Sunday, January 19, 2025

ಸಾವಿರಕ್ಕೂ ಅಧಿಕ ಸ್ಕ್ರೀನ್ಸ್​ನಲ್ಲಿ ಬನಾರಸ್ ಬಿಗ್ ಓಪನಿಂಗ್..!

ಬನಾರಸ್.. ಬಗೆದಷ್ಟೂ ಬೆರಗು. ನೋಡುಗರಿಗೆ ಇರೋದಿಲ್ಲ ಕಿಂಚಿತ್ತೂ ಕೊರಗು. ಯೆಸ್.. ಪ್ರೇಕ್ಷಕರಿಗೂ ಮುನ್ನ ಚಿತ್ರರಂಗದ ತಾರೆಯರೇ ನ್ಯೂ ಟ್ಯಾಲೆಂಟ್ ಝೈದ್​ಗೆ ಬಹುಪರಾಕ್ ಹೇಳಿದ್ದಾರೆ. ವೈರಾಗ್ಯಕ್ಕೆ ಕೇರ್ ಆಫ್ ಅಡ್ರೆಸ್ ಆಗಿರೋ ಕಾಶಿಯಲ್ಲಿ ಸೋನಲ್- ಝೈದ್​ಗೆ ಪ್ರೇಮ ಮಹಲ್ ಕಟ್ಟಿದ್ದಾರೆ  ಜಯತೀರ್ಥ. ಹಾಗಾದ್ರೆ ಸಿನಿಮಾ ಹೇಗಿದೆ..? ಆರ್ಟಿಸ್ಟ್ ಪರ್ಫಾಮೆನ್ಸ್​ಗೆ ಪ್ರೇಕ್ಷಕ ಹೇಳಿದ್ದೇನು ಅನ್ನೋದ್ರ ಜೊತೆ ಇಂಡಸ್ಟ್ರಿ ಮಂದಿಯ ರಿವ್ಯೂ ನೀವೇ ಓದಿ.

  • ಪ್ರೇಕ್ಷಕರಿಗೂ ಮುನ್ನ ತಾರೆಯರಿಂದ ಝೈದ್​ಗೆ ಬಹುಪರಾಕ್

ಪೊಲಿಟಿಷಿಯನ್ಸ್ ಮಕ್ಕಳು ಬಣ್ಣ ಹಚ್ಚಿ ಬೆಳ್ಳಿತೆರೆಗೆ ಎಂಟ್ರಿ ಕೊಡ್ತಿರೋದು ಇದೇ ಮೊದಲಲ್ಲ. ಆ ಸಾಲಿಗೆ ಜಮೀರ್ ಪುತ್ರ ಝೈದ್ ಖಾನ್ ಹೊಸ ಸೇರ್ಪಡೆ. ಬನಾರಸ್ ಅನ್ನೋ ಟೈಟಲ್​ನಿಂದಲೇ ನಿರೀಕ್ಷೆ ಮೂಡಿಸಿದ್ದ ಚಿತ್ರ, ಸ್ಯಾಂಪಲ್ಸ್​ನಂತೆ ಸಿನಿಮಾದಲ್ಲೂ ವಿಭಿನ್ನತೆ ಹಾಗೂ ವಿಶೇಷತೆ ಕಾಯ್ದುಕೊಂಡಿದೆ. ಕನ್ನಡದ ಜೊತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಹೀಗೆ ಐದು ಭಾಷೆಯಲ್ಲಿ ಪ್ಯಾನ್ ಇಂಡಿಯಾ ಚಿತ್ರ ಗ್ರ್ಯಾಂಡ್ ಓಪನಿಂಗ್ ಪಡೆದಿದೆ. ಆ ಮೂಲಕ ಝೈದ್ ಭರ್ಜರಿಯಾಗಿ ಬಿಗ್ ಸ್ಕ್ರೀನ್ ಮೇಲೆ ರಾರಾಜಿಸಿದ್ದಾರೆ.

ಸಿನಿಮಾ ರಿಲೀಸ್​ಗೂ ಮೊದ್ಲೇ ಪಿವಿಆರ್ ಒರಾಯನ್ ಮಾಲ್​ನಲ್ಲಿ ಸ್ಪೆಷಲ್ ಪ್ರೀಮಿಯರ್ ಕಂಡಿದೆ. ಅಲ್ಲಿ ಜನಾಭಿಪ್ರಾಯಕ್ಕೂ ಮುನ್ನ ಚಿತ್ರರಂಗದ ತಾರೆಯರು ಜಯತೀರ್ಥ ಹೊಸ ಪ್ರಯೋಗ ಮತ್ತು ಝೈದ್ ನಟನೆಗೆ ಫುಲ್ ಮಾರ್ಕ್ಸ್ ಕೊಟ್ಟು ಭೇಷ್ ಅಂದ್ರು.

ಬೈಟ್: ಶರಣ್, ನಟ

ಬೈಟ್: ಪ್ರೇಮ್, ನಟ

ಬೈಟ್: ನಾಗತಿಹಳ್ಳಿ ಚಂದ್ರಶೇಖರ್, ನಿರ್ದೇಶಕ

ಬೈಟ್: ಮನೋರಂಜನ್, ನಟ

ಬೈಟ್: ವಿಕ್ರಮ್, ನಟ

ಬೈಟ್: ಕಿರಣ್​ರಾಜ್, ನಿರ್ದೇಶಕ

ಇದಿಷ್ಟು ಸೆಲೆಬ್ರಿಟಿಗಳ ರಿವ್ಯೂ ಆದ್ರೆ, ನಮ್ಮದೊಂದು ರಿಪೋರ್ಟ್​ ಕೊಟ್ಟುಬಿಡ್ತೀವಿ ಬನ್ನಿ.

ಬನಾರಸ್ ಕಥಾಹಂದರ

ಕಾವೇರಿ ನದಿಯ ತಟದಿಂದ ಶುರುವಾಗೋ ಬನಾರಸ್ ಚಿತ್ರದಲ್ಲಿ, ನಾಯಕನಟ ಸಿದ್ದಾರ್ಥ್ ಸಿಂಹ, ಫ್ರೆಂಡ್ಸ್ ಹಾಕೋ ಚಾಲೆಂಜ್​ಗೆ ನಾಯಕನಟಿಯಾಗಿರೋ ಗಾಯಕಿ ಧನಿಗೆ ಹತ್ತಿರ ಆಗ್ತಾನೆ. ಒಂದು ಫೋಟೋ ಕ್ಲಿಕ್ಕಿಸಿಕೊಳ್ಳೋಕೆ ಟೈಂ ಟ್ರಾವೆಲ್ ಕಥೆ ಕಟ್ಟುತ್ತಾನೆ. ಅದ್ರಿಂದ ಆಗೋ ಅನಾಹುತದಿಂದ ಸೋಶಿಯಲ್ ಮೀಡಿಯಾದಲ್ಲಿ ಆಕೆಯ ಕಂಠದ ಜೊತೆ ಸೊಂಟದ ಬಗ್ಗೆಯೂ ಮಾತಾಡುವಂತಾಗುತ್ತೆ ಸಮಾಜ. ಅದೇ ಕಾರಣಕ್ಕೆ ಅಪ್ಪ-ಅಮ್ಮನಿಲ್ಲದ ಆಕೆ ಬನಾರಸ್​ನಲ್ಲಿರೋ ಚಿಕ್ಕಪ್ಪನ ಮನೆಗೆ ತೆರಳುತ್ತಾಳೆ. ಈತ ಫಾರಿನ್ ಟ್ರಿಪ್ ಮಜಾ ಮಾಡ್ಕೊಂಡ್ ಬಂದು, ತಪ್ಪನ್ನ ಅರಿತು, ತಂದೆ ಮಾತಿನಂತೆ ಆಕೆಗೆ ಕ್ಷಮೆ ಕೇಳಲು ಕಾಶಿಗೆ ಹೊರಡುತ್ತಾನೆ.

