ಬೆಂಗಳೂರು: ರಾಜ್ಯದಲ್ಲಿ ಒಟ್ಟು 5 ಸಾವಿರ ಪೊಲೀಸ್ ಪೇದೆಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, ರಾಜ್ಯ ಪೊಲೀಸ್ ಆಕಾಂಕ್ಷಿಗಳಿಗೆ 5 ಸಾವಿರ ಹುದ್ದೆ ಅರ್ಜಿ ಮೂಲಕ ಆಹ್ವಾನಿಸಲಾಗಿದೆ. ಎರಡು ವರ್ಷ ವಯೋಮಿತಿ ಸಡಿಲಕ್ಕೆ ಒತ್ತಾಯ ಇತ್ತು. ಹಾಗಾಗಿ ಅಭ್ಯರ್ಥಿಗಳ ಮನವಿಯನ್ನ ಪರಿಗಣಿಸಿ ವಯೋಮಿತಿ ಸಡಿಲಿಕೆ ಮಾಡಲಾಗಿದೆ ಎಂದು ಗೃಹ ಸಚಿವರು ತಿಳಿಸಿದರು.
ಇನ್ನು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನವೆಂಬರ್ ತಿಂಗಳ ಕಾಲ ಅವಕಾಶ ಇದೆ. ಈ ಅವಕಾಶವನ್ನ ಯುವಕರು, ಯುವತಿಯರು ಬಳಸಿಕೊಳ್ಳಬೇಕು ಎಂದರು.
ಅಂತೆಯೇ ಶಾಸಕ ಎಂ.ಪಿ ರೇಣುಕಾಚಾರ್ಯ ಅಣ್ಣನ ಮಗನ ಶವ ಪತ್ತೆ ಬಗ್ಗೆ ಮಾತನಾಡಿದ ಗೃಹ ಸಚಿವರು, ಈಗಾಗಲೇ ಕಾಣೆಯಾದ ರೇಣುಕಾಚಾರ್ಯ ಅವರ ಸಹೋದರ ಪುತ್ರನ ಕಾರು ಸಿಕ್ಕಿದೆ. ಮೃತದೇಹ ಕೂಡ ಇದರಲ್ಲಿದ್ದು, ತನಿಖೆಯಿಂದ ಸತ್ಯ ಹೊರಗೆ ಬರಬೇಕು. ಎಲ್ಲಾ ಆಯಾಮಗಳಿಂದಲೂ ತನಿಖೆ ಆಗ್ತಿದೆ.
ಈಗಾಗಲೇ ಸಿಸಿಟಿವಿ ಎಲ್ಲಾ ಪರಿಶೀಲನೆ ಮಾಡಿದ್ದಾರೆ. ರೇಣುಕಾಚಾರ್ಯ ಅವರು ಕಿಡ್ನ್ಯಾಪ್ ಶಂಕೆ ವ್ಯಕ್ತಪಡಿಸಿದ್ದಾರೆ. ಅದು ಖಚಿತ ಆಗಿಲ್ಲ, ತನಿಖೆಯಿಂದ ಗೊತ್ತಾಗಬೇಕು. ದಿನಕ್ಕೆ ಎರಡು ಮೂರು ಬಾರಿ ಫೋನ್ ಮಾಡ್ತಾ ಇದ್ದರೆಂತೆ ಅವರಿಗೆ ಯಾರೋ, ಅಧಿಕಾರಿಗಳಿಗೆ ನಾನು ಸೂಚನೆಯನ್ನ ಈ ಬಗ್ಗೆ ನೀಡಿದ್ದೇನೆ ಎಂದರು.