Wednesday, January 22, 2025

ಡಾರ್ಲಿಂಗ್ ಕೃಷ್ಣನ  ದಿಲ್‌ ಪಸಂದ್‌ ಟ್ರೈಲರ್‌ ಬಲು ಪಸಂದಗೈತೆ..!

ಟೀಸರ್ ನೋಡಿ ಪಕ್ಕಾ ಯೂತ್’ಫುಲ್ ಎಂಟರ್’ಟೈನರ್ ಅನಿಸಿದ್ದ ದಿಲ್ ಪಸಂದ್, ಇದೀಗ ಟ್ರೈಲರ್’ನಿಂದ ಚಿತ್ರದ ಅಸಲಿ ಗಮ್ಮತ್ತು ಪರಿಚಯಿಸಿದೆ. ಲವ್, ರೊಮ್ಯಾನ್ಸ್ ಜೊತೆ ಫನ್, ಎಮೋಷನ್, ಆ್ಯಕ್ಷನ್ ಹಾಗೂ ಸೆಂಟಿಮೆಂಟ್ ಕೂಡ ಇದೆ. ಪಕ್ಕಾ ಕಮರ್ಷಿಯಲ್ ಪ್ಯಾಕ್ಡ್ ಪ್ಯಾಕೇಜ್’ನ ಝಲಕ್ ನಿಮಗಾಗಿ ಕಾಯ್ತಿದೆ.‌ ನೀವೇ ಓದಿ.

  • ಲವ್, ಫನ್, ಫ್ಯಾಮಿಲಿ ಎಮೋಷನ್ಸ್​​​ನ ಕಮರ್ಷಿಯಲ್ ವೆಂಚರ್..!

ಡಾರ್ಲಿಂಗ್‌ ಕೃಷ್ಣ ಅಂದ್ರೆ ಈಗ ಒಂದಕ್ಕಿಂತ ಹೆಚ್ಚು ಹೀರೋಯಿನ್‌ಗಳ ಜೊತೆ ಕೃಷ್ಣ ಲೀಲೆ ತೋರಿಸೋ ಹೀರೋ ಅಂತಲೇ ಫಿಕ್ಸ್‌ ಆಗಿರೋ ಹೀರೋ. ಆದ್ರೆ ಈ ಬಾರಿ ಲವ್, ರೊಮ್ಯಾನ್ಸ್ ಜೊತೆ ಒಂದೊಳ್ಳೆ ಮಾಸ್‌ ಎಂಟರ್‌ಟೈನ್‌ಮೆಂಟ್‌ ಜೊತೆಗೆ ಸಖತ್ತಾಗಿ ಮೆಸೇಜ್‌ ಹೇಳೋಕೆ ಹೊರಟಿದ್ದಾರೆ ಈ ದಿಲ್‌ ಪಸಂದ್‌ ಮೂಲಕ. ಯೆಸ್.. ಟೀಸರ್‌ ನಲ್ಲಿ ನಿಶ್ವಿಕಾ, ಕೃಷ್ಣರ ರೊಮ್ಯಾಂಟಿಕ್‌ ಸೀನ್‌ಗಳನ್ನ ನೋಡಿ, ಇದು ಪಡ್ಡೆ ಹೈಕ್ಳ ಫೇವರಿಟ್‌ ಸಿನಿಮಾ ಆಗಲಿದೆ ಎನ್ನಲಾಗುತ್ತಿತ್ತು. ಟ್ರೈಲರ್ ನೋಡಿದ್ಮೇಲೆ ಇದೊಂದು ಫ್ಯಾಮಿಲಿ ಎಂಟರ್‌ಟೈನರ್‌ ಸಿನಿಮಾ ಅನ್ನೋದು ಖಾತ್ರಿಯಾಗಿದೆ.

ಕಾಮಿಡಿ, ರೊಮ್ಯಾನ್ಸ್‌ ಜೊತೆಗೆ ಸರಳವಾದ ಫ್ಯಾಮಿಲಿ ಸೆಂಟಿಮೆಂಟ್ಸ್‌ ಇಟ್ಟು, ಮತ್ತೊಂದು ಆಲ್‌ರೌಂಡ್‌ ಎಂಟರ್‌ಟೈನಿಂಗ್‌ ಸಿನಿಮಾ ಮಾಡಿದ್ದಾರೆ ನಿರ್ದೇಶಕ ಶಿವ ತೇಜಸ್‌..! ಸದ್ಯ ರಿಲೀಸ್ ಆಗಿರೋ ಈ ಟ್ರೈಲರ್, ಟೀಸರ್ ನೋಡಿದವ್ರಿಗಿದ್ದ ಒಪೀನಿಯನ್ ಬದಲಾಯಿಸಿದೆ. ನಿರ್ಮಾಪಕ ಸುಮಂತ್ ಕ್ರಾಂತಿ ಬೇಸಿಕಲಿ ನಿರ್ದೇಶಕರಾಗಿದ್ದರಿಂದ ಈ ಸಿನಿಮಾದ ಕಂಟೆಂಟ್ ಮತ್ತಷ್ಟು ಗಟ್ಟಿಯಾಗಿ ಮೂಡಿಬಂದಿದೆ.