ಕ್ಷಮೆ ಕೇಳಿ ಪಾಪ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಹೊರಟ ನಾಯಕನಟನಿಗೆ ಡೆತ್ ಫೋಟೋಗ್ರಾಫರ್ ಶಂಭು ಸಿಗ್ತಾನೆ. ಕ್ಷಮೆ ಕೇಳಲು ಹೋಗೋ ನಾಯಕನಿಗೆ ಆಕೆಯಿಂದ ಲವ್ ಪ್ರಪೋಸ್ ಸಿಗುತ್ತೆ. ಆದ್ರೆ ಅಷ್ಟರಲ್ಲೇ ಟೈಂ ಟ್ರಾವೆಲ್ ಮಾಡಿ ಭವಿಷ್ಯಕ್ಕೆ ಬರ್ತಾನೆ. ಅದ್ಹೇಗೆ..? ಕೊನೆಗೆ ಧನಿ ಸಿಗ್ತಾಳಾ ಇಲ್ವಾ ಅನ್ನೋದೇ ಚಿತ್ರದ ಅಸಲಿ ಕಥಾನಕ.

ಬನಾರಸ್ ಆರ್ಟಿಸ್ಟ್ ಪರ್ಫಾಮೆನ್ಸ್

ಸ್ಯಾಂಡಲ್​ವುಡ್​ ಪಾಲಿಗೆ ಝೈದ್ ಭವಿಷ್ಯದ ಸ್ಟಾರ್ ನಟ

ಸೋನಲ್ ಗ್ಲಾಮರ್ ರಂಗು.. ಸುಜಯ್ ಕಾಮಿಡಿ ಗುಂಗು

ಯೆಸ್.. ನಾಯಕನಟ ಸಿದ್ದಾರ್ಥ್ ರೋಲ್​ನಲ್ಲಿ ಝೈದ್ ಖಾನ್ ಪರಕಾಯ ಪ್ರವೇಶ ಮಾಡಿದ್ದಾರೆ. ಸ್ಟೈಲು, ಮ್ಯಾನರಿಸಂ ಬಾಡಿ ಲಾಂಗ್ವೇಜ್ ಜೊತೆ ಅವ್ರ ಹಾವ , ಭಾವ ಎಲ್ಲವೂ ಕಥೆಗೆ ಪೂರಕವಾಗಿವೆ. ನುರಿತ ಕಲಾವಿದನಂತೆ ಚೊಚ್ಚಲ ಚಿತ್ರದಲ್ಲೇ ಮನೋಜ್ಞ ಅಭಿನಯ ನೀಡಿದ್ದಾರೆ ಝೈದ್. ಎರಡು ಶೇಡ್​ಗಳಲ್ಲಿ ಕಾಣಸಿಗೋ ಝೈದ್, ಌಕ್ಷನ್ ಸೀಕ್ವೆನ್ಸ್​ನಲ್ಲೂ ಭೇಷ್ ಅನ್ನುವಂತಹ ಪರ್ಫಾಮೆನ್ಸ್ ನೀಡಿದ್ದಾರೆ. ಪ್ರೇಮಿಯಾಗಿ, ಗೆಳೆಯನಾಗಿ, ಮಗನಾಗಿ ಪಾತ್ರಕ್ಕೆ ಜೀವ ತುಂಬಿದ್ದಾರೆ.

ನಟಿ ಸೋನಲ್ ಗ್ಲಾಮರ್ ಬನಾರಸ್​ನ ಅಂದ ಚೆಂದ ಹೆಚ್ಚಿಸಿದೆ. ಧನಿ ಪಾತ್ರಕ್ಕೆ ಈಕೆ ಜೀವ ತುಂಬಿದ ಪರಿ ಅದ್ಭುತ. ಚೆಲುವಿಗೆ ತಕ್ಕನಾದ ಕಂಠವಿರೋ ಗಾಯಕಿಯಾಗಿ ಮನಸ್ಸು ಕದಿಯುತ್ತಾಳೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿರೋ ಸೋನಲ್​ಗೆ ಇದು ಪರ್ಫಾಮೆನ್ಸ್​ಗೆ ಸ್ಕೋಪ್ ಇರೋ ಪಾತ್ರವಾಗಿದ್ದು, ಆಕೆಯ ನಟನಾ ಗಮ್ಮತ್ತು ಇದರಲ್ಲಿ ಎಕ್ಸ್​ಪ್ಲೋರ್ ಆಗಿದೆ.

