Thursday, December 26, 2024

ಪಂಚರತ್ನ ಸಮಾವೇಶಕ್ಕೆ ಜೆಡಿಎಸ್ ಸಿದ್ದತೆ

ಬೆಂಗಳೂರು : ಮತ್ತೊಮ್ಮೆ ಕನಸಿನ ಯೋಜನೆ ಪಂಚರತ್ನ ರಥಯಾತ್ರೆ ಸಮಾವೇಶಕ್ಕೆ ಜೆಡಿಎಸ್ ಸಿದ್ದತೆ ಮಾಡಿದ ಹಿನ್ನಲೆ ಕುಮಾರಸ್ವಾಮಿ ಅವರು ಚಾಲನೆ ನೀಡಬೇಕಿತ್ತು. ಆದರೆ ಮಳೆಯ ಕಾರಣದಿಂದ ಕುಮಾರಸ್ವಾಮಿ ಅವರು ಸಮಾವೇಶ ಮುಂದೂಡಿದ್ದಾರೆ.

ನವೆಂಬರ್ 10 ರ ಬಳಿಕ ಬೃಹತ್ ಸಮಾವೇಶ ನಡೆಸಲು ಜೆಡಿಎಸ್ ನಾಯಕರು ಚಿಂತನೆ ಮಾಡಿದ್ದಾರೆ. ಸಮಾವೇಶಕ್ಕೆ ಅಡ್ಡಿಯಾಗಿದ್ದನ್ನೆ ಲಾಭವಾಗಿಸಿಕೊಳ್ಳಲು ಜೆಡಿಎಸ್ ನಾಯಕರು ನಿರ್ಧಾರ ಮಾಡಿದ್ದಾರೆ. ನೀರಿಕ್ಷೆಗಿಂತ ಹೆಚ್ಚಿನ ಜನ ಸೇರಿಸಲು ಜೆಡಿಎಸ್ ನಾಯಕರು ಪ್ಲಾನ್ ಮಾಡಿದ್ದಾರೆ. ಸರಣಿ ಸಭೆ ನಡೆಸುತ್ತಿರುವ ಕೋಲಾರ,ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಸ್ಥಳೀಯ ನಾಯಕರು ವೇದಿಕೆ ಸಿದ್ದತೆ, ಕಾರ್ಯಕರ್ತರಿಗೆ ಬಸ್ ವ್ಯವಸ್ಥೆ, ಊಟದ ವ್ಯವಸ್ಥೆ ಸೇರಿದಂತೆ ಕಾರ್ಯಕ್ರಮದ ಸಿದ್ದತೆಗಳ ಬಗ್ಗೆ ಜೆಡಿಎಸ್ ನಾಯಕರು ಚರ್ಚೆ ಮಾಡ್ತಿದ್ದಾರೆ.

ಕುಮಾರಸ್ವಾಮಿ ಅವರು ನಿರಂತರ ಕಾರ್ಯಕ್ರಮಗಳಿಂದ ಬಳಲಿದ್ದು, ಮುಂದೆ ಸರಣಿ ಪ್ರವಾಸ ಹಿನ್ನೆಲೆ ವಿಶ್ರಾಂತಿಯಲ್ಲಿದ್ದಾರೆ. ಸಮಾವೇಶದ ಸಿದ್ದತೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.

RELATED ARTICLES

Related Articles

TRENDING ARTICLES