ಬೆಳಗಾವಿ: ವೇದಾವತಿ ನದಿಗೆ ಪಿಲ್ಲರ್ ನಿರ್ಮಾಣ ಕುರಿತ ಶ್ರೀರಾಮುಲು ಬೇಟಿ ಮಾಡಿದ ವಿಚಾರಕ್ಕೆ ಸಂಬಂದಿಸಿದಂತೆ, ಡಿಕೆ ಶಿವಕುಮಾರ್ ಹೇಳಿಕೆ ನೀಡಿರುವುದಕ್ಕೆ, ಸಚಿವ ಶ್ರೀರಾಮುಲು ತಿರುಗೇಟು ನಿಡಿದ್ದಾರೆ.
ಇನ್ನು ಈ ಕುರಿತು ಮಾತನಾಡಿರುವ ಶ್ರೀರಾಮುಲು, ಡಿ ಕೆ ಶಿವಕುಮಾರ್ ಅವರಿಗೆ ಜ್ಞಾನ ಕಡಿಮೆ ಎಂದಿದ್ದಾರೆ. ಜ್ಞಾನ ಇದ್ದ ಮನುಷ್ಯರು ಯಾರೂ ಈ ರೀತಿಯಾಗಿ ಮಾತನಾಡೊಲ್ಲ. ಮೂರುವರೆ ಲಕ್ಷ ಎಕರೆ ಪ್ರದೇಶಕ್ಕೆ ನೀರು ಬರ್ತಿರಲಿಲ್ಲ,ನೆಲ್ಲು ಮತ್ತು ಮೆಣಸಿನಕಾಯಿ ಬೆಳೆ ಒಣಗಿಹೋಗುತ್ತೆ ಅಂದ್ರೆ ಅಲ್ಲಿ ಕೆಲಸ ಮಾಡ್ಸೋದು ತಪ್ಪಾ.ಅಲ್ಲಿ ನಾನು ಹೋಗಿ ಕುಳಿತು ಕೆಲಸ ಮಾಡಿಸಿದ್ದು ತಪ್ಪಾ. ಅದಕ್ಕೆ ಇವರು ಧರಣಿ ಎಂದು ಹೇಳ್ತಾರೆ,ಸರ್ಕಾರಲ್ಲಿರೋರು ಯಾರೂ ಧರಣಿ ಮಾಡೊಲ್ಲ,ಡಿಕೆಶಿಗೆ ಹೋರಾಟ ಎಂದರೇನು ಗೊತ್ತಿಲ್ಲ, ಬಂಗಾರದ ಚಮಚ ಹಿಡ್ಕೊಂಡು ರಾಜಕೀಯಕ್ಕೆ ಬಂದವರು.
ನನ್ನ ಟಾಸ್ಕ್ ಇದ್ದಿದ್ದು ಮೂರುವೆರೆ ಲಕ್ಷ ಎಕರೆಗೆ ನೀರು ಕೊಡಬೇಕು ಅನ್ನೊದಷ್ಟೆ. ನಾನಲ್ಲಿ ಹೋಗಿ ಕುಳಿತು ಸಪೋರ್ಟ್ ಮಾಡಿದ್ದನ್ನ ಇವರು ಧರಣಿ ಕುಳಿತಿದ್ದಾರೆ ಎಂದರೆ ಹೇಗೆ, ಶ್ರೀರಾಮ ಚಂದ್ರನ ಸರ್ಕಾರ ಏನಾಗ್ತಿದೆ ಅಂತ ಡಿಕೆಶಿ ಪ್ರಶ್ನೆ,ಶ್ರೀರಾಮಚಂದ್ರನ ಹೆಸರು ಹೇಳಿ ಅವಮಾನ ಮಾಡಿ ಅವರು ಸ್ಥಾನ ಕಳೆದುಕೊಂಡಿದ್ದಾರೆ.
ಮುಂದೆ ಇವರ ಪರಿಸ್ಥಿಗಿ ಏನಾಗುತ್ತೆ ಅಂತ ನೋಡ್ತಿರಿ. ಅವರಿಗೆ ಮಾಡಲು ಕೆಲಸ ಇಲ್ಲ ಅಧಿಕಾರ ಕಳೆದುಕೊಂಡಿದ್ದಾರೆ,ಎಲ್ಲದರಲ್ಲೂ ಬೈಟು ಬೈಟು ಮಾಡಿಕೊಂಡು ಹೊರಟಿದ್ದಾರೆ.ಅವರು ಮುಖ್ಯಮಂತ್ರಿ ಆಗೋಕೆ ಬಿಟ್ರೆ ತಾನೇ ಇವರು ಮುಖ್ಯಮಂತ್ರಿ ಆಗೋದು,
ರೈತರಲ್ಲಿ ಯಾವುದೇ ಪಾರ್ಟಿ ಇರಲ್ಲ ರಾಜಕಾರಣ ಮಾಡೋದಕ್ಕೆ ಇದೇನಾ ವೇದಿಕೆ. ರಾತ್ರಿ ೧೨ ಗಂಟೆಗೆ ಪೂಜೆ ಮಾಡಿ ಬಂದಿದಿನಿ ಸಧ್ಯ ಬೆಳೆಗೆ ನೀರು ಕೊಡೊಕೆ ಮಾತ್ರ ನಾನು ನಿಂತು ಕೆಲಸ ಮಾಡಿದ್ದಿನಿ.ನಾನು ಹೋರಾಟದಿಂದ ರಾಜಕಾರಣಕ್ಕೆ ಬಂದವನು,
ಅವರ ರೀತಿ ಬಂಗಾರದ ಚಮಚ ಬಾಯಲ್ಲಿ ಹಿಡ್ಕೊಂಡು ರಾಜಕಾರಣಕ್ಕೆ ಬಂದವನಲ್ಲ,ಪಾರ್ಟಿ ಆದೇಶ ಮಾಡಿದ ಹಾಗೆ ಕೆಲಸ ಮಾಡ್ಕೊಂಡು ಹೊಗುತ್ತೇನೆ ಎಂದರು.