Saturday, January 18, 2025

ಇಂದು ಬನಾರಸ್ ಚಿತ್ರ ರಿಲೀಸ್

ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ನಟನೆಯ ‘ಬನಾರಸ್’ ಸಿನಿಮಾ ಇಂದು ಅದ್ದೂರಿಯಾಗಿ ತೆರೆಗೆ ಅಪ್ಪಳಿಸಿದೆ. ಸುಮಾರು ಒಂದು ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬನಾರಸ್ ಬಿಡುಗಡೆಯಾಗಿದೆ.

ಕನ್ನಡದ ಜೊತೆ ಜೊತೆಗೆ ಹಿಂದಿ, ತಮಿಳು, ಮಲಯಾಳಂ ಹಾಗೂ ತೆಲುಗಿನಲ್ಲೂ ರಿಲೀಸ್ ಆಗಿದ್ದು. ಹೊಸ ನಟನೊಬ್ಬನ ಮೊದಲ ಸಿನಿಮಾ ಈ ಪ್ರಮಾಣದಲ್ಲಿ ರಿಲೀಸ್ ಆಗಿರೋದು ಇದೇ ಮೊದಲು ಎನ್ನುವುದು ದಾಖಲೆ ಇದೆ. ಜಯತೀರ್ಥ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾ ಅಂದುಕೊಂಡಂತೆ ಆಗಿದ್ದರೆ ಕೇವಲ ಕನ್ನಡದಲ್ಲಿ ಮಾತ್ರ ಬಿಡುಗಡೆ ಆಗಬೇಕಿತ್ತು. ನಿರ್ದೇಶಕರು ಕೇವಲ ಇದು ಕನ್ನಡ ಸಿನಿಮಾ ಎಂದೇ ಸ್ಕ್ರಿಪ್ಟ್ ಮಾಡಿದ್ದರು.

ಸಿನಿಮಾ ಶೂಟ್ ಮಾಡ್ತಾ ಮಾಡ್ತಾ ಪ್ಯಾನ್ ಇಂಡಿಯಾ ಚಿತ್ರವಾಗಿ ಬದಲಾಯಿತು ಎನ್ನುತ್ತಾರೆ ಜಯತೀರ್ಥ. ಕನ್ನಡದಲ್ಲಿ 180ಕ್ಕೂ ಹೆಚ್ಚು ಥಿಯೇಟರ್ ನಲ್ಲಿ ಈ ಚಿತ್ರ ಬಿಡುಗಡೆಯಾಗಿದೆ. ಹಿಂದಿಯಲ್ಲಿ 500 ಚಿತ್ರಮಂದಿರಗಳಲ್ಲಿ, ತಮಿಳು ಮತ್ತು ತೆಲುಗಿನಲ್ಲಿ ತಲಾ 150, ಮಲಯಾಳಂನಲ್ಲೂ 50ಕ್ಕೂ ಅಧಿಕ ಚಿತ್ರಮಂದಿರಗಳು ಸಿಕ್ಕಿವೆ ಅಂತೆ. ಹಾಗಾಗಿ ಸಾವಿರಾರು ಚಿತ್ರಮಂದಿರಗಳಲ್ಲಿ ಬನಾರಸ್ ಪ್ರದರ್ಶನ ಕಾಣುತ್ತಿದೆ. ಹಾಗಾಗಿ ಸಹಜವಾಗಿಯೇ ಚಿತ್ರತಂಡಕ್ಕೆ ಪ್ರೇಕ್ಷಕರು ಸಿನಿಮಾ ಹೇಗೆ ಸ್ವೀಕರಿಸುತ್ತಾರೆ ಎಂದು ಕಾದುನೋಡಬೇಕಿದೆ.

RELATED ARTICLES

Related Articles

TRENDING ARTICLES