Sunday, December 22, 2024

ಮುದ್ರಣ ಕಾಶಿಯಲ್ಲಿ ಬಿಗ್ ಗೋಲ್ಡ್ ಧೋಖಾ

ಗದಗ : ಮೋಸ ಹೋಗೋರು ಇರೋವರೆಗೂ, ಮೋಸ ಮಾಡೋರು ಇದ್ದೇ ಇರ್ತಾರೆ ಅಂತ ಬಡಕೊಂಡ ಸಾಕಾಯಿತು. ಆದ್ರೆ ಇಂದಿಗೂ ನಮ್ಮ ಜನ ಇಂಥ ಪಾಠ ಕಲಿಯೋವರೆಗೂ ಸರಿಹೋಗೋತರಃ‌ ಕಾಣ್ತಿಲ್ಲ. ಹೌದು..ಗದಗನಲ್ಲಿ ದೊಡ್ಡ ನಕಲಿ ಚಿನ್ನದ ಧೋಖಾವೊಂದು ನಡೆದಿದೆ.ಎರೆಡು ರಾಷ್ಟ್ರೀಯ ಬ್ಯಾಂಕುಗಳಲ್ಲಿ ನಕಲಿ ಚಿನ್ನ ಅಡವಿಟ್ಟು ಕೋಟ್ಯಾಂತರ ಸಾಲ ಪಡೆದು ಭಾರಿ ವಂಚನೆ ಮಾಡಿದ್ದಾರೆ. ಇಂತಹ ದೊಡ್ಡ ಗೋಲ್ಮಾಲ್ ಮೂಲಕ ಬ್ಯಾಂಕ್ ಅಧಿಕಾರಿಗಳಿಗೇನೆ ಟೋಪಿ ಹಾಕಿರೋ ಭೂಪ,ನಕಲಿ ಚಿನ್ನದ ಅಸಲಿ ಮಾಸ್ಟರ್ ಮೈಂಡ್ ಗದಗ ನಿವಾಸಿ ದತ್ತಾತ್ರೆಯ ಬಾಕಳೆ. ನಗರದ ಐಡಿಬಿಐ ಬ್ಯಾಂಕನಲ್ಲಿ ನಕಲಿ ಚಿನ್ನ ಅಡವಿಟ್ಟು 1 ಕೋಟಿ 43 ಲಕ್ಷ, 34 ಸಾವಿರ ರೂಪಾಯಿ ಹಣ ಸಾಲ ಪಡೆದಿದ್ದ ದತ್ತಾತ್ರೇಯ ಬಾಕಳೆ ಸೇರಿದಂತೆ ಒಟ್ಟು 17 ಜನರ ವಿರುದ್ಧ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಅಸ್ಸಾಮಿ‌ ಕಥೆ ಇಷ್ಟಕ್ಕೆ ಮುಗಿದಿಲ್ಲ. ನಗರದ ಯೂನಿಯನ್ ಬ್ಯಾಂಕನಲ್ಲೂ ನಕಲಿ ಚಿನ್ನ ಇಟ್ಟು 1 ಕೋಟಿ 57 ಲಕ್ಷ 66 ಸಾವಿರ ಸಾಲ ಪಡೆದಿದ್ದು ಈ ಬಗ್ಗೆ ತನಿಖೆ ಕೈಗೊಂಡಿದ್ದೇವೆ ಅಂತ ಎಸ್ಪಿ ಶಿವಪ್ರಕಾಶ ದೇವರಾಜು ಹೇಳಿದ್ದಾರೆ.

