Wednesday, January 22, 2025

ಕಾಂತಾರ ಮೆಚ್ಚಿದ ಎಬಿ ಡಿವಿಲಿಯರ್ಸ್

ಮಿಸ್ಟರ್ 360 ಡಿಗ್ರಿ ಎಂದು ಖ್ಯಾತಿ ಪಡೆದ ಕ್ರಿಕೆಟ್​ ಆಟಗಾರ ಎಬಿ ಡಿವಿಲಿಯರ್ಸ್ ಅವರು ಮತ್ತೆ ಬೆಂಗಳೂರಿಗೆ ಮರಳಿದ್ದಾರೆ. ಅವರ ಎಂಟ್ರಿ ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ಐಪಿಎಲ್ ​ಹರಾಜಿಗೂ ಮುನ್ನ ಅವರು ಬೆಂಗಳೂರಿಗೆ ಕಾಲಿಟ್ಟಿರುವುದು ಕುತೂಹಲ ಹೆಚ್ಚಿಸಿದೆ. ಅದಕ್ಕಿಂತಲೂ ಅಚ್ಚರಿ ಏನೆಂದರೆ, ಬರುಬರುತ್ತಲೇ ಅವರು ಕಾಂತಾರ’ ಸಿನಿಮಾ ಬಗ್ಗೆ ಮಾತಾಡಿದ್ದಾರೆ. ಹೌದು, ರಿಷಬ್​ ಶೆಟ್ಟಿ ಮತ್ತು ಎಬಿ ಡಿವಿಲಿಯರ್ಸ್ ಒಂದೇ ಫ್ರೇಮ್​​​ನಲ್ಲಿ ಕಾಣಿಸಿಕೊಂಡಿದ್ದಾರೆ.

ಇಬ್ಬರೂ ಕಾಂತಾರ’ಎಂದು ಕೂಗಿದ್ದಾರೆ. ಈ ವಿಡಿಯೋವನ್ನು ಹೊಂಬಾಳೆ ಫಿಲ್ಮ್ಸ್’ಮತ್ತು ರಿಷಬ್​ ಶೆಟ್ಟಿ ಅವರ ಸೋಶಿಯಲ್​ಮೀಡಿಯಾ ಖಾತೆಗಳಲ್ಲಿ ಶೇರ್​ಮಾಡಿಕೊಳ್ಳಲಾಗಿದೆ. ಇಬ್ಬರು ಸೆಲೆಬ್ರಿಟಿಗಳನ್ನು ಒಟ್ಟಿಗೆ ನೋಡಿದ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

ಎಬಿ ಡಿವಿಲಿಯರ್ಸ್ ‘ಕಾಂತಾರ’ ನೋಡಿದ್ದಾರೋ ಇಲ್ಲವೋ ಎಂಬುದು ಖಚಿತ ಆಗಿಲ್ಲ. ಒಟ್ಟಿನಲ್ಲಿ ಅವರು ಪ್ರಮೋಷನ್​ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ‘ಇದು ಪಂದ್ಯ. ನಿಜವಾದ 360ಯನ್ನು ಭೇಟಿ ಮಾಡಿದ್ದೇನೆ. ನಮ್ಮ ಬೆಂಗಳೂರಿಗೆ ಸೂಪರ್​ ಹೀರೋ ಮರಳಿ ಬಂದಿದ್ದಾರೆ’ ಎಂದು ರಿಷಬ್​ ಶೆಟ್ಟಿ ಅವರು ಈ ವಿಡಿಯೋಗೆ ಕ್ಯಾಪ್ಷನ್​ ನೀಡಿದ್ದಾರೆ.

RELATED ARTICLES

Related Articles

TRENDING ARTICLES