ಶಿವಮೊಗ್ಗ : ಕಾಂಗ್ರೆಸ್ ಜೆಡಿಎಸ್ ಏನೇ ಸರ್ಕಸ್ ಮಾಡಿದ್ರೂ ಹಿಂದುಳಿದ ಸಮಾಜಕ್ಕೆ ಅತಿ ಹೆಚ್ವು ಅನುಕೂಲ ಆಗಿದ್ದು ಬಿಜೆಪಿಯಿಂದ ಎಂದು ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುಳಿದ ಸಮಾಜ ಬಿಜೆಪಿ ಜೊತೆ ಇದೆ ಅಂತಾ ತೋರಿಸಲು ಅಲ್ಲಿಗೆ ಬಂದಿದ್ದರು. ಕಾಂಗ್ರೆಸ್ ಜೆಡಿಎಸ್ ಏನೇ ಸರ್ಕಸ್ ಮಾಡಿದ್ರೂ ಹಿಂದುಳಿದ ಸಮಾಜಕ್ಕೆ ಅತಿ ಹೆಚ್ವು ಅನುಕೂಲ ಆಗಿದ್ದು ಬಿಜೆಪಿಯಿಂದ, ಆ ಕಾರ್ಯಕ್ರಮ ನೋಡಿ ಕಾಂಗ್ರೆಸ್ ಜೆಡಿಎಸ್ನವರಿಗೆ ಆಶ್ಚರ್ಯ ಆಗಿದೆ. ಹಿಂದುಳಿದ ಸಮಾಜಕ್ಕೆ ಈ ಹಿಂದಿನ ಸರ್ಕಾರಗಳು ಯಾವುದೇ ಅನುದಾನ ಕೊಡಲಿಲ್ಲ ಎಂದರು.
ನಮ್ಮ ಸರ್ಕಾರ ಬಂದ ನಂತರ ಹಿಂದುಳಿದ ವರ್ಗದ ಸಮಾಜಕ್ಕೆ ಅತಿ ಹೆಚ್ಚು ಅನುದಾನ ಕೊಟ್ಟಿದ್ದೇವೆ. ಹಿಂದುಳಿದ ಸಮಾಜದ ಮುಖಂಡರಿಗೆ ಧನ್ಯವಾದ ತಿಳಿಸುತ್ತೇನೆ. ನ. 10 ರಂದು ಬಳ್ಳಾರಿಯಲ್ಲಿ ಎಸ್ ಟಿ ಸಮಾವೇಶ ನಡೆಯಲಿದೆ. ದಲಿತರಿಗೆ, ಹಿಂದುಳಿದವರಿಗೆ ಅತಿ ಹೆಚ್ಚಿನ ಅನುಕೂಲ ಮಾಡ್ತಿರೋದು ಬಿಜೆಪಿ ಎಂದು ಹೇಳಿದರು.
ಇನ್ನು, ಸಿದ್ದರಾಮಯ್ಯ ವಿರುದ್ದ ಲೋಕಾಯುಕ್ತದಲ್ಲಿ ಪ್ರಕರಣ ದಾಖಲು ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ನವರು ಕೇವಲ ಆರೋಪ ಮಾಡ್ತಿದ್ದರು. ಆದರೆ ನಾವು ಸಿದ್ದರಾಮಯ್ಯ ಅವರು ಚೆಕ್ ಮುಖಾಂತರ ಲಂಚ ಪಡೆದಿರೋದನ್ನು ದಾಖಲಾತಿ ಸಮೇತ ದೂರು ನೀಡಿದ್ದೇವೆ. ಹೀಗಾಗಿಯೇ ಸಿದ್ದರಾಮಯ್ಯ ಏನು ಮಾತನಾಡದೇ ಬಾಯಿ ಮುಚ್ಚಿಕೊಂಡು ಸುಮ್ಮನಿದ್ದಾರೆ. ಚುನಾವಣೆ ಮುಗಿಯುವವರೆಗೂ ಮೋದಿ ರಾಜ್ಯಕ್ಕೆ ಬರುತ್ತಾನೆ ಇರ್ತಾರೆ. ಮೋದಿ ಒಂದು ಸುತ್ತು ಬಂದು ಕೈ ಬೀಸಿಕೊಂಡು ಹೋದ್ರೆ ರಾಹುಲ್ ಗಾಂಧಿ ತೂರಿಕೊಂಡು ಹೋಗ್ತಾರೆ ಎಂದರು.
ಅದಲ್ಲದೇ, ಹಿಂದುಳಿದ ವರ್ಗದವರ ಸಿಎಂ ಮಾಡಿ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸಿದ್ದರಾಮಯ್ಯ ಈ ಜೀವನದಲ್ಲಿ ಮತ್ತೆ ಸಿಎಂ ಆಗುವುದಿಲ್ಲ. ಕಾಂಗ್ರೆಸ್ ನವರು ಅಂಬೇಡ್ಕರ್ ಸೋಲಿಸಿದ್ರು, ಜಗಜೀವನ್ ರಾಂ ಸೋಲಿಸಿದ್ರು.ಈಗ ಏನು ಇದ್ದಕ್ಕಿದ್ದಂತೆ ಹಿಂದುಳಿದವರ ಮೇಲೆ ಪ್ರೀತಿ ಬಂದಿದೆ. ಹಿಂದುಳಿದ ವರ್ಗದ ಮೋದಿ ಅವರನ್ನು ಪಿಎಂ ಮಾಡಿದ್ದು ಬಿಜೆಪಿ.ಕಾಂಗ್ರೆಸ್ ನವರು ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.