ಅಯ್ಯೋ ರಾಮಾ ರಾಮಾ ಅನ್ನೋ ಟ್ರೆಂಡಿಂಗ್‌ ಹಾಡು ಹಾಗೂ ಟೀಸರ್‌ನಲ್ಲಿ ತಮ್ಮ ಬೋಲ್ಡ್‌ ಅವತಾರ ತೋರಿದ್ದ ನಿಶ್ವಿಕಾ ನಾಯ್ಡು, ತಾನು ಸಿನಿಮಾದಲ್ಲಿ ಬೋಲ್ಡ್‌ ನೆಸ್‌ ಜೊತೆಗೆ ಎಮೋಷನಲ್‌ ಸೀನ್‌ನಲ್ಲೂ ಸಖತ್ತಾಗೇ ಸ್ಕೋರ್‌ ಮಾಡಿದ್ದೀನಿ ಅಂತ ಟ್ರೈಲರ್’ನಿಂದ ತೋರಿಸಿದ್ದಾರೆ. ಟೀಸರ್‌ನಲ್ಲಿ ಡೀಸೆಂಟ್‌ ಗೌರಮ್ಮನಾಗಿದ್ದ ಮೇಘಾ ಶೆಟ್ಟಿ, ತಮ್ಮ ಗ್ಲಾಮರ್ ಲುಕ್‌ ನಿಂದ ಕಿಕ್ ಕೊಡ್ತಿದ್ದಾರೆ.

ಇನ್ನು ಕೃಷ್ಣ ಇಲ್ಲೊಬ್ಬ ಪ್ಲೇ ಬಾಯ್‌ ರೀತಿ ಕಾಣಿಸಿಕೊಂಡಿದ್ರು. ಆದ್ರೆ ಈಗಿನ ಜನರೇಷನ್‌ನ ಎಲ್ಲಾ ಯುವಕರ ಪ್ರತಿನಿಧಿಯಾಗಿ ಕಾಣಸಿಗಲಿದ್ದಾರೆ. ಅರ್ಜುನ್‌ ಜನ್ಯಾ ಮ್ಯೂಸಿಕ್‌ನಲ್ಲಿ ಹಾಡುಗಳ ಬಗ್ಗೆ ಕೂಡ ನಿರೀಕ್ಷೆ ಇಟುಕೊಳ್ಳಬಹುದು. ಕಾರಣ ಈಗಾಗ್ಲೇ ಎರಡು ಸಾಂಗ್ಸ್ ದೊಡ್ಡ ಮಟ್ಟಕ್ಕೆ ಹಿಟ್ ಆಗಿ, ಎಲ್ಲರೂ ಗುನುಗುವಂತಾಗಿದೆ.

ಈ ದೊಡ್ಡ ಸ್ಟಾರ್‌ ಕಾಸ್ಟ್‌ ನ ಮೇಲೆ ಸಿಲ್ವರ್‌ ಕೋಟಿಂಗ್‌ ತರಹ ಕೃಷ್ಣ ಅಜಯ್‌ ರಾವ್‌ ಕೂಡ ವಿಶೇಷ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಇಷ್ಟೆಲ್ಲಾ ಭರಪೂರ ಎಂಟರ್‌ಟೈನ್ಮೆಂಟ್‌ನ ಪ್ಯಾಕೇಜ್‌ ಆಗಿರೋ ದಿಲ್‌ಪಸಂದ್‌ ಇದೇ ನವೆಂಬರ್‌ 11ಕ್ಕೆ ತೆರೆಗೆ ಬರ್ತಾ ಇದ್ದು. ಟೀಸರ್‌ಗೂ ಟ್ರೈಲರ್ ಗೂ ವ್ಯತ್ಯಾಸ ಇರೋ ಹಾಗೆ, ಟ್ರೈಲರ್’ಗಿಂತ ಸಿನಿಮಾ ಅನ್‌ಲಿಮಿಟೆಡ್‌ ಮನರಂಜನೆ ನೀಡೋದು ಪಕ್ಕಾ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES