Monday, December 23, 2024

ಸಮಿಫೈನಲ್​ಗೆ ಲಗ್ಗೆ ಹಾಕಿದ ಇಂಗ್ಲೆಂಡ್ ತಂಡ; ವಿಶ್ವಕಪ್ ಟೂರ್ನಿಯಿಂದ ಆಸ್ಟ್ರೇಲಿಯಾ ಔಟ್​​.!

ಆಸ್ಟ್ರೇಲಿಯಾ; ಆಸ್ಟ್ರೇಲಿಯಾದ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ವಿಶ್ವಕಪ್​ ಟಿ-20 ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಇಂಗ್ಲೆಂಡ್​ ಜಯಗಳಿಸಿದೆ. ಈ ಮೂಲಕ ಇಂಗ್ಲೆಂಡ್​ ತಂಡ ಸಮಿಫೈನಲ್​ಗೆ ಲಗ್ಗೆ ಹಾಕಿದೆ.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 141 ರನ್​ ಕಲೆಹಾಕಿತು. ಈ ಗುರಿ ಬೆನ್ನತ್ತಿದ ಇಂಗ್ಲೆಂಡ್​ ತಂಡ 19.4 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 144 ರನ್​ ಕಲೆಹಾಕಿತು. ಈ ಮೂಲಕ ಇಂಗ್ಲೆಂಡ್​ ತಂಡ 4 ವಿಕೆಟ್​ಗಳಿಂದ ಜಯಸಾಧಿಸಿತು.

ಈಗಾಗಲೇ ಶ್ರೀಲಂಕಾ ತಂಡ ಈ ಪಂದ್ಯ ಗೆಲುವು ಸಾಧಿಸಿದ್ದರು ವಿಶ್ವಕಪ್​ ಟೂರ್ನಿಯಿಂದ ಹೊರಬಿದ್ದಿತ್ತು. ಆದರೆ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್​ ತಂಡದ ನಡುವೆ ಪೈಪೋಟಿ ಏರ್ಪಟಿತ್ತು. ಆಸ್ಟ್ರೇಲಿಯಾ ತಂಡ 5 ಪಂದ್ಯವಾಡಿ 7 ಪಾಯಿಂಟ್ಸ್​ ಹೊಂದಿತ್ತು. ಇಂಗ್ಲೆಂಡ್​ ತಂಡವು 5 ಪಂದ್ಯವು 7 ಪಾಯಿಂಟ್ಸ್​ ಹೊಂದಿತ್ತು. ಆದರೆ, ರನ್​ ರೇಟ್​ ಆಧಾರ ಮೇಲೆ ಇಂಗ್ಲೆಂಡ್​ ತಂಡ ವಿಶ್ವಕಪ್​ನ ಎ ಗುಂಪಿನಲ್ಲಿ ಸಮಿಫೈನಲ್​ಗೆ ಲಗ್ಗೆ ಹಾಕಿದೆ. ಈಗಾಗಲೇ ನ್ಯೂಜಿಲೆಂಡ್​ ತಂಡ ಎ ಗುಂಪಿನಿಂದ ಸಮಿಫೈನಲ್​ಗೆ ಲಗ್ಗೆಹಾಕಿದೆ.

ವಿಶ್ವಕಪ್​ನ ಎ ಹಾಗೂ ಬಿ ಗ್ರೂಪ್​ನಲ್ಲಿ ಮೊದಲು ಎರಡು ಸ್ಥಾನ ಪಡೆದುಕೊಂಡ ಕ್ರಿಕೆಟ್​ ತಂಡಗಳು ಸಮಿಫೈನಲ್​ಗೆ ಹೋಗುತ್ತವೆ. ಅದೇ ರೀತಿ ಎ ಗ್ರೂಪ್​ನಲ್ಲಿ ಎಲ್ಲಾ ಪಂದ್ಯಗಳು ಮುಗಿದಿದ್ದು, ಮೊದಲ ಸ್ಥಾನದಲ್ಲಿ ನ್ಯೂಜಿಲೆಂಡ್ ಹಾಗೂ ಎರಡನೇ ಸ್ಥಾನದಲ್ಲಿ ಇಂಗ್ಲೆಂಡ್​ ತಂಡ ಇದೆ.

RELATED ARTICLES

Related Articles

TRENDING ARTICLES