ಉಳಿದಂತೆ ನಾಯಕಿಯ ಚಿಕ್ಕಪ್ಪ ಪಾತ್ರದಲ್ಲಿ ಅಚ್ಯುತ್, ನಾಯಕನಟನ ತಂದೆ ಪಾತ್ರದಲ್ಲಿ ಡೈನಾಮಿಕ್ ಹೀರೋ ದೇವರಾಜ್, ಸತ್ತವ್ರ ಫೋಟೋ ಕ್ಲಿಕ್ಕಿಸೋ ಡೆತ್ ಫೋಟೋಗ್ರಾಫರ್ ಶಂಭು ಪಾತ್ರದಲ್ಲಿ ಸುಜಯ್ ಶಾಸ್ತ್ರಿ ಅಚ್ಚುಕಟ್ಟಾಗಿ ತಮ್ಮ ಪಾತ್ರಗಳನ್ನು ನಿಭಾಯಿಸಿದ್ದಾರೆ.

ಬನಾರಸ್ ಪ್ಲಸ್ ಪಾಯಿಂಟ್ಸ್

  • ಜಯತೀರ್ಥ ಕಥೆ, ಚಿತ್ರಕಥೆ & ನಿರ್ದೇಶನ
  • ಝೈದ್ ಖಾನ್ ಮನೋಜ್ಞ ಅಭಿನಯ
  • ಸೋನಲ್ ಗ್ಲಾಮರ್ & ಕೆಮಿಷ್ಟ್ರಿ
  • ಸುಜಯ್ ಶಾಸ್ತ್ರಿ ಎಮೋಷನ್ಸ್ & ಹಾಸ್ಯ
  • ಅಜನೀಶ್ ಸಂಗೀತ & ಹಿನ್ನೆಲೆ ಸಂಗೀತ
  • ಅದ್ವೈತ್ ಸಿನಿಮಾಟೋಗ್ರಫಿ
  • ಬನಾರಸ್ ಲೊಕೇಷನ್ಸ್

ಬನಾರಸ್ ಮೈನಸ್ ಪಾಯಿಂಟ್ಸ್

ಚಿತ್ರದ ಮೊದಲಾರ್ಧಕ್ಕೆ ನಿರ್ದೇಶಕ ಜಯತೀರ್ಥ ಕಾವ್ಯಾತ್ಮಕ ಟಚ್ ನೀಡಿದರಾದ್ರೂ, ದ್ವಿತಿಯಾರ್ಧಕ್ಕೆ ಸೈನ್ಸ್ ಟಚ್ ನೀಡಿದ್ದಾರೆ. ಟೈಂ ಟ್ರಾವೆಲ್ ಕಾನ್ಸೆಪ್ಟ್ ನಮ್ಮ ಕನ್ನಡ ಚಿತ್ರರಂಗದ ಮಟ್ಟಿಗೆ ವಿನೂತಕ ಪ್ರಯತ್ನವಾದ್ರೂ, ನೋಡುಗರಿಗೆ ಉಪೇಂದ್ರ ಸಿನಿಮಾಗಳಂತೆ ಹುಳ ಬಿಡೋ ಕಾರ್ಯಕ್ರಮ ಅನಿಸಿದೆ. ಶ್ರೀಸಾಮಾನ್ಯ ಪ್ರೇಕ್ಷಕನಿಗೆ ಕೆಎಂಡ್ ಹಾಫ್ ಸಿನಿಮಾನ ಅರಗಿಸಿಕೊಳ್ಳೋದು ಕೊಂಚ ಕಷ್ಟ ಅನಿಸಬಹುದು. ಉಳಿದಂತೆ ಬನಾರಸ್ ಸಿನಿಮಾ, ಯಾರೂ ಊಹಿಸಲಾಗದಂತಹ ಒಂದೊಳ್ಳೆ ಪ್ರಯತ್ನವಂತೂ ಹೌದು.

