ಬೆಂಗಳೂರು: ಕೃಷಿ ವಿವಿ ಪ್ರತಿ ಸಲದಂತೆ ಈ ಸಲವೂ ಕೃಷಿ ಮೇಳ ಆಯೋಜಿಸಿದ ಹಿನ್ನೆಲೆಯಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ರವರು ಕಾರ್ಯಕ್ರಮದಲ್ಲಿ ಎಲ್ಲರಿಗೂ ನಮಸ್ಕಾರ, ನಿಮ್ಮೆಲ್ಲರನ್ನು ಹಾರ್ಥಿಕವಾಗಿ ಸ್ವಾಗತಿಸುತ್ತೇನೆ ಎಂದು ಕನ್ನಡದಲ್ಲಿ ಸ್ವಾಗತ ಭಾಷಣ ಶುರುಮಾಡಿದ್ದಾರೆ.
ಕೃಷಿ ವಿವಿ ಪ್ರತಿ ಸಲದಂತೆ ಈ ಸಲವೂ ಕೃಷಿ ಮೇಳ ಆಯೋಜಿಸಿದೆ. ಇದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ.ಕೃಷಿಯಲ್ಲಿ ನವೋದ್ಯಮ ಎಂಬ ಪರಿಕಲ್ಪನೆಯಡಿ ಮೇಳ ಆಯೋಜಿಸಲಾಗಿದೆ. ವಿಚಾರ ಸಂವಾದದ ಮೂಲಕ ಕೃಷಿ ಬಗೆಗಿನ ಜ್ಞಾನ ಹಂಚಲಾಗುತ್ತದೆ. ಕೃಷಿಯಲ್ಲಿನ ತಂತ್ರಜ್ಞಾನ, ಆಹಾರ ಧಾನ್ಯ, 30 ಸ್ಟಾರ್ಟ್ ಅಪ್ ಹೀಗೆ ಹಲವು ವಿಚಾರಗಳು ವಿಶೇಷತೆಯಾಗಿದೆ
ಕೃಷಿಕರ ಆದಾಯ ಹೆಚ್ಚಿಸುವತ್ತ ಗಮನ ಕೊಡಲಾಗಿದೆ.
9 ಹೊಸ ತಳಿಗಳ ಬಿಡುಗಡೆ ಮಾಡಲಾಗಿದೆ, ಇದಕ್ಕಾಗಿ ವಿವಿಗೆ ನನ್ನ ಅಭಿನಂದನೆ. ಬೆಂಗಳೂರು ಕೃಷಿ ವಿವಿ ಈ ವರ್ಷವೂ ಸಾಧಕ ಕೃಷಕರಿಗೆ ಗೌರವ ನೀಡಿದೆ. ಕೃಷಿಕರನ್ನು ಗೌರವಿಸಿ ನಮ್ಮ ಗೌರವ ಹೆಚ್ಚಾಗಿದೆ. ಕೃಷಿಕರ ಸಾಧನೆಯಿಂದ ಪ್ರೋತ್ಸಾಹಗೊಂಡು ಹೆಚ್ಚೆಚ್ಚು ಜನ ಕೃಷಿಯತ್ತ ತೊಡಗಬೇಕು. ನಾನು ಕೃಷಿ ಕುಟುಂಬದವನು. ನನ್ನ ತಂದೆ, ತಾಯಿ ಕೃಷಿಕರು, ನನ್ನ ಮಗ ಸೊಸೆಯೂ ಕೃಷಿ ವಿಭಾಗದಲ್ಲಿ ಕಾರ್ಯನಿರ್ವಯಿಸುತ್ತಿದ್ದಾರೆ ಎಮದು ತಿಳಿಸಿದರು.