Sunday, December 22, 2024

ಗರ್ಭಿಣಿ ಸೇರಿ ಇಬ್ಬರು ಕಂದಮ್ಮಗಳು ಸಾವು; ವೈದ್ಯೆ ಉಷಾ, ನರ್ಸ್​ ಅಮಾನತು.!

ತುಮಕೂರು; ಜಿಲ್ಲಾಸ್ಪತ್ರೆಯ ವೈದ್ಯರ ಎಡವಟ್ಟಿಗೆ ಬಾಣಂತಿ ಸೇರಿ ಇಬ್ಬರು ಮಕ್ಕಳು ಸಾವು ಹಿನ್ನಲೆಯಲ್ಲಿ ಜಿಲ್ಲಾಸ್ಪತ್ರೆ ವೈದ್ಯೆ ಉಷಾ, ನರ್ಸ್​ ಸೇರಿ ಇತರೆ ಸಿಬ್ಬಂದಿಗಳು ಅಮಾನತು ಮಾಡಲಾಗಿದೆ.

ತುಮಕೂರು ಜಿಲ್ಲಾಸ್ಪತ್ರೆಗೆ ಬಾಣಂತಿ ಮಹಿಳೆಯೋರ್ವಳ ಪ್ರಸವ ವೇಳೆ ಬಾಣಂತಿ ಹಾಗೂ ಅವಳಿ ಶಿಶುಗಳ ಸಾವಿಗೀಡಗಿರುವ ಘಟನೆ ತುಮಕೂರು ನಗರದ ಭಾರತಿನಗರದ ಅಭಯ ಆಂಜನೇಯನ ಸ್ವಾಮಿ ದೇವಸ್ಥಾನದ ಬಳಿ ನಡೆದಿತ್ತು. ಈ ಸಾವಿಗೆ ವೈದ್ಯರ ನಿರ್ಲಕ್ಷವೇ ಕಾರಣ ಎನ್ನಲಾಗಿದೆ.

9 ತಿಂಗಳ ತುಂಬು ಗರ್ಭಿಣಿ ಆಗಿದ್ದ ಕಸ್ತೂರಿ, ನಿನ್ನೆ ಸಂಜೆ ಮನೆಯಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಆಕೆಯ ಕಷ್ಟ ನೋಡಲಾರದೇ ಸ್ಥಳೀಯರೇ ಹಣ ಸೇರಿಸಿ ತುಮಕೂರು ಜಿಲ್ಲಾಸ್ಪತ್ರೆಗೆ ಕಳಿಸಿದರು. ಪಕ್ಕದ ಮನೆಯ ಅಜ್ಜಿಯ ಜೊತೆ ತುಮಕೂರು ಜಿಲ್ಲಾಸ್ಪತ್ರೆಗೆ ಹೋಗಿದ್ದರು. ಈ ವೇಳೆ ಸರ್ಕಾರಿ ಆಸ್ಪತ್ರೆಯಲ್ಲಿ ತಾಯಿ ಕಾರ್ಡ್ ಇಲ್ಲ ಎಂದು ಚಿಕಿತ್ಸೆ ಕೊಡದೇ ವೈದ್ಯರು ವಾಪಸ್​ ಕಳುಹಿಸಿದ್ದಾರೆ.

ವೈದ್ಯೆಯ ಬಳಿ ಅಂಗಲಾಚಿ ಕೇಳಿದ್ರು ಚಿಕಿತ್ಸೆ ಕೊಡದೇ ತಾಯಿ ಕಾರ್ಡ್​ ಇರದೇ ನಾವು ಚಿಕಿತ್ಸೆ ಕೊಡಲ್ಲ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಬರೆದುಕೊಂಡ್ತಿನಿ ಅಂದಿರೋ ವೈದ್ಯೆರು. ಹಣವಿಲ್ಲದೇ ಹೊಟ್ಟೆ ನೋವಿನಲ್ಲೇ ಮನೆಗೆ ವಾಪಸ್ ಬಣಂತಿ ಬಂದಿದ್ದಳು.

ಇಂದು ಬೆಳಗಿನ ಜಾವ ಹೊಟ್ಟೆನೋವಿನಿಂದ ಕಿರುಚಾಡಿ ಎರಡು ಮಗುವಿಗೆ ಜನ್ಮ ನೀಡಿದ್ದ ತಾಯಿ. ನಂತ ಎರಡು ಮಕ್ಕಳು ಹಾಗೂ ತಾಯಿ ಮೃತರಾಗಿದ್ದಾರೆ. ತಾಯಿ ಕಾರ್ಡ್, ಆಧಾರ್ ಕಾರ್ಡ್ ಕೊಡುವಂತೆ ಸೂಚಿಸಿದ್ದ ಜಿಲ್ಲಾಸ್ಪತ್ರೆ ಸಿಬ್ಬಂದಿ ಆಗ ತಾಯಿ ಕಾರ್ಡ್ ಹೊಂದಿರದ ಕಸ್ತೂರಿ, ಈಗ ನಿರ್ಲಕ್ಷ್ಯವಹಿಸಿದ ಸಿಬ್ಬಂದಿಗಳನ್ನ ಅಮಾನತು ಮಾಡಿ ಆದೇಶಿಸಲಾಗಿದೆ.

RELATED ARTICLES

Related Articles

TRENDING ARTICLES