Wednesday, December 25, 2024

ಹುಬ್ಬಳ್ಳಿ, ಮೈಸೂರಿನಲ್ಲಿ NIA ದಾಳಿ

ಹುಬ್ಬಳ್ಳಿ : ರಾಜ್ಯದಲ್ಲಿ NIA ದಾಳಿ ಬೇಟೆ ಮತ್ತೆ ಶುರುವಾಗಿದೆ. ಹುಬ್ಬಳ್ಳಿಯಲ್ಲಿ SDPI ಮುಖಂಡ ಇಸ್ಮಾಯಿಲ್ ನಾಲಬಂದ್ ಮನೆ ಮೇಲೆ‌ NIA ದಾಳಿ ಮಾಡಿ ಪರಿಶೀಲನೆ ನಡೆಸಿದೆ.

ಹಳೇ‌ ಹುಬ್ಬಳ್ಳಿಯ ನುರಾನಿ ಪ್ಲಾಟ್​ನಲ್ಲಿರುವ ಇಸ್ಮಾಯಿಲ್​​​ಗೆ ಬೆಳ್ಳಂ ಬೆಳಗ್ಗೆ NIA ಭರ್ಜರಿ ಶಾಕ್ ನೀಡಿದೆ. ಕಸಬಾಪೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಕಚೇರಿಯ ಮೇಲೂ ಸಹ ದಾಳಿ ನಡೆಸಿ, ಪರಿಶೀಲನೆ ನಡೆಸಿದ್ದಾರೆ.

ಬೆಳಗಿನ ಜಾವ 4 ಗಂಟೆಗೆ 10 ಜನರ ತಂಡ ತೆರಳಿ ಪರಿಶೀಲಿಸಿದೆ. ಅಂತೆಯೇ ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ NIA ದಾಳಿ ನಡೆಸಿದೆ. PFI ಮಾಜಿ ಕಾರ್ಯದರ್ಶಿ ಸುಲೈಮಾನ್​​ನನ್ನು ಬಂಧಿಸಲಾಗಿದೆ. ಅಜ್ಞಾತ ಸ್ಥಳದಲ್ಲಿ ಸುಲೈಮಾನ್ ವಿಚಾರಣೆ ನಡೆಸಲಾಗ್ತಿದೆ.

RELATED ARTICLES

Related Articles

TRENDING ARTICLES