ಬೆಂಗಳೂರು: ಧಾರ್ಮಿಕ ದತ್ತಿ ಇಲಾಖೆಯಿಂದ ಕಾಶಿ ದರ್ಶನಕ್ಕೆ ಸಕಲ ಸಿದ್ಧತೆ.ಎಂಟು ದಿನಗಳ ಕಾಲ ಭಾರತ್ ಕಾಶಿ ದರ್ಶನ ಯಾತ್ರಾ
ಬೆಂಗಳೂರು ಟು ವಾರಣಾಸಿ ಎರಡು ದಿನ, ಗಂಗಾರತಿಗೂ ವ್ಯವಸ್ಥೆ ಹಾಗೂ ವರಾಣಾಸಿಯಿಂದ ಅಯೋಧ್ಯೆ ಒಂದು ದಿನ ಮತ್ತು ಅಯೋಧ್ಯೆಯಿಂದ ಪ್ರಯಾಗ್ ರಾಜ್ ವೀಕ್ಷಣೆಗೆ ತಯಾರಿನಡೆಸಿದೆ.
4161 ಕಿಲೋ ಮೀಟರ್ ದೂರದ ಕಾಶಿ ಪ್ರಯಾಣವಿದ್ದು, 14 ಬೋಗಿಗಳ ಪೈಕಿ 11 ಬೋಗಿ 3 ಟಯರ್ ಎಸಿ ಹಾಗೂ
14 ಬೋಗಿಗಳ ಮೇಲೂ ಐತಿಹಾಸಿಕ ಸ್ಥಳಗಳ ಬ್ರಾಂಡಿಂಗ್ ಮಾಡಲಾಗಿದೆ. 5000 ಜನ ಮುಜರಾಯಿ ಇಲಾಖೆಯಿಂದ ಆರ್ಥಿಕ ಸಹಾಯ ಮಾಡಿದೆ. 15 ಸಾವಿರ ಭಕ್ತಾಧಿಗಳು ಭರಸಿ ಕಾಶಿ ಯಾತ್ರೆಗೆ ಹೋಗಬಹುದು.
ಊಟ, ಸ್ಥಳೀಯ ವಾಹನದ ವ್ಯವಸ್ಥೆ ಮುಜರಾಯಿ ಇಲಾಖೆಯಿಂದ ಮಾಡಲಾಗಿದೆ. ಅಕ್ಟೋಬರ್ 31 ರಂದು ಬುಕಿಂಗ್ ಆರಂಭ ಮಾಡಲಾಗಿತ್ತು. ಎರಡೇ ದಿನದಲ್ಲಿ ಮೊದಲ ಟ್ರೈನ್ ನಲ್ಲಿ ಹೋಗುವ ಸೀಟ್ ಗಳು ಬುಕಿಂಗ್ ಫುಲ್ ಆಗಿವೆ. ಮೊದಲ ಟ್ರಿಪ್ ನಲ್ಲಿ 704 ಮಂದಿ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. 547 ಭಕ್ತಾಧಿಗಳು ಉಳಿದಂತೆ ಸಿಬ್ಬಂದಿ ಸೇರಿ 704 ಮಂದಿಗೆ ಅವಕಾಶ. ನವೆಂಬರ್ 11ರಂದು ಕಾಶಿ ಯಾತ್ರೆಯ ಮೊದಲ ಟ್ರೈನ್ ಸಂಚಾರವಾಗಲಿದೆ.
ಪ್ರಧಾನಿ ಮೋದಿ ಅವ್ರಿಂದ ಕಾಶಿ ಯಾತ್ರಿ ಟ್ರೈನ್ ಗೆ ಚಾಲನೆ ಸಿಗಲಿದೆ. ನವೆಂಬರ್ 21 ರಂದು ಎರಡನೇ ಟ್ರೈನ್ ಸಂಚಾರ ಮಾಡಲಿದೆ
ಒಂದು ವರ್ಷಕ್ಕೆ 30 ಸಾವಿರ ಭಕ್ತಾಧಿಗಳಿಗೆ ಕಾಶಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಮುಜರಾಯಿ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿಕೆ ನಿಡಿದ್ದಾರೆ.