Monday, December 23, 2024

ಪ್ರಮೋದ್ ಮುತಾಲಿಕ್​ಗೆ ಕೊಲೆ ಬೆದರಿಕೆ ಕರೆ; ದೂರು ದಾಖಲು

ಧಾರವಾಡ; ಶ್ರೀ ರಾಮಸೇನೆಯ ಸಂಸ್ಥಾಪಕ, ರಾಷ್ಟ್ರೀಯ ಅಧ್ಯಕ್ಷರಾಗಿರುವ ಪ್ರಮೋದ್ ಮುತಾಲಿಕ್ ಅವರಿಗೆ ಜೀವ ಬೆದರಿಕೆ ಕರೆಗಳು ಬರುತ್ತಿರುವ ಕುರಿತು ಸ್ವತಃ ಪ್ರಮೋದ್ ಮುತಾಲಿಕ್ ಅವರೇ ಮಾತನಾಡಿದ್ದಾರೆ.

ಈ ಬಗ್ಗೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೇ ರಾತ್ರಿ ಹಾಗೂ ಇಂದು ಮುಂಜಾನೆ ಸಹ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ. ಹುಕ್ಕೇರಿಯಲ್ಲಿರುವಾಗ ಯಾರೋ ಅಪರಿಚಿತ ಕಿರಾತಕರು ಕರೆ ಮಾಡಿ ಬೆದರಿಕೆ ಹಾಕಿದ್ದಾರೆ.

ಪೋನ್​ನಲ್ಲಿ ಮಾತನಾಡುವಾಗ ಉರ್ದು ಮಿಶ್ರಿತ ಮಂಗಳೂರು ಕನ್ನಡ ಭಾಷೆಯಲ್ಲಿ ಮಾತನಾಡಿದ್ದಾರೆ. ಈ ಬಗ್ಗೆ ಹುಕ್ಕೇರಿ ಪೋಲಿಸ್​ ಠಾಣೆಯಲ್ಲಿ ಕೊಲೆ ಬೆದರಿಕೆ ಕರೆ ಬಗ್ಗೆ ದೂರು ದಾಖಲು ಮಾಡಿದ್ದೇನೆ ಎಂದು ಮುತಾಲಿಕ್ ಮಾಹಿತಿ ನೀಡಿದರು.

ನನಗೆ ಕೊಲೆ ಬೆದರಿಕೆ ಹಾಕಿದ ಮೊಬೈಲ್ ನಂಬರ್​​ಗಳನ್ನು ಪೊಲೀಸರಿಗೆ ನೀಡಿದ್ದೇನೆ. ಇಂತಹ ಗೊಡ್ದು ಬೆದರಿಕೆಗೆ ನಾನು ಬಗ್ಗೋ ಪ್ರಶ್ನೆಯೇ ಇಲ್ಲ ಎಂದು ಪ್ರಮೋದ ಮುತಾಲಿಕ್ ಹೇಳಿದರು.

RELATED ARTICLES

Related Articles

TRENDING ARTICLES