Wednesday, January 22, 2025

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ ಸಂಸದ ನಳೀನ್ ಕುಮಾರ್ ಕಟೀಲ್

ಮಂಡ್ಯ:‘ಸಿದ್ದರಾಮಯ್ಯಗೆ ಕ್ಷೇತ್ರ ಸಿಗುತ್ತಿಲ್ಲ, ತಾಕತ್ತಿದ್ರೆ ಬಾದಾಮಿಯಲ್ಲಿ ಸ್ಪರ್ಧೆ ಮಾಡಿ.’ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಕಟೀಲ್ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಆಗಿರುವ ನಳೀನ್ ಕುಮಾರ್ ಕಟೀಲ್ ರವರು ಟಿಪ್ಪು ವಿರುದ್ದವೂ ವಾಗ್ದಾಳಿ ನಡೆಸಿದ್ದಾರೆ. ದೊಡ್ಡ ನಂಜೇಗೌಡ ಉರಿಗೌಡರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಟಿಪ್ಪು ಜಯಂತಿ ಮಾಡಿದ ಸಿದ್ದರಾಮಯ್ಯಗೆ ಜನರ ಶಾಪ ತಟ್ಟಿದೆ.ಅದಕ್ಕೆ ಅವರಿಗೆ ಕ್ಷೇತ್ರ ಸಿಗುತ್ತಿಲ್ಲ, ತಾಕತ್ತಿದ್ರೆ ಬಾದಾಮಿಯಲ್ಲಿ ಸ್ಪರ್ಧೆ ಮಾಡಿ. ನಿಮ್ಮನ್ನು ಸೋಲಿಸಿ ಕಾಡಿಗೆ ಕಳುಹಿಸುತ್ತೇವೆ. ರಾಜ್ಯದಲ್ಲಿ ಜನ ನಾಯಕ, ಖಳನಾಯಕ, ಕಣ್ಣೀರು ನಾಯಕರಿದ್ದಾರೆ.ಯಡಿಯೂರಪ್ಪ ಜನನಾಯಕ ಜನರ ಕಣ್ಣೀರು ಒರೆಸಿದ ನಾಯಕ.ಬೇಡವಾಗಿರುವ ಟಿಪ್ಪು ಜಯಂತಿ ಮಾಡಿ ಮೂರು ಜನರ ಹತ್ಯೆಗೆ ಕಾರಣರಾದವರು ಸಿದ್ದರಾಮಯ್ಯ.

ಗೋಹತ್ಯೆಗೆ ಗೋಹತ್ಯೆ ಪರವಾಗಿ ನಿಂತ ಖಳನಾಯಕ ಸಿದ್ದರಾಯ್ಯ, ರೈತರ ಆತ್ಮಹತ್ಯೆಗೆ ಕಾರಣ ಸಿದ್ದರಾಮಯ್ಯ.ಸಿದ್ದರಾಮಯ್ಯ ಕಾಲದಲ್ಲಿ ಆತಂಕವಾದಿಗಳು ವಿಜೃಂಭಿಸಿದರು.ತಮ್ಮದೇ ಶಾಸಕ ತನ್ವೀರ್ ಸೇಠ್ ಮೇಲೆ ಹಲ್ಲೆ ಮಾಡಿದ್ರು ಅವರನ್ನ ಬಂಧಿಸಲು ಆಗಲಿಲ್ಲ. ಈ ರಾಜ್ಯದ ಖಳನಾಯಕ ಸಿದ್ದರಾಮಯ್ಯ. ನಿಮ್ಮ ಮಂಡ್ಯದ‌ ಕಣ್ಣೀರ ನಾಯಕ ಕುಮಾರಣ್ಣ. ಅಧಿಕಾರ ಇಲ್ಲದಾಗ ಕಣ್ಣೀರು ಹಾಕಿದರು. ಸಿದ್ದರಾಮಯ್ಯ ಕುಮಾರಸ್ವಾಮಿ ಅನೈತಿಕ ಸಂಬಂಧ ಮಾಡಿದ್ದರು.

ಕುಮಾರಸ್ವಾಮಿ ವಿಧಾನಸೌಧದಿಂದ ಆಳಲಿಲ್ಲ ತಾಜ್ ಹೋಟೆಲ್‌ನಿಂದ ಮಾಡಿದ್ರು. ಅಧಿಕಾರ ಬಂದಾಗಲೂ ಕೆಲಸ ಮಾಡದೆ ಕಣ್ಣೀರು ಹಾಕಿದ್ರು. ಮಂಡ್ಯದಲ್ಲಿ ಕಾಂಗ್ರೆಸ್ ಮುಕ್ತ ಮಾಡಿದ್ದೀರಾ. ಅದಕ್ಕಾಗಿ ಮಂಡ್ಯದ ಜನರಿಗೆ ಅಭಿನಂದನೆ ಸಲ್ಲಿಸಿದ ಕಟೀಲು.ಮುಂದಿನ‌ ದಿನದಲ್ಲಿ ಮಂಡ್ಯದಲ್ಲಿ ಕುಟುಂಬ ರಾಜಕಾರಣ ಮುಕ್ತ ಮಾಡುತ್ತೇವೆ ಎಂದರು.

RELATED ARTICLES

Related Articles

TRENDING ARTICLES