Monday, December 23, 2024

ವರ್ಷದ ನಂತ್ರ ಖಾನ್.. ಬೆಂಕಿ ಚೆಂಡು ಪಠಾಣ್ ಖದರ್

ಬಾಲಿವುಡ್​​ ಕಿಂಗ್​ ಖಾನ್​​ ಶಾರೂಖ್​ಗೆ ದೇಶದ ಮೂಲೆ ಮೂಲೆಗಳಿಂದ ಹುಟ್ಟು ಹಬ್ಬದ ಶುಭಾಶಯಗಳು ಹರಿದು ಬರ್ತಿವೆ. ಮಧ್ಯರಾತ್ರಿಯಿಂದ್ಲೆ ಶಾರೂಖ್​ ಮನೆ ಮುಂದೆ ಬಿಗಿ ಬಂದೋಬಸ್ತ್​ ಹಾಕಲಾಗಿದೆ. ಮೆಚ್ಚಿನ ನಟನಿಗೆ ಅಭಿಮಾನಿ ದೇವರುಗಳಿಂದ ಉಡುಗೊರೆಗಳು ಹರಿದು ಬರ್ತಿವೆ. ಈ ಶುಭ ಸಂದರ್ಭದಲ್ಲಿ ಕಿಂಗ್​ ಖಾನ್​​​ ಕಡೆಯಿಂದ ಸರ್​ಪ್ರೈಸಿಂಗ್​​​ ಗಿಫ್ಟ್​​ ಸಿಕ್ಕಿದೆ. ಏನದು ಅಂತೀರಾ..? ಮಿಸ್ ಮಾಡದೇ ಈ ಸ್ಟೋರಿ ನೋಡಿ.

  • ಹೈವೋಲ್ಟೇಜ್​ ಆ್ಯಕ್ಷನ್​ ವೆಂಚರ್​​​​ನಲ್ಲಿ ಖಡಕ್​​​ ರೋಲ್​​​..!

ಪ್ರತಿ ವರ್ಷದಂತೆ ಈ ಬಾರಿಯೂ ಕಿಂಗ್​ ಖಾನ್​ ಶಾರೂಖ್​ ಬರ್ತ್​​ಡೇ ಸೆಲೆಬ್ರೇಷನ್​ ಜೋರಾಗಿದೆ. ಸಿನಿಮಾ, ರಾಜಕೀಯ, ಅಭಿಮಾನಿ ಬಳಗ, ಫ್ಯಾಮಿಲಿ ಕಡೆಯಿಂದ ಶುಭಾಶಯಗಳ ಸುರಿಮಳೆಯಾಗ್ತಿದೆ. ಇತ್ತ ರಾತ್ರಿಯಿಂದ್ಲೇ ಮನೆ ಬಳಿ ಜಮಾಯಿಸಿದ್ದ ಅಭಿಮಾನಿಗಳಿಗೆ ಫ್ಲೈಯಿಂಗ್​ ಕಿಸ್​ ಕೊಟ್ಟಿದ್ದಾರೆ ಶಾರೂಖ್​​. ಇದ್ರ ಜತೆಗೆ ಪಠಾಣ್​ ಚಿತ್ರದ ಟೀಸರ್​ ರಿಲೀಸ್​ ಮಾಡೋ ಮೂಲಕ ಶಾರೂಖ್​ ಖಾನ್​​​ ಕಡೆಯಿಂದ ಗುಡ್​​​​ನ್ಯೂಸ್​​​​​ ಸಿಕ್ಕಿದೆ.

54 ರ ಹರೆಯದಲ್ಲೂ ಕಟ್ಟು ಮಸ್ತಾದ ಸಿಕ್ಸ್​ ಪ್ಯಾಕ್​​ ಹೊಂದಿರುವ ಜಬರ್ದಸ್ತ್​ ಹೀರೋ ಶಾರೂಖ್​. ಜಗತ್ತಿನಾದ್ಯಂತ ಕ್ರೇಜಿ ಫ್ಯಾನ್ಸ್​ ಫಾಲ್ಲೋಯಿಂಗ್​​ ಹೊಂದಿರುವ ಶ್ರೀಮಂತ ನಟ. ಪ್ರಾಣಕ್ಕೆ ಪ್ರಾಣ ಕೊಡೋ ಅಭಿಮಾನಿ ಬಳಗ ಹೊಂದಿರುವ ಜನಪ್ರಿಯ ನಟರಲ್ಲೊಬ್ಬರು ಶಾರೂಖ್. ಈ ನಡುವೆ ರಿಲೀಸ್​ ಆಗಿರೋ ಪಠಾಣ್​ ಚಿತ್ರದಲ್ಲಿ ಶಾರೂಖ್​ ಗ್ರ್ಯಾಂಡ್​ ಎಂಟ್ರಿ ಕಂಡು ಫ್ಯಾನ್ಸ್​​ ಥ್ರಿಲ್​​​ ಆಗಿದ್ದಾರೆ.

22 ವರ್ಷಗಳ ಸುದೀರ್ಘ ಜರ್ನಿಯಲ್ಲಿ ಇಂದಿಗೂ ಅದೇ ಚಾರ್ಮ್​ ಹೊಂದಿರುವ ನಟ ಶಾರೂಖ್​​. ಇಂದಿಗೂ ಕಿಂಗ್​​ ಖಾನ್​​​ ಟಾಪ್​ ಮೋಸ್ಟ್​ ನಟರಲ್ಲೊಬ್ಬರು. ಪಠಾಣ್​ ಚಿತ್ರದಲ್ಲಿ ಮಾಸ್​​ ರಗಡ್ ​ಅವತಾರದಲ್ಲಿ ಮಿಂಚ್ತಿರುವ ಶಾರೂಖ್​ ಟೀಸರ್​ ಝಲಕ್​​​ ಮೂಲಕ ಧೂಳೆಬ್ಬಿಸ್ತಿದ್ದಾರೆ.

ಮೈ ನವಿರೇಳಿಸುವ ಡೈಲಾಗ್ಸ್​​ ಎಲ್ಲರನ್ನು ಅಟ್ರ್ಯಾಕ್ಟ್​ ಮಾಡ್ತಿವೆ. ನಾನಿನ್ನು ಬದುಕಿದ್ದೇನೆ ಎನ್ನುವ ಡೈಲಾಗ್ಸ್​ ಎಲ್ಲರನ್ನು ರೋಮಾಂಚನಗೊಳಿಸುತ್ತದೆ. ಅಂತೂ ಪಠಾಣ್ ಟೀಸರ್​​​ ಬರ್ತ್​​ ಡೇ ದಿನದ ಸಂಭ್ರಮವನ್ನು ನೂರು ಪಟ್ಟು ಜಾಸ್ತಿ ಮಾಡಿದೆ. ರಿಲೀಸ್​ ಆದ ಕೆಲವೇ ಕ್ಷಣಗಳಲ್ಲಿ ಮಿಲಿಯನ್ಸ್​​ಗಟ್ಟಲೆ ವೀವ್ಸ್​ ಸಂಪಾದಿಸಿ ದಾಖಲೆ ಬರಿತಿದೆ.

ಜಾನ್​ ಅಬ್ರಾಹಂ, ದೀಪಿಕಾ ಪಡುಕೋಣೆ ಚಿತ್ರದ ಟೀಸರ್​​ನಲ್ಲಿ ಕಾಣಿಸಿಕೊಂಡು ಎಕ್ಸ್​​ಟ್ರಾ ಕಿಕ್​​​ ಕೊಟ್ಟಿದ್ದಾರೆ. 2023 ರ ಜನವರಿಗೆ ತೆರೆಗೆ ಬರಲಿರೋ ಪಠಾಣ್​ ಸಿನಿಮಾ ರಿಲೀಸ್​ಗೂ ಮುನ್ನವೇ ಹೈಪ್​​ ಕ್ರಿಯೇಟ್​ ಮಾಡಿದೆ. ಡಂಕಿ, ಜವಾನ್​​ ಸಿನಿಮಾಗಳ ನಿರೀಕ್ಷೆಯಲ್ಲಿರೋ ಕಿಂಗ್​ ಖಾನ್​ ಫ್ಯಾನ್ಸ್​ಗೆ ಪಠಾಣ್​​ ಭರ್ಜರಿ ಮನರಂಜನೆ ಕೊಡೋ ಮುನ್ಸೂಚನೆ ಕೊಟ್ಟಿದೆ. ಎನಿವೇ ಹ್ಯಾಪಿ ಬರ್ತ್​ ಡೇ ಶಾರೂಖ್ ಖಾನ್​​​.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯುರೋ, ಪವರ್ ಟಿವಿ.

RELATED ARTICLES

Related Articles

TRENDING ARTICLES