Monday, December 23, 2024

ಹನಿ​​’ ಬಲೆಯಿಂದ BJP ಶಾಸಕ ಜಸ್ಟ್​​ ಮಿಸ್

ಚಿತ್ರದುರ್ಗ : ಬಿಜೆಪಿ ಶಾಸಕ ತಿಪ್ಪಾರೆಡ್ಡಿ ಹನಿಟ್ರ್ಯಾಪ್​​ಗೆ ಯತ್ನಿಸಿದ್ದು, ವಾಟ್ಸ್​​ಆ್ಯಪ್​ಗೆ ಅಶ್ಲೀಲ ವಿಡಿಯೋ ಕಳುಹಿಸಿ ಬ್ಲ್ಯಾಕ್​​ಮೇಲ್​ಮಾಡಿದ್ದಾರೆ.

ನಗರದಲ್ಲಿ ಅಪರಿಚಿತ ಮಹಿಳೆಯಿಂದ ತಿಪ್ಪಾರೆಡ್ಡಿಗೆ ವಿಡಿಯೋ ಕಾಲ್ ​ಮಾಡಿದ್ದು, ವಿಡಿಯೋ ಕಾಲ್​ಮಾಡಿ ಮಹಿಳೆ ರೆಕಾರ್ಡ್​ಮಾಡಿಕೊಂಡಿದ್ದಾರೆ. ಅದಲ್ಲದೇ, ವಾಟ್ಸ್​ಆ್ಯಪ್​​ಗೆ ಅಶ್ಲೀಲ ವಿಡಿಯೋ ಕಳುಹಿಸಿ ಬ್ಲ್ಯಾಕ್ ​ಮೇಲ್ ​ಮಾಡಿದ್ದು, ವಿಡಿಯೋ ಕಾಲ್ ಮಾಡಿ ಖಾಸಗಿ ಅಂಗ ತೋರಿಸಿದ ಯುವತಿ ತಕ್ಷಣಕ್ಕೆ ಮೊಬೈಲ್ ಪಕ್ಕಕ್ಕೆ ಇಟ್ಟಿರುವುದಾಗಿ ತಿಪ್ಪಾರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.

ಇನ್ನು, ಅ.31ರ ಬೆಳಗ್ಗೆ 8 ಗಂಟೆಗೆ ಅಪರಿಚಿತರಿಂದ ವಿಡಿಯೋ ಕಾಲ್​ಬಂದಿದ್ದು, ರಾಜಸ್ಥಾನ, ಒರಿಸ್ಸಾ ಭಾಗದಿಂದ ವಿಡಿಯೋ ಕಾಲ್ ಬಂದಿದೆ. ಕಾಲ್ ಕಟ್ ಮಾಡಿದ ಬಳಿಕ ಅಶ್ಲೀಲ ವಿಡಿಯೋಸ್ ವಾಟ್ಸಪ್ ಮಾಡಿದ್ದರು. ಚಿತ್ರದುರ್ಗ ಸೈಬರ್​ಠಾಣೆಗೆ ಶಾಸಕ ತಿಪ್ಪಾರೆಡ್ಡಿ ದೂರು ನೀಡಿದ್ದಾರೆ.

RELATED ARTICLES

Related Articles

TRENDING ARTICLES