ಬನಾರಸ್​ಗೆ ಪವರ್ ಟಿವಿ ರೇಟಿಂಗ್: 3/5

ಬನಾರಸ್ ಫೈನಲ್ ಸ್ಟೇಟ್​ಮೆಂಟ್

ಕಾಶಿ, ವಾರಾಣಸಿ ಹೀಗೆ ಬೇರೆ ಬೇರೆ ಹೆಸರುಗಳಿಂದ ಕರೆಯಲ್ಪಡುವ ಬನಾರಸ್, ವೈರಾಗ್ಯಕ್ಕೆ ಹೆಸರುವಾಸಿಯಾದ ತಾಣ. ಇಂತಹ ಸ್ಥಳದಲ್ಲಿ ಪ್ರೇಮಕಥೆಯೊಂದು ಚಿಗುರೊಡೆಯುವ ಕಲ್ಪನೆಯೇ ಇಂಟರೆಸ್ಟಿಂಗ್. ಸದಾ ಹೊಸತನಕ್ಕೆ ಹಾತೊರೆಯೋ ನಿರ್ದೇಶಕ ಜಯತೀರ್ಥ, ಜಮೀರ್ ಪುತ್ರ ಝೈದ್​ರನ್ನ ಇಂಟ್ರಡ್ಯೂಸ್ ಮಾಡೋಕೆ ಯಾವುದೇ ಅಬ್ಬರ, ಆಡಂಬರ ಇಲ್ಲದೆ ವಿನೂತನ ಪ್ರಯೋಗ ಮಾಡಿದ್ದಾರೆ. ಮರ ಸುತ್ತೋ ಪ್ರೇಮಕಥೆಯೂ ಅಲ್ಲ, ಹೆವಿ ಌಕ್ಷನ ಬ್ಲಾಕ್ಸ್ ಇರೋ ಌಕ್ಷನ್ ಸಿನಿಮಾನೂ ಅಲ್ಲ. ಪೊಯೆಟಿಕ್ ಟಚ್ ಜೊತೆ ಸೈನ್ಸ್ ಫಿಕ್ಷನ್​ನ ಬ್ಲೆಂಡ್ ಮಾಡಿ ಅದ್ಭುತವಾಗಿ ಕಥೆ ಹೆಣೆದಿದ್ದಾರೆ. ಹಿಂದೂ ಧರ್ಮದ ಭಾವನೆಗಳಿಗೆ ಧಕ್ಕೆಯಾಗದಂತೆ ಮುಸ್ಲಿಂ ನಾಯಕ, ಕ್ರಿಶ್ಚಿಯನ್ ನಾಯಕಿಯನ್ನ ಇಟ್ಕೊಂಡು ಬಹಳ ಸೊಗಸಾಗಿ ಸಿನಿಮಾ ಕಟ್ಟಿಕೊಟ್ಟಿದ್ಧಾರೆ. ತಿಲಕ್ ರಾಜ್ ಬಲ್ಲಾಳ್ ಈ ಸಿನಿಮಾನ ಅಷ್ಟೇ ರಿಚ್ ಆಗಿ ಪ್ರೊಡ್ಯೂಸ್ ಮಾಡಿದ್ದಾರೆ. ಒಟ್ಟಾರೆ ಕನ್ನಡ ಚಿತ್ರರಂಗದ ದಿಕ್ಕು ದೆಸೆ ಬದಲಾಗ್ತಿರೋ ಈ ಸುಸಂದರ್ಭದಲ್ಲಿ ಇಂತಹ ವೆರೈಟಿ ಜಾನರ್ ಸಿನಿಮಾ ಬಂದಿರೋದು ಕನ್ನಡಿಗರ ಕ್ರಿಯಾಶೀಲತೆಯನ್ನ ಮೆಚ್ಚುವಂಥದ್ದು.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES