Thursday, December 26, 2024

ಅಪ್ಪು ಇಲ್ಲದ ನೋವಲ್ಲೂ ಧುಮ್ಮಿಕ್ಕಿ ಹರಿಯುತ್ತಿದೆ ‘ನೇತ್ರಾವತಿ’

ಮರೆಯದ ಮಾಣಿಕ್ಯ ಅಪ್ಪು ಇಲ್ಲದೆ ಕರುನಾಡಿಗೆ ಅನಾಥ ಭಾವ ಕಾಡ್ತಿದೆ. ಅಪ್ಪು ಬದುಕಿದ್ದಾಗ್ಲೂ ರಾಜಕುಮಾರನಂತೆ ಬಾಳಿದ ಬೆಟ್ಟದ ಹೂ. ಪಿಆರ್​ಕೆ ಪ್ರೊಡಕ್ಷನ್​​ ಮೂಲಕ ಅನೇಕರಿಗೆ ಆಸರೆಯಾದ  ಯುವರಾಜ. ಇದೀಗ ನೇತ್ರಾವರಿ ಸೀರಿಯಲ್​​​ ನಿರ್ಮಾಣ ಮಾಡಿದ್ದ ಅಪ್ಪು ಸ್ಮರಣಾರ್ಥವಾಗಿ ಇಡೀ ಸೀರಿಯಲ್​​ ಟೀಮ್​ ಸಮಾಧಿಗೆ ಭೇಟಿ ಕೊಟ್ಟಿದೆ. ಅಪ್ಪು ಇಲ್ಲದ ಈ ಒಂದು ವರ್ಷವನ್ನು ಭಾವುಕರಾಗಿ ನೆನಪು ಮಾಡಿಕೊಂಡಿದ್ದು ಹೀಗೆ.

  • ಅಪ್ಪು ಹೆಸರಲ್ಲಿ ಟೀಂನಿಂದ ಪ್ರಶಸ್ತಿ & ಸಾಮಾಜಿಕ ಕಾರ್ಯ

ಕರ್ನಾಟಕ ರತ್ನ, ಪವರ್ ಸ್ಟಾರ್​ ಪುನೀತ್ ರಾಜ್​​ಕುಮಾರ್​ ನಮ್ಮನ್ನಗಲಿ ಒಂದು ವರ್ಷ ಉರುಳಿದೆ. ಸದಾ ಅಭಿಮಾನಿಗಳ ಎದೆಯಲ್ಲಿ ಉಸಿರಾಡುತ್ತಿರುವ ಅಪ್ಪು ಎಲ್ಲರ ನೆಚ್ಚಿನ ಆರಾಧ್ಯ ಧೈವವಾಗಿದ್ದಾರೆ. ಅಪ್ಪು ಹೆಸರು ಕೇಳಿದ ತಕ್ಷಣ ಭಾವುಕರಾಗುವ ಅಪ್ಪಟ ಅಭಿಮಾನಿಗಳ ಆಕ್ರಂದನ ಹೇಳತೀರದು. ಇನ್ನು ಪಿಆರ್​ಕೆ ಬ್ಯಾನರ್ ಅಡಿಯಲ್ಲಿ ಮೂಡಿ ಬರ್ತಿರೋ ನೇತ್ರಾವತಿ ಸೀರಿಯಲ್​ 500 ಎಪಿಸೋಡ್​​ಗಳನ್ನು ಮುಗಿಸಿದೆ.

