Sunday, January 12, 2025

ರಸ್ತೆ ಬದಿ ಚಹಾ ಸವಿದ ಸಚಿನ್​ ತೆಂಡುಲ್ಕರ್​

ಬೆಳಗಾವಿ : ಗೋವಾ ಪ್ರವಾಸದ ವೇಳೆ ಬೆಳಗಾವಿ ಭೇಟಿ ನೀಡಿ, ಖುಷಿ ಕ್ಷಣಗಳನ್ನು ತಮ್ಮ ಸೋಶಿಯಲ್​ ಮಿಡಿಯಾದಲ್ಲಿ ಸಚಿನ್ ತೆಂಡೂಲ್ಕರ್ ಹಂಚಿಕೊಂಡಿದ್ದಾರೆ.

ರಸ್ತೆ ಪಕ್ಕವೇ ಚಹಾ ಜೊತೆಗೆ ಟೋಸ್ಟ್ ಸೇವಿಸಿ ಸರಳತೆ ಮೆರೆದ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ಈ ಸಂಬಂಧ ಇನ್ಟಾಗ್ರಾಂನಲ್ಲಿ 43 ಸೆಕೆಂಡ್ ವಿಡಿಯೋ ಶೇರ್ ಮಾಡಿದ್ದಾರೆ. ತಾವೇ ಕಾರಿನಿಂದ ಇಳಿದು ಚಹಾ-ಟೋಸ್ಟ್ ತೆಗೆದುಕೊಂಡು ರಸ್ತೆ ಪಕ್ಕ ನಿಂತ ಸಚಿನ್, ಬೆಳಗಾವಿ-ಗೋವಾ ಹೆದ್ದಾರಿ ಮಾರ್ಗದ ರಸ್ತೆ ಪಕ್ಕ ನಿಂತು ಚಹಾ- ಟೋಸ್ಟ್ ಸೇವಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ಇನ್ನು, , 43 ಸೆಕೆಂಡ್ ವಿಡಿಯೋದಲ್ಲಿ ಕ್ಷಣಹೊತ್ತಷ್ಟೇ ಘೋಚರಿಸುವ ಕ್ರಿಕೆಟಿಗ, ಪುತ್ರ ಅರ್ಜುನ ತೆಂಡೂಲ್ಕರ್, ಬಳಿಕ ಫೌಜಿ ಟೀ ಸ್ಟಾಲ್‌ ಮಾಲೀಕನ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಅವರು, ನಂತರ ಟೀ ಸ್ಟಾಲ್ ಮಾಲೀಕನಿಗೆ ಹ್ಯಾಂಡ್ ಶೇಕ್ ಮಾಡಿ ನಮಸ್ಕರಿಸಿ ಸರಳತೆ ಮೆರೆದಿದ್ದಾರೆ.

RELATED ARTICLES

Related Articles

TRENDING ARTICLES