Wednesday, December 25, 2024

ಸ್ವಾಮೀಜಿ ಆತ್ಮಹತ್ಯೆ ಪ್ರಕರಣ : ತನಿಖೆ ಚುರುಕುಗೊಳಿಸಿದ ಮಾಗಡಿ ಪೋಲಿಸರು

ರಾಮನಗರ : ಬಂಡೆಮಠದ ಬಸವಲಿಂಗ ಶ್ರೀಗಳ ಆತ್ಮಹತ್ಯೆ ಕೇಸ್​​ ಸಂಬಂಧ ಇಂದು ಆರೋಪಿಯನ್ನ ಪೊಲೀಸರು ಸ್ಥಳ ಮಹಜರಿಗೆ ಕರೆತಂದ್ರು. A1 ಆರೋಪಿ ಕಣ್ಣೂರು ಮಠದ ಡಾ.ಮೃತ್ಯುಂಜಯ ಸ್ವಾಮೀಜಿಯನ್ನ ಕರೆದಂತ ಖಾಕಿ ಪಡೆ, ಕಣ್ಣೂರು ಮಠದಲ್ಲಿ ಸ್ಥಳ ಮಹಜರು ನಡೆಸಿದ್ರು. ಮಾಗಡಿ ಇನ್ಸ್‌ಪೆಕ್ಟರ್ ರವಿ ನೇತೃತ್ವದಲ್ಲಿ ಸ್ಥಳ ಮಹಜರು ಮಾಡಲಾಯಿತು.

A2 ಆರೋಪಿ ನೀಲಾಂಬಿಕೆಯನ್ನು ದೊಡ್ಡಬಳ್ಳಾಪುರಕ್ಕೆ ಕರೆದೊಯ್ದು ಆಕೆಯ ನಿವಾಸದಲ್ಲಿ ಸ್ಥಳ ಮಹಜರು ಮಾಡಲಾಯಿತು. A3 ಆರೋಪಿ ಮಹದೇವಯ್ಯನನ್ನ ತುಮಕೂರಿಗೆ ಕರೆದೊಯ್ದು ಸ್ಥಳ ಮಹಜರು ನಡೆಸಲಾಯಿತು. ಪೊಲೀಸರ ಮುಂದೆ ಕಣ್ಣೂರು ಶ್ರೀ ತಪ್ಪೊಪ್ಪಿಕೊಂಡಿದ್ದಾರೆ.

ವಿಡಿಯೋ ಮಾಡಿದ್ದು ತಪ್ಪಾಯ್ತು ಎಂದು ಹೇಳಿದ್ದು, ಬೇರೆ ಸ್ವಾಮೀಜಿಗಳನ್ನ ಟಾರ್ಗೆಟ್‌ ಮಾಡಿಲ್ಲ ಅಂತ ಡ್ರಾಮಾ ಮಾಡಿದ್ದಾರೆ. ಆರೋಪಿ ನೀಲಾಂಬಿಕೆ ಅರೆಸ್ಟ್‌ಗೂ ಮುನ್ನ ಮೊಬೈಲ್‌ನಲ್ಲಿದ್ದ ಡಾಟಾವನ್ನು ಡಿಲೀಟ್​​ ಮಾಡಿದ್ದಾಳೆ. ಹಳೇ ಫೋನ್‌ ಬಚ್ಚಿಟ್ಟು ಅಮಾಯಕಳಂತೆ ಹನಿಲೇಡಿ ನಟನೆ ಮಾಡಿದ್ದಾಳೆ. ಮಠದಿಂದಲೇ ಯುವತಿ ಸ್ವಾಮೀಜಿಗೆ ವಿಡಿಯೋ ಕಾಲ್‌ ಮಾಡಿದ್ಲು ಎಂಬುದು ತನಿಖೆ ವೇಳೆ ತಿಳಿದು ಬಂದಿದೆ. ಮೂವರು ಆರೋಪಿಗಳನ್ನು ಪೊಲೀಸರು ಪ್ರತ್ಯೇಕವಾಗಿ ವಿಚಾರಣೆ ನಡೆಸುತ್ತಿದ್ದಾರೆ.

RELATED ARTICLES

Related Articles

TRENDING ARTICLES