Tuesday, December 24, 2024

‘ಸಕ್ಕರೆ ನಾಡು ಮಂಡ್ಯದಲ್ಲೂ ಒಕ್ಕಲಿಗರ ಮೀಸಲಾತಿ ಹೆಚ್ಚಳದ ಕೂಗು.’

ಮಂಡ್ಯ:‘ಸಕ್ಕರೆ ನಾಡು ಮಂಡ್ಯದಲ್ಲೂ ಒಕ್ಕಲಿಗರ ಮೀಸಲಾತಿ ಹೆಚ್ಚಳದ ಕೂಗು’ ಜೋರಾಗಿದೆ. ಮಂಡ್ಯದಿಂದ- ಬೆಂಗಳೂರಿನ ಫ್ರೀಡಂ ಪಾರ್ಕ್‌ಗೆ ಹೊರಟ ಬೃಹತ್ ರ್ಯಲಿ. ಕರ್ನಾಟಕ ಜನಪರ ವೇದಿಕೆ ಹಾಗೂ ನಾಡ ಪ್ರಭು ಕೆಂಪೇಗೌಡರ ಅಭಿಮಾನಿಗಳ ಬಳಗದಿಂದ ಬೃಹತ್ ರ್ಯಾಲಿ. ನಿತ್ಯ ಸಚಿವ ಕೆ.ವಿ.ಶಂಕರೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಗಿದೆ.

ಮಂಡ್ಯದ ರೈತ ಸಭಾಂಗಣದ ಆವರಣದಲ್ಲಿರುವ ನಿತ್ಯ ಸಚಿವ ಶಂಕರೇಗೌಡರ ಪ್ರತಿಮೆ. ಶ್ರೀ ಸಿದ್ದರಾಮ ಚೈತನ್ಯ ಮಹಾಸ್ವಾಮಿ ನೇತೃತ್ವದಲ್ಲಿ ಬೃಹತ್ ರ್ಯಾಲಿ. ಶ್ರೀ ಸಿದ್ದರಾಮ ಚೈತನ್ಯ ಮಹಾಸ್ವಾಮಿ, ತುಮಕೂರು ಜಿಲ್ಲೆಯ ಕಿತ್ನಾಮಂಗಲ ಅರೆಶಂಕರ ಮಠದ ಸ್ವಾಮೀಜಿ. ಒಕ್ಕಲಿಗರಿಗೆ ಶೇ. 12% ರಷ್ಟು ಮೀಸಲಾತಿ ಹೆಚ್ಚಳಕ್ಕೆ ಒತ್ತಾಯ. ಒಕ್ಕಲಿಗರ ಶೇ.4% ರಿಂದ 12% ಗೆ ಹೆಚ್ಚಳಕ್ಕೆ ಆಗ್ರಹ. ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತವಾಗಿದೆ.

ಮಂಡ್ಯದ ನಗರದಲ್ಲಿ ಬೃಹತ್ ಮೆರವಣಿಗೆ ನಡೆಸಿ ಬೆಂಗಳೂರಿನ ಫ್ರೀಡಂ ಪಾರ್ಕ್ ಕಡೆಗೆ ಹೊರಟ ಜನರು. ಬೆಂಗಳೂರಿನೆಡೆಗೆ ಹೊರಟ ಸುಮಾರು 200ಕ್ಕೂ ಹೆಚ್ಚು ಜನರು. ಈ ವೇಳೆ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್ ಗೌಡ ಸೇರಿ ಹಲವರು ಭಾಗಿ.
‘ಸಮುದಾಯ ರಕ್ಷಣೆ ಮಾಡಬೇಕಾದವರಿಂದ ಬರೀ ರಾಜಕೀಯ’.

ಒಕ್ಕಲಿಗ ಸಮುದಾಯದ ರಾಜಕಾರಣಿಗಳ ವಿರುದ್ಧ ಸ್ವಾಮೀಜಿ ಆಕ್ರೋಶ. ಸಿದ್ದರಾಮ ಚೈತನ್ಯ ಮಹಾಸ್ವಾಮಿ, ತುಮಕೂರು ಜಿಲ್ಲೆಯ ಕಿತ್ನಾಮಂಗಲ ಅರೆಶಂಕರ ಮಠದ ಸ್ವಾಮೀಜಿ. ಸಮುದಾಯ ರಕ್ಷಣೆ ಮಾಡಬೇಕಾದವರು ರಾಜಕಾರಣ ಮಾಡಿಕೊಂಡು ಕುಲಿತಿದ್ದಾರೆ.
ಒಕ್ಕಲಿಗರ ಮೀಸಲಾತಿ ಹೋರಾಟಕ್ಕೆ ಜಯ ಸಿಕ್ಕೇ ಸಿಗುತ್ತೆ. ಒಕ್ಕಲಿಗರ ಸಮುದಾಯ ಮೀಸಲಾತಿ ಪೆಡಂಭೂತಕ್ಕೆ ಸಿಕ್ಕಿ ನಲುಗುತ್ತಿದೆ.
ಸಮುದಾಯದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಅವಕಾಶ ಸಿಗುತ್ತಿಲ್ಲ. ಪದವಿ ಪಡೆದ ಯುವಕರಿಗೆ ಉದ್ಯೋಗದ ಅವಕಾಶ ಸಿಗುತ್ತಿಲ್ಲ. ಉದ್ಯೋಗದಿಂದ ಯುವಕರು ವಂಚಿತರಾಗುತ್ತಿದ್ದಾರೆ.

ಸಮುದಾಯ ರಕ್ಷಣೆ ಮಾಡಬೇಕಾದವರು ರಾಜಕಾರಣ ಮಾಡಿಕೊಂಡು ಕುಳಿತಿದ್ದಾರೆ. ಒಕ್ಕಲಿಗ ಸಮುದಾಯ ಮೀಸಲಾತಿಯಿಂದ ವಂಚಿತವಾಗಿದೆ. ನಮ್ಮ ಪರ ಧ್ವನಿ ಎತ್ತಬೇಕಾದವರು ಚುನಾವಣೆಯಲ್ಲಿ ಬ್ಯೂಸಿಯಿದ್ದಾರೆ. ಇತಿಹಾಸದಲ್ಲಿ ಒಕ್ಕಲಿಗರ ಸಮುದಾಯ MLA ಹಿಂದೆ ಹೋಗ್ತಾರೆ.

ಒಕ್ಕಲಿಗರು ರಾಜಕಾರಣಿಗಳ ಹಿಂಬಾಲಕರಾಗಬೇಡಿ. ನಮ್ಮ ಮೀಸಲಾತಿಗಾಗಿ ಹೋರಾಟಕ್ಕೆ ಬನ್ನಿ. ರಾಜಕಾರಣಿಗಳಿಗೆ ರಾಜಕಾರಣ ಮಾಡೋದು ಗೊತ್ತು. ಯಾರ ಕಾಲು ಹಿಡಿಯಬೇಕು, ಓಟ್ ಹೇಗೆ ಹಾಕಿಸಿಕೊಳ್ಳಬೇಕು ಗೊತ್ತಿದೆ. ರಾಜಕಾರಣಿಗಳು ನಮ್ಮ ಸಮಾಜ ಕಾಪಾಡುವುದನ್ನ ಮರೆತಿದ್ದಾರೆ.

ವಿಧಾನ ಸೌಧ ಪ್ರಾರಂಭವಾಗಿ 75 ವರ್ಷವಾಗಿದೆ. ಯಾವ ಒಬ್ಬ ಶಾಸಕ ನಾನು ಒಕ್ಕಲಿಗರ ಮುಖಂಡ ಓಟ್ ಹಾಕಿ ಅಂತ ಅಂದಿಲ್ಲ.
ಯಾವೊಬ್ಬ ಎಂಎಲ್ಎ ಒಕ್ಕಲಿಗರ ಸಮಸ್ಯೆ ಬಗ್ಗೆ ಮಾತನಾಡಿಲ್ಲ. ಶಾಸಕರಾಗಲು ಒಕ್ಕಲಿಗರ ಓಟ್ ಬೇಕು, ಸಿಎಂ ಆಗೋಕೆ ಒಕ್ಕಲಿಗರ ಮೆಜಾರಿಟಿ ಬೇಕು. ಒಕ್ಕಲಿಗರಿಗೆ ಅನ್ಯಾಯ ಆಗ್ತಿದೆ, ಧ್ವನಿ ಎತ್ತುತ್ತಿಲ್ಲ. ಈ ಸಮಾಜದ ನಾಯಕರಲ್ವಾ ಅವರು?
ಯತ್ನಾಳ್ ಪಂಚಮಸಾಲಿ ಲಿಂಗಾಯಿತರಿಗೆ ಮೀಸಲಾತಿ ಕೊಡಿ ಅಂತಾರೆ. ಲಿಂಗಾಯಿತ ಮುಖ್ಯಮಂತ್ರಿ ವಿರುದ್ಧವೇ ಮಾತನಾಡುತ್ತಾರೆ.  ಸಚಿವ ಶ್ರೀರಾಮುಲು ನಾಯಕರಿಗೆ 7.5% ಮೀಸಲಾತಿ ಕೊಡಿಸ್ತೀನಿ ಅಂತಾರೆ. ಆಗಿದ್ರೆ ಒಕ್ಕಲಿಗ ಸಮಾಜದ ರಾಜಕಾರಣಿಗಳು ಏನು ಮಾಡ್ತಿದ್ದಾರೆ?

ನಿಮ್ಮ ರಾಜಕಾರಣ ಮಾಡಲು ಈ ಸಮಾಜ ಬೇಕು. ಏನು ಮಾಡ್ತಿದ್ದೀರಿ ರಾಜಕಾರಣಿಗಳು.? ರಾಜಕಾರಣಿಗಳಿಂದ ಮೀಸಲಾತಿ ಕೊಡಿಸಲು ಸಾಧ್ಯವಿಲ್ಲ. ನಾವು ನಮ್ಮ ಮೀಸಲಾತಿಗಾಗಿ ಹೋರಾಟಕ್ಕೆ ಮುಂದಾಗಬೇಕು ಎಂದು ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು.

RELATED ARTICLES

Related Articles

TRENDING ARTICLES