Wednesday, January 22, 2025

ಬ್ಲೂಟಿಕ್ ಪಡೆಯಲು 8 ಡಾಲರ್​​ ಶುಲ್ಕ

ಟ್ವಿಟರ್​ನಲ್ಲಿ ಅಧಿಕೃತ ಖಾತೆಗಳನ್ನು ಗುರುತಿಸಲು ನೆರವಾಗುವ ಬ್ಲೂಟಿಕ್ ಪಡೆಯಲು ಇನ್ನು ಮುಂದೆ 8 ಡಾಲರ್ ಶುಲ್ಕ ತೆರಬೇಕು ಎಂದು ಟ್ವಿಟರ್​ನ ಹೊಸ ಮಾಲೀಕ ಎಲಾನ್ ಮಸ್ಕ್ ಹೇಳಿದ್ದಾರೆ.

ಜನರು ಸ್ವತಃ ಶುಲ್ಕ ತೆರಲು ಆರಂಭಿಸಿದರೆ ಜಾಹೀರಾತುದಾರರ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ. ಕಂಪನಿಯ ಕಾರ್ಯನಿರ್ವಹಣೆಗೆ ಇದರಿಂದ ಹೆಚ್ಚಿನ ಸ್ವಾತಂತ್ರ್ಯ ಸಿಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಟ್ವಿಟರ್​ನಲ್ಲಿ ಬ್ಲೂಟಿಕ್ ಪಡೆಯುವುದು ಪ್ರತಿಷ್ಠೆಯ ವಿಷಯವೂ ಆಗಿದೆ.

ಪ್ರಸ್ತುತ ಟ್ವಿಟರ್​ನಲ್ಲಿ ಅಧಿಪತಿಗಳು ಮತ್ತು ಕೆಲಸಗಾರರು ಎಂಬ ಎರಡು ವರ್ಗ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಈ ಅಸಮಾನತೆ ಇರುವುದಿಲ್ಲ. ತಿಂಗಳಿಗೆ 8 ಡಾಲರ್ ಶುಲ್ಕ ತೆರುವ ಯಾರು ಬೇಕಾದರೂ ಬ್ಲೂಟಿಕ್​ಗೆ ಅಪ್ಲೈ ಮಾಡಬಹುದಾಗಿದೆ. ಈ ಮೊತ್ತವನ್ನು ಆಯಾ ದೇಶಗಳ ಆರ್ಥಿಕ ಸ್ಥಿತಿಗತಿಗೆ ತಕ್ಕಂತೆ ಪರಿಷ್ಕರಿಸಲಾಗುವುದು ಎಂದು ಮಸ್ಕ್ ಸ್ಪಷ್ಟಪಡಿಸಿದ್ದಾರೆ.

RELATED ARTICLES

Related Articles

TRENDING ARTICLES