ಬೆಂಗಳೂರು : ಹೈ- ಫೈ ಪ್ರಯಾಣದ ಸುಖ ನೀಡೋ ಬಸ್ ಗಳು ಅಂದರೆ ವೋಲ್ವೋ ಬಸ್ ಗಳು.ಈ ಬಸ್ ಗಳು ರಸ್ತೆಗಿಳಿದ ಆರಂಭದಲ್ಲಿ ಅದ್ರಲ್ಲಿ ಓಡಾಡೋದು ಬೆನ್ಜ್ ಕಾರಿನಲ್ಲಿ ಓಡಾಡಿದಷ್ಟೇ ಪ್ರೆಸ್ಟೀಜ್ ವಿಷ್ಯ.ಈಗಾಗಲೇ ಈ ಬಸ್ ಗಳನ್ನ ಖರೀದಿಸಿ ಬಿಎಂಟಿಸಿ ಅಂತೂ ಮುಳುಗುವ ಹಡಗು ಆಗ್ಬಿಟ್ಟಿದೆ.ಆದ್ರೆ,ಇದೀಗ ಕೆಎಸ್ಆರ್ಟಿಸಿ ಕೂಡ ಇದೇ ದಾರಿಯತ್ತ ಸಾಗೋ ಎಡವಟ್ಟಿನ ಐಡಿಯಾ ಮಾಡಿದೆ.
ಕೊರೊನಾ ಬಂದ ಬಳಿಕ ನಿಗಮದ ಆರ್ಥಿಕ ಪರಿಸ್ಥಿತಿ ಶೋಚನೀಯವಾಗಿದೆ. ನೌಕರರ ಸಂಬಳ ನೀಡೋದಕ್ಕೆ ಸಾಧ್ಯವಾಗ್ತಿಲ್ಲ.ಆಸ್ತಿ,ಕಟ್ಟಡಗಳನ್ನು ಅಡಮಾನ ಇಡೋ ಪರಿಸ್ಥಿತಿ ಬಂದಿದೆ.ಕೋವಿಡ್ ಇಳಿಕೆ ಬಳಿಕವೂ ಶೇ.10 ರಷ್ಟು ಐಷಾರಾಮಿ ಬಸ್ ಗಳು ಇನ್ನೂ ಕಾರ್ಯಾಚರಣೆ ಆಗದೆ ಡಿಪೋಗಳಲ್ಲಿ ನಿಂತಿವೆ. ಇಂತಹ ಸಂದರ್ಭದಲ್ಲಿಯೂ ಅಧಿಕಾರಿಗಳು ಕಮಿಷನ್ ಅಸೆಗೆ ವೋಲ್ವೋ ಕಂಪನಿಯ ಟಾಪ್ ಎಂಡ್ ಸ್ಲೀಪರ್ ಬಸ್ ಗಳ ಮೇಲೆ ವ್ಯಾಮೋಹ ಹೆಚ್ಚಾಗಿದೆ.ಮೊದಲ ಹಂತದಲ್ಲಿ ವಿಶ್ವದರ್ಜೆಯ 50 ಬಸ್ ಖರೀದಿಗೆ ಯೋಜನೆ ರೂಪಿಸಲಾಗಿದೆ.
ನಿಗಮದಲ್ಲಿ ನಾರ್ಮಲ್ ಬಸ್‌ಗಳಿಗೆ ಹೆಚ್ಚಿನ ಬೇಡಿಕೆ ಇದೆ.ಆದ್ರೂ ಅಧಿಕಾರಿಗಳು ಐಷಾರಾಮಿ ಬಸ್‌ಗಳ ಹಿಂದೆ ಬಿದ್ದಿದ್ದಾರೆ. ಐಷಾರಾಮಿ ಬಸ್ ಖರೀದಿ ಉದ್ದೇಶವಾದ್ರೂ ಏನು?ಆರ್ಥಿಕ ಸಂಕಷ್ಟದಲ್ಲಿರುವಾಗ ಬಸ್ ಖರೀದಿ ಬೇಕಾ.?ಇರೋ ಐಷಾರಾಮಿ ಬಸ್‌ಗಳಿಗೆ ಜನರಿಲ್ಲದಿರುವಾಗ ಹೊಸ ಬಸ್ ಗೆ ಜನ ಬರ್ತಾರಾ ಎಂಬ ಅನುಮಾನಗಳು ಮೂಡುತ್ತಿವೆ.
ಒಟ್ಟಿನಲ್ಲಿ ಕೆಎಸ್ಆರ್ಟಿಸಿ ಹೈಟೆಕ್ ಬಸ್ಗಳ ಖರೀದಿ ಜಪ ಮಾಡೋಕೆ ಶುರು ಮಾಡಿದೆ. ಆದ್ರೆ, ಸದ್ಯದ ನಿಗಮದ ಆರ್ಥಿಕ ಪರಿಸ್ಥಿತಿಯಲ್ಲಿ ಕೋಟಿ ಕೋಟಿ ಮೌಲ್ಯದ ಬಸ್ ಗಳನ್ನ ಕೊಳ್ಳೋಕಾಗುತ್ತಾ ಅನ್ನೋ ಪ್ರಶ್ನೆ ಎದುರಾಗಿದೆ.ಮಾತ್ರವಲ್ಲ ಕೊಳ್ಳೋ ಅವಶ್ಯಕತೆಯಾದ್ರೂ ಯಾಕಿದೆ ಅನ್ನೋ ಪ್ರಶ್ನೆ ಎದುರಾಗುತ್ತೆ.
ಕೃಷ್ಣಮೂರ್ತಿ ಪವರ್ ಟಿವಿ ಬೆಂಗಳೂರು.