Monday, December 23, 2024

ದಿನಕ್ಕೊಂದು ಪ್ರಾಣ ಹೋಗ್ತಿದ್ರು ಎಚ್ಚೆತ್ತುಕೊಳ್ಳದ ಬಿಬಿಎಂಪಿ

ಬೆಂಗಳೂರು : ಜಾಲಹಳ್ಳಿಯ ಗಂಗಮ್ಮ ರಸ್ತೆಯಲ್ಲಿ ಗುಂಡಿಗೆ ಬೈಕ್ ಸವಾರ ಬಿದ್ದು ಸಾವು ಬದುಕಿನ ನಡುವೆ ಹೋರಾಟ ನಡೆಸ್ತಿರುವ ಘಟನೆ ಸಿಲಿಕಾನ್​ ಸಿಟಿಯಲ್ಲಿ ನಡೆದಿದೆ.

ಬಿಬಿಎಂಪಿಗೆ ಬೆಂಗಳೂರಲ್ಲಿ ಇನ್ನೆಷ್ಟು ಬಲಿ ಬೇಕು? ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಕೋಮದಲ್ಲಿ ವ್ಯಕ್ತಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸ್ತಿದ್ದಾನೆ. ವಿದ್ಯಾರಣ್ಯಪುರದ ನಿವಾಸಿಯಾಗಿರುವ 37 ವರ್ಷದ ಸಂದೀಪ್, ಗುಂಡಿಗೆ ಬಿದ್ದು ತಲೆಗೆ ತೀವ್ರವಾದ ಗಾಯವಾಗಿರುವ ಪರಿಣಾಮ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ.

ಮಂಗಳವಾರ ರಾತ್ರಿ 9.30 ಸ್ನೇಹಿತರ ಜೊತೆ ಕ್ರಿಕೆಟ್ ಆಟ ಮುಗಿಸಿ ಮನೆಗೆ ತೆರಳುತ್ತಿದ್ರು, ರಸ್ತೆಯಲ್ಲಿದ್ದ ಯಮಸ್ವರೂಪಿ ಗುಂಡಿ ಕಾಣಿಸದೇ ಗುಂಡಿಗೆ ಬಿದ್ದ ಪರಿಣಾಮ ತಲೆಗೆ ತೀವ್ರ ಗಾಯವಾಗಿದೆ. ವ್ಯಕ್ತಿಯನ್ನ ತಕ್ಷಣ ಹೆಚ್.ಎಮ್.ಟಿ. ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದ್ರೆ ಹೆಚ್.ಎಂ.ಟಿ.ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಆಸ್ಪತ್ರೆ ಸಿಬ್ಬಂದಿಗಳು ನಿರಾಕರಿಸಿದ ಹಿನ್ನಲೆಯಲ್ಲಿ ಹೆಬ್ಬಾಳದ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ತಲೆಗೆ ತೀವ್ರವಾಗಿ ಗಾಯವಾದ್ರಿಂದ ವ್ಯಕ್ತಿಗೆ ಆಪರೇಷನ್ ಮಾಡಿ ಕೋಮಾದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ

RELATED ARTICLES

Related Articles

TRENDING ARTICLES