Friday, January 10, 2025

ಮಂಗಳೂರಿನಲ್ಲಿ ಬಿಜೆಪಿಯನ್ನ ಎಲ್ಲಿಗೆ ತಂದು ನಿಲ್ಲಿಸುತ್ತೇವೆ ಕಾದು ನೋಡಿ; ಮಧು ಬಂಗಾರಪ್ಪ

ಚಿಕ್ಕಮಗಳೂರು: ಮಂಗಳೂರಿನಲ್ಲಿ ನಾವು ಬಿಜೆಪಿಯನ್ನ ಎಲ್ಲಿಗೆ ತಂದು ನಿಲ್ಲಿಸುತ್ತೇವೆ ನೋಡಿ ಎಂದು ಕಾಂಗ್ರೆಸ್ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಮಧುಬಂಗಾರಪ್ಪ ಬಿಜೆಪಿಗೆ ಓಪನ್ ಚಾಲೆಂಜ್ ಹಾಕಿದ್ದಾರೆ.

ಬಿಜೆಪಿ ಜಾತಿ-ಧರ್ಮಕ್ಕೆ ದ್ರೋಹ ಮಾಡಿದ್ದು, 80 ಪರ್ಸೆಂಟ್ ಹಿಂದೂಗಳಿಗೆ ಮೋಸ ಮಾಡಿದ್ದಾರೆ ಎಂದರು. ಚಿಕ್ಕಮಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಮಂಗಳೂರಿನಲ್ಲಿ ಬಿಜೆಪಿ-ಸಂಘಪರಿವಾರ ಹಾಗೂ ವಿ.ಎಚ್.ಪಿಯವರೇ ಮುಖ್ಯ. ಅಲ್ಲಿ ಬೆಂಕಿ ಹಚ್ಚುವವರು ಅವರೇ. ಶೇ 80ರಷ್ಟು ಮುಸ್ಲಿಮರಿಗೆ ಮೋಸ ಮಾಡಿದ್ದು ಬಿಜೆಪಿಯವರು. ಆಜಾನ್ ಕೂಗಿನಿಂದ ಯಾರೂ ಹೃದಯಾಘಾತವಾಗಿ ಸತ್ತಿಲ್ಲ ಎಂದರು.

ಆದರೆ, ಹಿಂದೂಗಳಿಗೆ ಏಕೆ ಬಿಜೆಪಿ ಮೇಲೆ ಸಿಟ್ಟು-ದ್ವೇಷ ಅಂದರೆ, ಅವರದ್ದು ಆಫ್ ಮಾಡಿಸಲು ಹೋಗಿ ಹಿಂದೂಗಳ ಮೈಕ್ ಆಫ್ ಮಾಡಿಸಿದ್ದಾರೆ. ಜಾತಿ-ಧರ್ಮಕ್ಕೆ ದ್ರೋಹ ಮಾಡಿದವರು ಬಿಜೆಪಿಯವರು. ನಾನು ಹೇಳುವುದು ಇಷ್ಟೆ. ಮಂಗಳೂರಿನಲ್ಲಿ ಕಾಂಗ್ರೆಸ್ ಗೆದ್ದಿರುವುದು ಒಂದೇ ಒಂದು ಸೀಟು. ಆದರೆ, ಈ ಬಾರಿ ಮಂಗಳೂರಿನಲ್ಲಿ ಬಿಜೆಪಿಯವರನ್ನ ಎಲ್ಲಿಗೆ ತಂದು ನಿಲ್ಲಿಸುತ್ತೇವೆ ನೋಡಿ ಎಂದು ಬಿಜೆಪಿಗೆ ಓಪನ್ ಚಾಲೆಂಜ್ ಹಾಕಿದ್ದಾರೆ.

RELATED ARTICLES

Related Articles

TRENDING ARTICLES