Wednesday, January 22, 2025

ಇಶಾ ಆಯ್ತು.. ಆರ್ಟ್​ ಆಫ್ ಲಿವಿಂಗ್​ನಲ್ಲೂ ಕಾಂತಾರ

ಎಲ್ಲೆಲ್ಲಿ ನೋಡಲಿ ನಿನ್ನನ್ನೆ ಕಾಣುವೆ. ಈ ಹಾಡು ಸದ್ಯ ಕಾಂತಾರ ಸಿನಿಮಾಗೆ ಸೂಕ್ತ ಅನಿಸುತ್ತೆ. ಯೆಸ್​​.. ದೊಡ್ಡ ದೊಡ್ಡ ಘಟಾನುಘಟಿಗಳ ಜೈಕಾರದಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿರೋ ಕಾಂತಾರ ಚಿತ್ರಕ್ಕೆ ಎಲ್ಲಾ ಕಡೆಗಳಲ್ಲೂ ಮೆಚ್ಚುಗೆಯ ಮಹಾಪೂರವೇ ಹರಿದಿದೆ. ಇದೀಗ ಆರ್ಟ್​ ಆಫ್​ ಲಿವಿಂಗ್​ ಸರದಿ. ಕಾಂತಾರ ಆಧ್ಯಾತ್ಮಿಕ ರಂಗದಲ್ಲೂ ಕಮಾಲ್​ ಮಾಡ್ತಿದೆ. ಏನ್​​ ಈ ಸರ್​​​ಪರೈಸಿಂಗ್​ ಸುದ್ದಿ ಅಂತೀರಾ..? ನೀವೇ ಓದಿ.

  • ರಿಷಬ್​ ಆ್ಯಕ್ಟಿಂಗ್​ ಮೆಚ್ಚಿದ ಗುರು ರವಿಶಂಕರ್​ ಗುರೂಜಿ..!

ದಶದಿಕ್ಕುಗಳಲ್ಲೂ ಕಾಂತಾರ ಕಂಪು ಸೂಸಿದೆ. ಎಲ್ಲಿ ನೋಡಿದ್ರೂ ಕಾಂತಾರ ಚಿತ್ರದ ಬಗ್ಗೆಯೇ ಟಾಕು. ದೇಶ ವಿದೇಶಗಳಲ್ಲೂ ರಿಷಬ್​​ ಪ್ರಾಜೆಕ್ಟ್​ಗೆ ಫುಲ್​ ಮಾರ್ಕ್ಸ್​ ಸಿಕ್ಕಿದೆ. ಇತ್ತೀಚೆಗೆ ಆಧ್ಯಾತ್ಮಿಕ ಗುರು ಸದ್ಗುರು ಆಶ್ರಮ ಇಶಾ ಫೌಂಡೇಷನ್​​ನಲ್ಲಿ ಕಾಂತಾರ ಸ್ಟ್ರೀಮ್​ ಆಗಿತ್ತು. ಆಶ್ರಮದ ಶಿಷ್ಯರೆಲ್ಲಾ ಸಿನಿಮಾ ನೋಡಿ ಮಂತ್ರಮುಗ್ಧವಾಗಿದ್ದರು. ಇದೀಗ ಆ ಸಾಲಿಗೆ ಮತ್ತೊಬ್ಬ ಗುರುಗಳು ಸೇರಿಕೊಂಡಿದ್ದಾರೆ.

ಬೆಂಗಳೂರಿನ ಆರ್ಟ್​ ಆಫ್​ ಲಿವಿಂಗ್​​ನ ಆಶ್ರಮದಲ್ಲಿ ಕಾಂತಾರ ಚಿತ್ರವನ್ನು ಪ್ರದರ್ಶಿಸಲಾಗಿದೆ. ಆಧ್ಯಾತ್ಮಿಕ ಚಿಂತಕ, ಭಕ್ತಾಧಿಗಳ ನೆಚ್ಚಿನ ಆರಾಧ್ಯ ಧೈವ ರವಿಶಂಕರ್​ ಗುರೂಜಿ ಸಿನಿಮಾ ನೋಡಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಈ ಮೂಲಕ ಮತ್ತೊಮ್ಮೆ ರಿಷಬ್​ ನಿರ್ದೇಶನದ ಕಾಂತಾರ ಚಿತ್ರಕ್ಕೆ  ನೂರಾನೆ ಬಲ ಬಂದಿದೆ. ಸ್ವಾಮೀಜಿಗಳು, ಸನ್ಯಾಸಿಗಳ ಪ್ರಶಂಸೆಯಲ್ಲಿ ಕಾಂತಾರ ಚಿತ್ರಕ್ಕೆ ಕಿಕ್​ಸ್ಟಾರ್ಟ್​ ಸಿಕ್ಕಿದೆ.

ರಿಷಬ್​ ಆ್ಯಕ್ಟಿಂಗ್​ ಅದ್ಭುತವಾಗಿದೆ. ಈ ಮೂಲಕ ಕರ್ನಾಟಕಕ್ಕೆ ಕಾಂತಾರ ಹೆಮ್ಮೆ ತಂದಿದೆ. ಕಥೆ ಹೇಳುವ ರೀತಿ ತುಂಬಾ ಚೆನ್ನಾಗಿದೆ. ಕರಾವಳಿ ಸಂಸ್ಕೃತಿ ಸುಂದರವಾಗಿದೆ ಎಂದಿದ್ದಾರೆ. ಈ ಕುರಿತಾದ ವೀಡಿಯೋವನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದು ಸಖತ್​ ಸೆನ್ಸೇಷನ್​ ಕ್ರಿಯೇಟ್ ಮಾಡ್ತಿದೆ.

ಸೆಪ್ಟೆಂಬರ್​ 30 ರಂದು ತೆರೆ ಕಂಡ ಕಾಂತಾರ ಎಗ್ಗಿಲ್ಲದೆ ಮುನ್ನುಗ್ತಿದೆ. ಹಲವು ವಿವಾದಗಳ ನಡುವೆಯೂ ಜನಮನ್ನಣೆ ಪಡೆದು ಅಬ್ಬರಿಸ್ತಿದೆ. ರಿಲೀಸ್​ ಆದ ಎಲ್ಲಾ ಥಿಯೇಟರ್​ಗಳಲ್ಲೂ ಹೌಸ್​​​​ಫುಲ್​ ಪ್ರದರ್ಶನ ಕಾಣ್ತಿರೋ ಕಾಂತಾರ ಪರಭಾಷೆಗಳಿಗೂ ಡಬ್​ ಆಗಿ ಧೂಳೆಬ್ಬಿಸ್ತಿದೆ. ಬರೋಬ್ಬರಿ 250 ಕೋಟಿಗೂ  ಅಧಿಕ ಕಲೆಕ್ಷನ್​​ ಬಾಚಿಕೊಂಡಿರೋ ಕಾಂತಾರ ಚಿತ್ರಕ್ಕೆ ರವಿಶಂಕರ್​ ಮಾತುಗಳು ಶಕ್ತಿ ತುಂಬಿವೆ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES