ಬೆಂಗಳೂರು: ಕೆಲವು ತಿಂಗಳಿನಿಂದ ಭ್ರಷ್ಟರಿಗೆ ಸಿಂಹಸ್ವಪ್ನವಾಗಿರುವ ಲೋಕಾಯುಕ್ತ ದಾಳಿ ರಾಜ್ಯದಲ್ಲಿ ಮುಂದುವರೆದಿದೆ.
ಬೆಂಗಳೂರಿನ ವರ್ತೂರು ಸಬ್ ರಿಜಿಸ್ಟರ್ ಕಛೇರಿ ಬ್ರೋಕರ್ ಗಳ ಹಾವಳಿ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದ್ದು, ದಾಳಿಯಲ್ಲಿ 3.45 ಲಕ್ಷ ರೂ ನಗದು ವಶಕ್ಕೆ ಪಡೆಯಲಾಗಿದೆ.
ಒಟ್ಟು ಈ ದಾಳಿಯಲ್ಲಿ 8 ಜನ ಬ್ರೋಕರ್ ಗಳನ್ನು ವಶಕ್ಕೆ ಪಡೆದ ಲೋಕಾಯುಕ್ತ ಟೀಂ, ಪ್ರತಿ ರಿಜಿಸ್ಟರ್ ಗೆ ಲಂಚ ಪಡೆಯುತ್ತಿದ್ದ ಬ್ರೋಕರ್ ಗಳು, ಲಂಚ ಕೊಡದಿದ್ದರೆ ಕೆಲಸಕ್ಕೆ ಬ್ರೋಕರ್ಗಳು ಅಡ್ಡಿ ಪಡಿಸ್ತಿದ್ದರು.
ಸಾಲು ಸಾಲು ದೂರು ಹಿನ್ನಲೆ ದಾಳಿ ನಡೆಸಿರೊ ಲೋಕಾಯುಕ್ತ ಬೆಂಗಳೂರಿನ ಡಿವಾಯ್ಎಸ್ಪಿ ಅಂತೋಣಿ ಜಾನ್, ಇನ್ಸ್ಪೆಕ್ಟರ್ ಸತೀಶ್ KG ನೇತೃತ್ವದಲ್ಲಿ ಬೆಂಗಳೂರಿನ ಬನ್ನೇರುಘಟ್ಟ, ಯಲಹಂಕ, ಮಹದೇಪುರ, ವರ್ತೂರು, ದೊಮ್ಮಲೂರು, ಬೊಮ್ಮನಹಳ್ಳಿ, ಬೇಗೂರು, ಜೆಪಿನಗರ, ಬನಶಂಕರಿ, ಬಸವನಗುಡಿ, ಕೆಂಗೇರಿ, ನಾಗಾವಾರ ಸಬ್ ರಿಜಿಸ್ಟರ್ ಆಫೀಸ್ ಮೇಲೆ ದಾಳಿ ನಡೆಸಲಾಗಿದೆ.