ವಂಚನೆ ಕಿಂಗ್ ಪಿನ್ ದತ್ತಾತ್ರೆಯ ಬಾಕಳೆ,ಗದಗ ಬೆಟಗೇರಿ ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಮಲಮಗನಾಗಿದ್ದು,ಇದೇ ವರ್ಷದ ಏಪ್ರೀಲ್ ತಿಂಗಳಿಂದ ಜೂನ್ ವರೆಗೆ ತನ್ನ ಸಹಚರರ ಹೆಸರಲ್ಲಿ ಬ್ಯಾಂಕ್ ನಲ್ಲಿ ನಕಲಿ ಚಿನ್ನದ ಆಭರಣ ಅಡವಿಟ್ಟು, ಕೋಟ್ಯಾಂತರ ರೂ.ಸಾಲ ಪಡೆದಿದ್ದಾನೆ.ಇನ್ನು ದತ್ತಾತ್ರೇಯಗೆ ಐಡಿಬಿಐ ಬ್ಯಾಂಕ್ ನಲ್ಲಿ ಚಿನ್ನ ಚೆಕ್ ಮಾಡುವ ಸುರೇಶ್ ರೇವಣಕರ ಸಾಥ್ ನೀಡಿದ್ದಾನೆ.ದತ್ತಾತ್ರೇಯ‌& ಗ್ಯಾಂಗ್ ತರುತ್ತಿದ್ದ ನಕಲಿ ಚಿನ್ನಕ್ಕೆ 22 ಕ್ಯಾರೆಟ್ ಚಿನ್ನ ಅಂತಾ ಸುರೆಶ್ ಸರ್ಟಿಫಿಕೇಟ್ ಕೊಡ್ತಿದ್ದನಂತೆ. ಹೀಗೆ ಪ್ರಮಾಣ ಪತ್ರ ಪಡೆದು, ಎರೆಡು ತಿಂಗಳ ಅಂತರದಲ್ಲಿ, ಬೇರೆ ಬೇರೆ ಹೆಸರಲ್ಲಿ ಐಡಿಬಿಐ ಬ್ಯಾಂಕನಲ್ಲಿ ಒಟ್ಟು 4,871.04 ಗ್ರಾಂ ಹಾಗೂ ಯೂನಿಯನ್ ಬ್ಯಾಂಕನಲ್ಲಿ, 4983.2 ಗ್ರಾಂ ಚಿನ್ನ ಅಡವಿಟ್ಟು ಕೋಟ್ಯಾಂತರ ರೂ. ಸಾಲ ಪಡೆದಿದ್ದಾರೆ.ಸೆಪ್ಟೆಂಬರ್ ತಿಂಗಳಲ್ಲಿ ಬ್ಯಾಂಕನಲ್ಲಿ ಇಟ್ಟಿದ್ದ ಚೆಕ್ ಮಾಡೋ ವೇಳೆ, ಚಿನ್ನಾಭರಣ‌ ನಕಲಿ ಅನ್ನೋದು ಪತ್ತೆಯಾಗಿದೆ.ನಂತರ ವಂಚನೆ ಬಗ್ಗೆ ಮಾಹಿತಿ ಕಲೆಹಾಕಿ ಬ್ಯಾಂಕ್ ಮ್ಯಾನೇಜರ್ ಪರಶುರಾಮ ರೊಟ್ಟಿಗವಾಡ ಬ್ಯಾಂಕ್ ಮೇಲಾಧಿಕಾರಿಗಳ ಅನುಮತಿ ಪಡೆದು ಸದ್ಯ ಪೊಲಿಸ್ ಠಾಣೆಗೆ ದೂರು ನೀಡಿದ್ದಾರೆ.

ಕಿಂಗಪಿನ್ ದತ್ತಾತ್ರೇಯ ಈಗಾಗಲೇ ಬೆಂಗಳೂರಿನ ವಂಚನೆ ಪ್ರಕರಣದಲ್ಲಿ ಅಂದರ್ ಆಗಿದ್ದು,ಪ್ರಕರಣದಲ್ಲಿ ಭಾಗಿಯಾಗಿರೋ ಉಳಿದ 17 ಜನರ ವಿಚಾರಣೆಗೆ ತಯಾರು ನಡೆಸಿದ್ದಾರೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ನಕಲಿ ಚಿನ್ನವಿಟ್ಟು ಕೋಟ್ಯಾಂತರ ಹಣ‌ ಸಾಲ ನೀಡುವಾಗ, ಮೇಲಾಧಿಕಾರಿಗಳು ಖುದ್ದು ಪರಿಶೀಲನೆ ಮಾಡ್ತಾರೆ. ಆದ್ರೆ ಇಲ್ಲಿ ಬ್ಯಾಂಕ್ ಅಧಿಕಾರಿಗಳೇ ಶಾಮೀಲಾದ್ರಾ,ಅಥವಾ ಆತ್ಮೀಯ ಅಂತ ದಾಖಲಾತಿ ಕೊಟ್ಟೋರೇ ಬಲಿಪಶುಗಳಾದ್ರಾ ಅನ್ನೋದು ತನಿಖೆಯಿಂದಷ್ಟೇ‌ ಬಯಲಾಗಬೇಕಿದೆ.

ಮಹಲಿಂಗೇಶ್ ಹಿರೇಮಠ. ಪವರ್ ಟಿವಿ.ಗದಗ

RELATED ARTICLES

Related Articles

TRENDING ARTICLES