Monday, December 23, 2024

ಪ್ರೇಯಸಿ ಅಥಿಯಾ ಶೆಟ್ಟಿ ಬರ್ತಡೇಗೆ ವಿಶ್​ ಮಾಡಿದ ಕೆ.ಎಲ್​ ರಾಹುಲ್​.!

ಮುಂಬೈ: ಬಾಲಿವುಡ್​ ನಟ ಸುನಿಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ಇಂದು 30 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಹೀಗಾಗಿ ಟೀಂ ಇಂಡಿಯಾ ಸ್ಪೋಟಕ ಬ್ಯಾಟ್ಸಮನ್​ ಕೆ.ಎಲ್​ ರಾಹುಲ್​ ತನ್ನ ಗರ್ಲ್​ ಫ್ರೇಂಡ್​ ಅಥಿಯಾಗೆ ಶುಭಾಶಯ ಕೋರಿದ್ದಾರೆ.

ಅಥಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾಳೆ ಇದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಶೀಘ್ರದಲ್ಲೇ ಈ ಜೋಡಿ ಹಸೆಮಣೆ ಏರಲಿದ್ದು, ಹಾಗಾಗ ಈ ಜೋಡಿ ಬೇರೆ ಬೇರೆ ದೇಶಗಳಲ್ಲಿ ಕಾಣಿಸಿಕೊಳ್ಳುವ ತಮ್ಮ ಪೊಟೋಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ ಮಾಡುತ್ತಿದ್ದಾರೆ.

ಇಂದು ಅಥಿಯಾ ಹುಟ್ಟು ಹಬ್ಬ ಹಿನ್ನಲೆಯಲ್ಲಿ ಕೆಎಲ್​ ರಾಹುಲ್ ಬರ್ತಡೇ ಗೆ ವಿಶ್ ಮಾಡಿ, ನನ್ನ ಪ್ರೀತಿಯ ಎಂದು ಲವ್​ ಚಿಹ್ನೆ ಇಮೋಜ್​ ಹಾಕಿ ಜನ್ಮದಿನದ ಶುಭಾಶಯಗಳು ಕೋರಿದ್ದಾರೆ. ಅಲ್ಲದೇ, ನೀವು ಎಲ್ಲವನ್ನೂ ಉತ್ತಮಗೊಳಿಸುತ್ತೀರಿ ಎಂದು ಇಬ್ಬರು ಜತೆಗೆ ಇರುವ ಕ್ಯೂಟ್​ ಪೊಟೋ ಅಪ್ಲೋಡ್​ ಮಾಡಿ ಟ್ವೀಟ್ ಮಾಡಿದ್ದಾರೆ.

ಇತ್ತೀಚಿಗಷ್ಟೇ ಕೆ.ಎಲ್ ರಾಹುಲ್ ಜರ್ಮನಿಯಲ್ಲಿ ಮೊಣಕಾಲು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಈ ವೇಳೆ ರಾಹುಲ್ ಪ್ರೇಯಸಿ ಅಥಿಯಾ ಶೆಟ್ಟಿ ಖುದ್ದು ಮುಂದೆ ನಿಂತು ರಾಹುಲ್ ಆರೈಕೆ ಮಾಡಿದ್ದರು.

RELATED ARTICLES

Related Articles

TRENDING ARTICLES