Thursday, December 19, 2024

ನಾಳೆಯಿಂದ ಫ್ಯೂಚರ್ ಸ್ಟಾರ್ ಝೈದ್​ರ ‘ಬನಾರಸ್’ ಬೆರಗು

ಕಾಶಿಯ ಗಂಗಾ ಮಡಿಲಿನಲ್ಲಿ ಮುದ್ದು ಜೋಡಿಯ ಪ್ರೇಮಕಾವ್ಯ ಹೇಳಲು ಸಜ್ಜಾಗಿದೆ ಬನಾರಸ್​​ ಸಿನಿಮಾ. ಜಯತೀರ್ಥ ನಿರ್ದೇಶನದ ಬ್ರಾಂಡ್​​ನಲ್ಲಿ ಸಿಕ್ಕಾಪಟ್ಟೆ ಹೈಪ್​ ಕ್ರಿಯೇಟ್​ ಮಾಡಿರೋ ಪ್ಯಾನ್​ ಇಂಡಿಯಾ ಸಿನಿಮಾ ಇದು​​​​​. ವಾರಣಾಸಿ ತೀರದ ನವನವೀನ ಪ್ರೇಮದ ಕಥೆಯ ಸಿನಿಮಾ ಎಷ್ಟು ಥಿಯೇಟರ್​​ಗಳಲ್ಲಿ ರಿಲೀಸ್​ ಆಗ್ತಿದೆ. ಸೆಲೆಬ್ರೇಷನ್​​ ಸಿದ್ಧತೆಗಳು ಹೇಗಿವೆ ಅನ್ನೋದ್ರ ಕಂಪ್ಲೀಟ್​ ಡೀಟೈಲ್ಸ್​ ಇಲ್ಲಿದೆ.

  • ಭಾರತದ ಸಾವಿರಕ್ಕೂ ಅಧಿಕ ಸ್ಕ್ರೀನ್​​ಗಳಲ್ಲಿ ಝೈದ್​ ಅಬ್ಬರ..!

ಒಲವೇ ಮಂದಾರ, ಬುಲೆಟ್​ ಬಸ್ಯಾ, ಬೆಲ್​ ಬಾಟಮ್​ ಹಿಟ್ ಸಿನಿಮಾಗಳ ಸರದಾರ ಜಯತೀರ್ಥ. ಇವ್ರ ನಿರ್ದೇಶನದಲ್ಲಿ ಮೂಡಿ ಬಂದ ಸಿನಿಮಾಗಳ ಫ್ಲೇವರ್​​ ಎಲ್ಲರಿಗೂ ಬಲುರುಚಿ. ಇದೀಗ ಬನಾರಸ್​ ಅನ್ನೋ ಟೈಮ್​ ಟ್ರಾವೆಲ್​​ ಕಥೆ ಹೇಳೋಕೆ ಸಿಕ್ಕಾಪಟ್ಟೆ ಉತ್ಸುಕವಾಗಿದೆ ಚಿತ್ರತಂಡ. ಇದ್ರ ಜತೆಗೆ ಚಿತ್ರದ ಟ್ರೈಲರ್​​ ಹಾಗೂ ಹಾಡುಗಳು ಸಿಕ್ಕಾಪಟ್ಟೆ ಪ್ರಾಮಿಸಿಂಗ್​ ಆಗಿವೆ. ನವೆಂಬರ್​​ 04ಕ್ಕೆ ಪ್ಯಾನ್​ ಇಂಡಿಯಾ ಲೆವೆಲ್​​ನಲ್ಲಿ ಕಮಾಲ್​ ಮಾಡಲಿದೆ ಅಮೋಘ ದೃಶ್ಯಕಾವ್ಯ ಬನಾರಸ್​.