ನೇತ್ರಾವತಿ ಸೀರಿಯಲ್​​ ಯಶಸ್ವಿ 500 ಎಪಿಸೋಡ್​​ಗಳನ್ನು ಪೂರೈಸಿದ ಸಂಭ್ರಮವನ್ನು ವಿಶಿಷ್ಟವಾಗಿ ಆಚರಿಸಿಕೊಂಡಿದೆ. ಅಪ್ಪು ಸಮಾಧಿಗೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿತು. ಇಡೀ ದಿನವನ್ನು ದೇವತಾ ಮನುಷ್ಯನಿಗಾಗಿ ಮೀಡಲಿಡಲಾಗಿದೆ. ಸೀರಿಯಲ್​​​​ನ ಇಡೀ ತಂಡ ಅಪ್ಪು ಸಮಾಧಿ ಎದ್ರು ಭಾವ ನಮನ ಸಲ್ಲಿಸಿದ್ರು. ಈ ನಡುವೆ ಅಪ್ಪು ಬಗ್ಗೆ ಮಾತಾಡ್ತಾ ಸೀರಿಯಲ್​ ನಟಿ ಮಾಲತಿ ತೀವ್ರ ಭಾವುಕರಾಗಿಬಿಟ್ರು.

ಅಪ್ಪುಗೋಸ್ಕರ ಸ್ವತಃ ಸಾಹಿತ್ಯ ರಚಿಸಿ ಮಾಲತಿ ಶ್ರೀ ಮೈಸೂರು ಸಮಾಧಿ ಬಳಿ ಹಾಡಿದ್ದು ಎಲ್ಲರ ಮನಕಲಕುವಂತಿತ್ತು. ಜೊತೆಗೆ ಇಡೀ ಸೀರಿಯಲ್​ ಇದಕ್ಕೆ ಸಾಥ್​ ನೀಡಿತ್ತು.

ಇನ್ನು ಸಿನಿಮಾದಿಂದ ದೂರ ಉಳಿದಿದ್ದ ನಟಿ ಅಂಜಲಿ ಪಿಆರ್​ಕೆ ಪ್ರೊಡಕ್ಷನ್​ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ರು. ದೊಡ್ಮನೆಗೆ ಆಗಾಗ ವಿಸಿಟ್​ ಕೊಡ್ತಿದ್ದ ಸವಿನೆನಪುಗಳನ್ನು ಮೆಲಕು ಹಾಕಿದ್ರು.

ನೇತ್ರಾವತಿ ಸೀರಿಯಲ್​ ಬರ್ತಿದೆ. ತಪ್ಪದೆ ನೋಡಿ ಅನ್ನೋ ಅಪ್ಪು ವಾಯ್ಸ್​ ಕೇಳಿ ಎಲ್ಲರೂ ಥ್ರಿಲ್ ಆಗಿದ್ವಿ. ಇಂದು ಅವರಿಲ್ಲ. ಅವರ ನೆನಪಲ್ಲಿ ಅನಾಥಾಶ್ರಮದ ಮಕ್ಕಳಿಗೆ ಊಟ ಬಡಿಸಿ ಹೊಸ ಬಟ್ಟೆ ಕೊಟ್ಟು ಗಂಧದಗುಡಿ ಸಿನಿಮಾ ನೋಡ್ತೀದಿವಿ ಎಂದು ಸೀರಿಯಲ್​​​ ಕಲಾವಿದ ಸಂತೋಷ್​ ಅಪ್ಪು ಪುಣ್ಯಸ್ಮರಣೆಯ ಕಾರ್ಯಕ್ರಮಗಳ ಬಗ್ಗೆ ಹಂಚಿಕೊಂಡ್ರು.

ಎನಿವೇ, ಅಪ್ಪು ಅವ್ರ ಪ್ರೊಡಕ್ಷನ್​​​ನಲ್ಲಿ ಮೂಡಿ ಬರ್ತಿರೋ ನೇತ್ರಾವತಿ ಇದೇ ರೀತಿ ಧುಮ್ಮಿಕ್ಕಿ ಹರಿಯಲಿ. ಹಲವು ಕಲಾವಿದ್ರಿಗೆ ಆಸರೆ ನೀಡಲಿ. ಜೊತೆಗೆ ಸಾವಿರ ಎಪಿಸೋಡ್​ಗಳನ್ನು ಪೂರೈಸಿ ಯಶಸ್ವಿಯಾಗಿ ಮುನ್ನುಗ್ಗಲಿ ಎಂದು ಆಶಿಸೋಣ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯುರೋ, ಪವರ್ ಟಿವಿ

RELATED ARTICLES

Related Articles

TRENDING ARTICLES