Wednesday, January 22, 2025

ಕಾಂತಾರದಿಂದ ಇಂಪ್ರೇಸ್​ ರೀಲ್ಸ್​ ಮಾಡಿ ಎಡವಟ್ಟು

ಮಂಗಳೂರು : ಕಾಂತಾರ ಚಿತ್ರದ ಪಂಜುರ್ಲಿ ವೇಷ ಧರಿಸಿದ್ದ ಹೈದ್ರಾಬಾದ್ ಮಹಿಳೆ ತಪ್ಪು ಅರ್ಥೈಸಿಕೊಂಡು ಧರ್ಮಸ್ಥಳಕ್ಕೆ ಭೇಟಿ ನೀಡಿ, ಕ್ಷಮೆ ಕೇಳಿದ್ದಾಳೆ.

ಶ್ವೇತಾ ರೆಡ್ಡಿಯಿಂದ ಧರ್ಮಸ್ಥಳದ ಧರ್ಮಾಧಿಕಾರಿಗೆ ತಪ್ಪು ಒಪ್ಪಿಕೊಂಡಿದ್ದು, ಯಕ್ಷಗಾನ & ದೈವ ಮುಖವರ್ಣಿಕಾ ಎರಡೂ ಒಂದೇ ಎಂದು ಶ್ವೇತಾ ಭಾವಿಸಿದ್ದರು. ಕಾಂತಾರ ಗೆಟಪ್​​ನಲ್ಲಿದ್ದ ಆಕೆಯ ವಿಡಿಯೋಗೆ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

ಇನ್ನು, ತಪ್ಪು ಅರ್ಥೈಸಿಕೊಂಡು ಧರ್ಮಸ್ಥಳಕ್ಕೆ ಭೇಟಿ ನೀಡಿ, ಕ್ಷಮೆ ಕೇಳಿದ ಶ್ವೇತಾ ರೆಡ್ಡಿ, ದೈವವನ್ನು‌ ಅನುಕರಿಸಿದ ಶ್ವೇತಾಗೆ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಹೀಗಾಗಿ ತನ್ನ ತಪ್ಪಿನ ಅರಿವಾಗಿ ಕ್ಷಮೆಯಾಚಿಸಿದ್ದಾರೆ.

RELATED ARTICLES

Related Articles

TRENDING ARTICLES