ಜಮೀರ್​​ ಖಾನ್​ ಪುತ್ರ ಝೈದ್​ ಖಾನ್​​ ಅವ್ರ ಚೊಚ್ಚಲ ಸಿನಿಮಾ ಇದಾಗಿದ್ದು ಸೋನಲ್​​​ ಮಂಥೇರೋ​ ನಾಯಕಿಯಾಗಿ ಸಾಥ್ ನೀಡಿದ್ದಾರೆ. ಪವಿತ್ರ ಭೂಮಿ ಬನಾರಸ್​ನಲ್ಲಿ ಕಂಪ್ಲೀಟ್​ ಸಿನಿಮಾ ಮೂಡಿ ಬಂದಿದ್ದು ತೆರೆಯ ಮೇಲೆ ಹೊಸ ಅನುಭವ ನೀಡಲಿದೆ. ಭಾರತದಾಧ್ಯಂತ ಸಾವಿರಕ್ಕೂ ಅಧಿಕ ಸ್ಕ್ರೀನ್​​ಗಳಲ್ಲಿ ಸಿನಿಮಾ ರಿಲೀಸ್​ ಅಗಲಿದ್ದು ಮೋಡಿ ಮಾಡೋ ತವಕದಲ್ಲಿದೆ.

ಮಾಯಗಂಗೆಯ ಮಾಯಾವಿ ಸಂಗೀತದ ಅಲೆಯಲ್ಲಿ ತೇಲುತ್ತಿರೋ ಚಿತ್ರರಸಿಕರು ಸಿನಿಮಾವನ್ನು ಸಿಲ್ವರ್​ ಸ್ಕ್ರೀನ್​ ಮೇಲೆ ಎಂಜಾಯ್​ ಮಾಡೋಕೆ ಕಾಯ್ತಿದ್ದಾರೆ. ಹಿಂದಿಯಲ್ಲಿ ಅಜಯ್​ ದೇವಗನ್​​ ಸಿನಿಮಾ ನೋಡಿ ವಿತರಣೆಯ ಹಕ್ಕನ್ನು ಪಡೆದಿದ್ದಾರೆ. ಜೊತೆಗೆ ರಾಕಿಭಾಯ್​​​ ಕೂಡ ಸಿನಿಮಾ ಮಿಸ್​ ಮಾಡದೇ ನೋಡ್ತೀನಿ ಎಂಬ ಭರವಸೆ ನೀಡಿದ್ದಾರಂತೆ. ಪ್ರಮೋಷನ್ಸ್​ಗಾಗಿ ಇಡೀ ಇಂಡಿಯಾ ಸುತ್ತು ಹಾಕಿರೋ ಝೈದ್​​​ ಸಿನಿಮಾ ಮೇಲಿನ ಪ್ರೀತಿಯನ್ನು ಹೊರ ಹಾಕಿದ್ರು.

ಝೈದ್​ ಮೇಲೆ ಅಪಾರ ವಿಶ್ವಾಸ ಇಟ್ಟು ತಿಲಕ್​ ರಾಜ್​ ಬಲ್ಲಾಳ್​​​ ಬಂಡವಾಳ ಹೂಡಿದ್ದು ಸಿನಿಮಾ ರಿಚ್​ ಆಗಿ ಮೂಡಿ ಬಂದಿದೆ. ಅಜನೀಶ್​ ಮ್ಯೂಸಿಕ್​​​​​, ಅದ್ವೈಥ್​​ ಕ್ಯಾಮೆರಾ ಕಣ್ಣು ಚಿತ್ರಕ್ಕೆ ಪ್ಲಸ್​ ಆಗಲಿದೆ. ಸುಜಯ್​ ಶಾಸ್ತ್ರಿ, ದೇವರಾಜ್​​, ಅಚ್ಯುತ್​​​ ಕುಮಾರ್ ತಾರಾಬಳಗ ಚಿತ್ರಕ್ಕೆ ಮೆರಗು ತುಂಬಿದೆ. ಒಟ್ಟಾರೆ ಬನಾರಸ್​​ ವಿಬಿನ್ನ ಕಥೆಗೆ ಪ್ರೇಕ್ಷಕರ ರೆಸ್ಪಾನ್ಸ್​ ಹೇಗಿರುತ್ತೆ ಕಾದು ನೋಡ್ಬೇಕಾಗಿದೆ.

ರಾಕೇಶ್​ ಆರುಂಡಿ, ಫಿಲ್ಮ್​​ ಬ್ಯುರೋ, ಪವರ್ ಟಿವಿ

RELATED ARTICLES

Related Articles

TRENDING ARTICLES