ಬೆಂಗಳೂರು: ಸ್ಯಾಂಡಲ್ವುಡ್ನ ಬಹು ಬೇಡಿಕೆಯ ನಟಿ ಅದಿತಿ ಪ್ರಭುದೇವ ಅವರು ಇತ್ತೀಚಿಗೆ ಉದ್ಯಮಿ ಜತೆ ನಿಶ್ಚಿತಾರ್ಥ ಮಾಡಿಕೊಂಡ ಬೆನ್ನಲ್ಲೇ ಮದುವೆ ಯಾವಾಗ ಎಂದು ಕೇಳುತ್ತಿದ್ದ ಅಭಿಮಾನಿಗಳಿಗೆ ಅದಿತಿ ಪ್ರಭುದೇವ ಅವರು ಮದುವೆಯ ದಿನಾಂಕ ರಿವೀಲ್ ಮಾಡಿದ್ದಾರೆ.
ಬರುವ ನವೆಂಬರ್ 27, 28 ರಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ನಲ್ಲಿ ನಟಿ ಅದಿತಿ ಪ್ರಭುದೇವ ಅವರು ಉದ್ಯಮಿ ಯಶಸ್ ಅವರ ಜತೆ ಸಪ್ತಪದಿ ತುಳಿಯಲಿದ್ದಾರೆ. ಅದಿತಿ ಮದುವೆ ಪತ್ರಿಕೆಯು ಸಂಬಂಧಿಗಳಿಗೆ ಹಾಗೂ ಸ್ನೇಹಿತರಿಗೆ ವಿತರಿಸಲಾಗುತ್ತಿದೆ.
ಕಾಫಿ ಎಸ್ಟೇಟ್ ಮಾಲೀಕ, ಉದ್ಯಮಿಯಾಗಿರೋ ಯಶಸ್ ಅವರನ್ನ ವರಿಸಲಿರುವ ಅದಿತಿ ಪ್ರಭುದೇವ ಅವರು, ಕೆಲವೇ ತಿಂಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮನಸ್ಸಿನಲ್ಲೇ ಪ್ರೀತಿಸುತ್ತಿದ್ದ ಅದೆಷ್ಟೋ ಪಡ್ಡೆ ಹುಡುಗರಿಗೆ ಶಾಕ್ ನೀಡಿದ್ದರು.