Sunday, December 22, 2024

ತುಮಕೂರಿನ ಘಟನೆಗೆ ಸಂತಾಪ ವ್ಯಕ್ತಪಡಿಸಿದ ಸಚಿವ ಕೆ ಸುಧಾಕರ್

ತುಮಕೂರು: ತುಮಕೂರಿನಲ್ಲಿ ಮಾನವೀಯ ಮರೆತ ದುರ್ಘಟನೆ ಕುರಿತು ಆರೋಗ್ಯ ಸಚಿವ ಕೆ ಸುಧಾಕರ್ ಹೇಳಿಕೆ ನೀಡಿದ್ದಾರೆ.
ಮನುಷ್ಯ ಜೀವ ಬಹಳ ಮುಖ್ಯ, ಯಾರೇ ಆಗಲಿ, ಮೊದಲು ಚಿಕಿತ್ಸೆ ಕೊಡಬೇಕು. ಆನಂತರ ದಾಖಲೆ ಮತ್ತಿತರ ಬಗ್ಗೆ ನೋಡಬೇಕು.

ಕಾನೂನನಲ್ಲಿ ಬದಲಾವಣೆ ತಂದು ಈ ರೀತಿಯ ಘಟನೆ ಮರುಕಳಿಸದ ರೀತಿ ಕ್ರಮ ವಹಿಸುತ್ತೇವೆ. ಬರುವ ಅಧಿವೇಶನದಲ್ಲಿ ಈ ಕಾನೂನನ್ನು ಜಾರಿ ತರಲು ಕ್ರಮ ವಹಿಸುತ್ತೇವೆ. ಈ ಬಗ್ಗೆ ಮುಖ್ಯಮಂತ್ರಿ ಗಳ ಜೊತೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಮೃತ ಮಹಿಳೆ ಮಗಳು 7 ವರ್ಷದ ಮಗಳಿಗೆ 5 ಲಕ್ಷ ಎಫ್ಡಿ ಮಾಡಲು ತೀರ್ಮಾನ ಮಾಡಿದ್ದೇವೆ.

ಒಟ್ಟಾರೆ ಇದನ್ನು ಆಡಳಿತ ವೈಫಲ್ಯ ಎಂದು ಪರಿಗಣಿಸಿ, ಜಿಲ್ಲಾ ಆರೋಗ್ಯ ಅಧಿಕಾರಿಗೂ ಶೋಕಾಸ್ ನೋಟಿಸ್ ಕೊಟ್ಟಿದ್ದೇವೆ.
ಆರೋಗ್ಯ ಸಚಿವರ ರಾಜೀನಾಮೆಗೆ ಸಿದ್ದರಾಮಯ್ಯ, ಕುಮಾರಸ್ವಾಮಿ ಆಗ್ರಹ ವಿಚಾರಕ್ಕೆ ಮಾತನಾಡಿದ ಸಚಿವರು ಈ ವಿಚಾರದಲ್ಲೂ ರಾಜಕಾರಣ ಮಾಡೋದು ಬೇಡ. ಯಾರೆ ಆಗಲಿ ಅವರ ಕಾಲದಲ್ಲಿ ಈ ರೀತಿಯ ಎಷ್ಟು ಘಟನೆಗಳು ಆಗಿವೆ ಗೊತ್ತಿದೆಯಾ..?
ಇದರ ಬಗ್ಗೆ ಸಂಪೂರ್ಣ ದಾಖಲೆಗಳನ್ನು, ಅವರ ಮುಂದೆ ಇಡುತ್ತೇನೆ. ಅವರು ರಾಜೀನಾಮೆ ಕೊಡ್ತಾರಾ ಕೇಳಿ..?
ವಿಪಕ್ಷ ನಾಯಕ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರಾ..? ಕುಮಾರಸ್ವಾಮಿ ಆಗಲಿ, ಯಾರೇ ಆಗಲಿ ಅವರ ಕಾಲದ ದುರ್ಘಟನೆ ಮುಂದೀಡ್ರೀನಿ. ಅದಕ್ಕೆ ಉತ್ತರ ಕೊಡಲಿ ಎಂದು ಸಿಟ್ಟಾದ ಆರೋಗ್ಯ ಸಚಿವರು.

RELATED ARTICLES

Related Articles

TRENDING ARTICLES