ಬೆಂಗಳೂರು: ಚಾಮರಾಜಪೇಟೆ ನಾಗರಿಕರ ಒಕ್ಕೂಟ ವೇದಿಕೆಯಿಂದ ಆಶೋಕ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಕನ್ನಡ ರಾಜ್ಯೋತ್ಸವ ಮಾಡ್ತೀವಿ ಅಂತಾ ಮೀಸೆ ತಿರುವಿಕೊಂಡು ಹೇಳಿದ ಆರ್ ಆಶೋಕ್ ಈಗ ನಾಪತ್ತೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವ ಆರ್ ಆಶೋಕ್ ವಿರುದ್ಧ ಸ್ಪೋಟಗೊಂಡ ಆಕ್ರೋಶ.
ಇನ್ನು ರಾಜ್ಯೋತ್ಸವ ಕ್ಕೂ ಅವಕಾಶ ಕೊಟ್ಟಿಲ್ಲ,15 ದಿನ ಸರ್ಕಾರಕ್ಕೆ ಗಡುವು ಕೊಡ್ತೀವಿ ಎಂದು ರುಕ್ಮಾಂಗದ ಆಕ್ರೋಶ.ರಾಜ್ಯೋತ್ಸವ ಆಚರಣೆಗೆ ಅವಕಾಶ ಕೊಡಬೇಕು.ಇಲ್ಲದೇ ಇದ್ರೇ ನಾವು ಉಗ್ರ ಹೋರಾಟ ಮಾಡ್ತೀವಿ.ಈದ್ಗಾ ಮೈದಾನ ವಿಚಾರದಲ್ಲಿ ಬಿಜೆಪಿ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ಕಂದಾಯ ಇಲಾಖೆಯ ಆಸ್ತಿ ಅಂತಾ ಸುಗ್ರೀವಾಜ್ಞೆ ಹೊರಡಿಸಲಿ.ವಿಳಂಭ ಯಾಕೆ ಮಾಡ್ತಾ ಇದೆ.
ಸಮಸ್ಯೆ ಸಮಸ್ಯೆಯಾಗಿಯೇ ಇರಬೇಕಾ. ಜಮೀರ್ ಹಾಗೂ ಆರ್ ಆಶೋಕ್ ಮಧ್ಯೆ ಅಡ್ಜೆಸ್ಟ್ ಮೆಂಟ್ ರಾಜಕೀಯ ನಡೆಯುತ್ತಿದೆ.
ಇವರಿಬ್ಬರು ಅಡ್ಜೆಸ್ಟ್ ಮೆಂಟ್ ಮಾಡಿಕೊಂಡಿದ್ದಾರೆ. ಎಂದು ಚಾಮರಾಜ ಪೇಟೆ ನಾಗರೀಕರ ಒಕ್ಕೂಟದ ಮುಖಂಡ ರುಕ್ಮಾಂಗದ ಆಕ್ರೋಶ ವ್ಯಕ್ತಪಡಿಸಿದ್ದಾರೆ.