಇದೀಗ ಟ್ವಿಟರ್‌ನಲ್ಲಿ ವೈರಲ್ ಆಗಿದೆ.

ರೈಲಿಗಾಗಿ ಕಾಯುತ್ತಿರುವಾಗ ಒಬ್ಬ ವ್ಯಕ್ತಿ ರೈಲು ಬರುವ ಸುರಂಗ ಮಾರ್ಗದಲ್ಲಿ ಮೂತ್ರ ವಿಸರ್ಜಿಸುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ದೆಹಲಿಯ ಮಾಳವೀಯ ನಗರ ಮೆಟ್ರೋ ನಿಲ್ದಾಣ ಎಂದು ಹೇಳಲಾಗಿದೆ. ಈ ವಿಡಿಯೋವನ್ನ ಯುವಕನೊಬ್ಬ ಪೋಸ್ಟ್​ ಮಾಡಿ ದೆಹಲಿ ಮೆಟ್ರೋ ಆಡಳಿತ ಮಂಡಳಿಗೆ (DMRC) ವರದಿ ಮಾಡಿದ್ದಾನೆ.

ಬಹುಶಃ ಇದು ದೆಹಲಿ ಮೆಟ್ರೋದಲ್ಲಿ ಮೊದಲ ಬಾರಿಗೆ ಸಂಭವಿಸಿರಬಹುದು. ವಾಟ್ಸಾಪ್‌ನಲ್ಲಿ ಈ ವೀಡಿಯೊವನ್ನು ಸ್ವೀಕರಿಸಲಾಗಿದೆ. ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ಎಂದು ವ್ಯಕ್ತಿ ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ಮಾಳವೀಯನಗರ ಮೆಟ್ರೋ ನಿಲ್ದಾಣದ ಮೆಟ್ರೋ ರೈಲು ಹಳಿ ಮೇಲೆ ಮೂತ್ರ ವಿಸರ್ಜನೆ ಮಾಡಿದ ಯುವಕನ ಮುಜುಗರದ ಘಟನೆ ವಾರದ ಹಿಂದೆ ನಡೆದಿದೆ ಎಂದು ವರದಿಯಾಗಿದೆ. ವೀಡಿಯೋದಲ್ಲಿ ಆರೋಪಿಯ ಮುಖ ಬಯಲಾಗಿದ್ದರೂ ಈವರೆಗೂ ಆತನನ್ನು ಬಂಧಿಸಿಲ್ಲ. ವೀಡಿಯೋ ರೆಕಾರ್ಡ್ ಮಾಡುತ್ತಿರುವವರು “ಎಲ್ಲಿ ಮೂತ್ರ ಮಾಡುತ್ತಿದ್ದೀರಿ? ಇಲ್ಲಿ ಏಕೆ ಮೂತ್ರ ಮಾಡುತ್ತಿದ್ದೀರಿ” ಎಂದು ಕೇಳುತ್ತಿರುವುದು ಈ ವಿಡಿಯೋದಲ್ಲಿ ಕೇಳಿಬರುತ್ತಿದೆ. ಆಗ ಮೂತ್ರ ವಿಸರ್ಜನೆ ಮಾಡುತ್ತಿರವ ವ್ಯಕ್ತಿ ಉತ್ತರಿಸಿ, ನಾನು ಸ್ವಲ್ಪ ಹೆಚ್ಚು ಕುಡಿದಿದ್ದೇನೆ ಎಂದು ಹೇಳಿದ್ದಾನೆ.

RELATED ARTICLES

Related Articles

TRENDING ARTICLES