ಬೆಂಗಳೂರು: ಶಾಲಾ ಕಾಲೇಜುಗಳಲ್ಲಿ ಇನ್ಮುಂದೆ ಧ್ಯಾನ ಕಡ್ಡಾಯ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಆದೇಶಿದ ಹಿನ್ನಲೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಚಿವರ ವಿರುದ್ಧ ಟ್ವೀಟ್ ವಾರ್ ನಡೆಸಿದ್ದಾರೆ.
ಶಾಲೆಗಳಲ್ಲಿ ಯೋಗ ಧ್ಯಾನ ಮಾಡಿಸುವುಕ್ಕೆ ನನ್ನ ವಿರೋಧ ಇಲ್ಲ. ಸರ್ಕಾರ ಮೊದಲು ಶಾಲೆಗೆ ಬೇಕಾದ ಬೋಧನಾ ಸಾಮಗ್ರಿಗಳನ್ನು ಒದಗಿಸಬೇಕು. ಶಿಕ್ಷಕರು ನೇಮಕಾತಿ ಮಾಡಬೇಕು. ಅದ್ರಲ್ಲೂ ಕ್ರೀಡಾ, ಸಂಗೀತ ,ಕಲೆ ಶಿಕ್ಷಕರ ನೇಮಕಾತಿ ಮಾಡುಕೊಳ್ಳಬೇಕು. ಆದ್ರೆ ಇದನ್ನೆಲ್ಲ ಬಿಟ್ಟು ಸರ್ಕಾರ ಯೋಗ, ಧ್ಯಾನ ಮಾಡಿಸೊಕ್ಕೆ ಹೊರಟಿರೋದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಕೊರೊನಾ ಸಮಯದಲ್ಲಿ ಮಕ್ಕಳಿಗೆ ಆನ್ ಲೈನ್ ಕ್ಲಾಸ್ ಎಂದು ಮೊಬೈಲ್ ಹುಚ್ಚು ರಾಜ್ಯ ಸರ್ಕಾರ ಹಚ್ಚಿದೆ. ಈಗ ಆ ಮೊಬೈಲ್ ಹುಚ್ಚು ಬಿಡಿಸುಲು ಈ ಧ್ಯಾನ ಯೋಗ ನಾ ಎಂದು ಆದೇಶ ಹೊರಡುಸುತ್ತಿದ್ದಾರೆ ಎಂದರು.
ಬಿ.ಸಿ ನಾಗೇಶ್ ಶಿಕ್ಷಣ ಸಚಿವರಾಗಿದ್ದಾಗಿಂದ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುವೆ. ಪಠ್ಯ ಪುಸ್ತಕ ವಿವಾದ, ಶಿಕ್ಷಕರ ನೇಮಕಾತಿ ಹಗರಣವಾಗಿದೆ. ಮಕ್ಕಳು ಆಟ ಆಡುತ್ತ ಕುಣಿಯುತ್ತ ಪಾಠ ಕೇಳುತ್ತ ಬೇಳೆಯಬೇಕು. ಆದ್ರೆ ಸರ್ಕಾರ ಬಲವಂತವಾಗಿ ಮಕ್ಕಳನ್ನು ಕೊಣೆಯಲ್ಲಿ ಕೂಡಿ ಹಾಕಿ ಧ್ಯಾನ ಯೋಗ ಮಾಡಿಸೊಕ್ಕೆ ಹೊರಟಿದೆ ಮಕ್ಕಳಿಗಿಂದ ಶಿಕ್ಷಣ ಸಚಿವರಿಗೆ ಯೋಗ ಧ್ಯಾನದ ಅವಶ್ಯಕತೆ ಇದೆ ಎಂದು ಸಚಿವರ ವಿರುದ್ಧ ಕಿಡಿಕಾರಿದ್ದಾರೆ.