ಹಾಸನ: ಹಾಸನ ನಗರದ ಕಲಾಭವನದಲ್ಲಿ ಬಿಜೆಪಿ ಕಾರ್ಯಕರ್ತರ ಸಂಕಲ್ಪ ಸಭೆ ನಿನ್ನೆ ನಡೆದಿದೆ. ಸಭೆಯಲ್ಲಿ ಮಾಜಿಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದ ವಿರುದ್ದ ವ್ಯಂಗ್ಯವಾಡಿದ ಶಾಸಕ ಪ್ರೀತಂಗೌಡ.
ಸಿಂಹಕ್ಕೆ ಭೇಟೆಯಾಡುವುದನ್ನು ಯಾರು ಹೇಳಿ ಕೊಡಬೇಕಾಗಿಲ್ಲ. ಆದರೆ ಹಸಿದಿರುವಾಗ ಭೇಟೆಯಾಡೋದು ಸಹಜ. ಹಾಸನ ಜಿಲ್ಲೆಯ ರಾಜಕಾರಣವನ್ನು ಒಂದು ಕುಟುಂಬ ಪ್ರೈವೇಟ್ ಲಿಮಿಟೆಡ್ ಮಾಡಿಕೊಂಡಿದ್ದಾರೆ. ಅವರ ಮನೆಯ ಕಾಂಪೌಂಡ್ ಒಳಗೆ ಮನೆ ಮಧ್ಯದಲ್ಲಿ ಗಿಡ ಹಾಕಿಕೊಳ್ಳುತ್ತಾರೆ. ಗಿಡಕ್ಕೆ ನೀರು, ಗೊಬ್ಬರ ಹಾಕ್ತಾರೆ, ಸ್ಪ್ರೇ ಹೊಡೆದು ಮರ ಮಾಡುತ್ತಾರೆ. ಅದರ ಹಣ್ಣು ಎಲ್ಲಾ ಆ ಕುಟುಂಬಕ್ಕೆ ಸೇರಿದ್ದು, ಕಾಂಪೌಂಡ್ ಕೀ ಕೂಡ ಅವರ ಕೈಲಿ ಇರುತ್ತೆ. ಬಿಜೆಪಿ ಪಬ್ಲಿಕ್ ಲಿಮಿಟೆಡ್, ಜೆಡಿಎಸ್ ಪ್ರೈವೇಟ್ ಲಿಮಿಟೆಡ್. ಚನ್ನರಾಯಪಟ್ಟಣ ಶಾಸಕರು ಅವರ ಅಳಿಯನ ತಮ್ಮ. ಈಗ ಅರಕಲಗೂಡಿಗೆ ಅವರ ಸೋದರ ಸಂಬಂಧಿ ಪಾಪಣ್ಣಿ ಅನ್ನೋರನ್ನು ಹಳ್ಳಿಮೈಸೂರಿಗೆ ಬಿಟ್ಟಿದ್ದಾರೆ.
ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಇನ್ನೇನು ನಮ್ಮ ನಿಮ್ಮೆಲ್ಲರ ನೆಚ್ಚಿನ ಅಕ್ಕ ಬರುವ ಸಾಧ್ಯತೆಯಿದೆ. ಏರ್‌ಪೋರ್ಟ್ ಮಾಡ್ತಿವಿ ಅಂತ ಹಳೇ ಕಾಲದ ಕಂಬಿ ಇಲ್ಲದ ರೈಲು ಬಿಡುತ್ತಿದ್ದರು. ನಾವೇ ಇಂಜಿನಿಯರ್, ಬಸ್ಟಾಂಡ್, ಮೆಡಿಕಲ್ ಕಾಲೇಜು ಕಟ್ಟಿದ್ದೇವೆ ಅಂತಾರೆ. ಅವರು ಗುದ್ದಲಿ ಪೂಜೆ ಮಾಡಿ ಅಧಿಕಾರ ಕಳೆದುಕೊಂಡು ಹೋದರು. 2018, 2019 ರಲ್ಲಿ ಬಂದ ಬಿಜೆಪಿ ಸರ್ಕಾರ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಿ ಉದ್ಘಾಟನೆ ಮಾಡಿತು ಎಂದು ಹೆಮ್ಮೆಯಿಂದ ಹೇಳ್ತಿನಿ. ಅವರು ಓಡಾಡುವ ರಸ್ತೆಗಳನ್ನು ಮಾತ್ರ ಮಾಡಿಕೊಂಡರು.
2023 ರ ಚುನಾವಣೆ ಹಾಸನ ವಿಧಾನಸಭಾ ಕ್ಷೇತ್ರ ಗೆದ್ದೆ ಗೆಲ್ಲುತ್ತೆ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತೆ. ಆದರೆ 2024 ರ ಚುನಾವಣೆ ಫೈನಲ್. ಸಿದ್ದರಾಮಯ್ಯ ಕಾಲು ಹಿಡಿದುಕೊಂಡು ಸಂಸದರಾಗಿ ಬೀಗುತ್ತಿರುವವರನ್ನು ಮನೆಗೆ ಕಳುಹಿಸುವ ಚುನಾವಣೆ
2024 ರಲ್ಲಿ ಅಭ್ಯರ್ಥಿ ಆಗಬೇಕು, ಬೇಡವೋ ಅನ್ನುವ ಪರಿಸ್ಥಿತಿ ನಿರ್ಮಾಣ ಮಾಡಬೇಕು.