Wednesday, January 22, 2025

ಅಂಬಾರಿ ಹೊರುವ ಆನೆ ಅಭಿಮನ್ಯುವಿಗೆ ತೀವ್ರ ಅನಾರೋಗ್ಯ

ಚಿಕ್ಕಮಗಳೂರು: ಇತ್ತೀಚಿಗೆ ಮಲೆನಾಡಲ್ಲಿ ಆನೆ ಮತ್ತು ಮಾನವ ಸಂಘರ್ಷ ನಿರಂತರವಾಗಿ ನಡೆಯುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಕಾಡಾನೆಗಳ ಅಟ್ಟಹಾಸ ವಿಪರೀತವಾಗಿದೆ. ಹೀಗಾಗಿ ಮಲೆನಾಡಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆಗೆ ಬಂದ ಆನೆಗೆ ಅನಾರೋಗ್ಯಕ್ಕೆ ಈಡಾಗಿದೆ.

ಕೆಲವರ ಅಂಬಾರಿ ಹೊರುವ ಆನೆ ಬಳಕೆಗೆ ತಕರಾರು ತಗೆದರು, ಇಂದು ಕಾಡಾನೆ ಸೆರೆ ಕಾರ್ಯಾಚರಣೆಗೆ ಬಂದಿದ್ದ ಮೈಸೂರು ಅರಮನೆ ಅಂಬಾರಿ ಹೊರುವ ಆನೆ ಅಭಿಮನ್ಯು ಬಂದಿತ್ತು. ಕಾರ್ಯಾಚರಣೆಯಿಂದ ಅಭಿಮನ್ಯು ತೀವ್ರ ಅನಾರೋಗ್ಯಕ್ಕೆ ತುತ್ತಾಗಿದೆ.

ಮೂಡಿಗೆರೆ ತಾಲೂಕಿನ ಊರುಬಗೆ ಗ್ರಾಮದಲ್ಲಿ ಬೆಳೆ, ಪ್ರಾಣ ಹಾನಿಗೆ ಕಾರಣವಾಗಿದ್ದ ಭೈರನ ಸೆರೆಗೆ ಅಭಿಮನ್ಯುನ ಬಳಕೆ ಮಾಡಲಾಗುತ್ತಿದೆ. ಪುಂಡಾನೆ ಸೆರೆಗೆ 3 ರಿಂದ 4 ದಿನದಿಂದ ಕಾರ್ಯಾಚರಣೆ ನಡೆಸುತ್ತಿರುವ ಅಭಿಮನ್ಯು ನೇತೃತ್ವದ ಆನೆಗಳು, ಇದರಿಂದ ಸುಸ್ತಾಗಿ ಆನೆ ಅಭಿಮನ್ಯುಗೆ ಜ್ವರ, ಅತಿಸಾರದಿಂದ ಬಳಲುತ್ತಿದೆ.

RELATED ARTICLES

Related Articles

TRENDING ARTICLES