Monday, December 23, 2024

ಭವಾನಿ ರೇವಣ್ಣ ವಿರುದ್ಧ ಪ್ರೀತಂಗೌಡ ಅವಹೇಳನಕಾರಿ ಹೇಳಿಕೆ..!

ಹಾಸನ‌: ಎಚ್​ಡಿ ರೇವಣ್ಣ ಕುಟುಂಬ ಹಾಗೂ ಶಾಸಕ ಪ್ರೀತಂ ಗೌಡ ಈಗಾಗಲೇ ಹಾಸನ ರಾಜಕೀಯದಲ್ಲಿ ಬದ್ದ ವೈರಿಗಳೆಂದು ಗುರುತಿಸಿಕೊಂಡಿದ್ದಾರೆ.

ಸದಾ ಒಬ್ಬರ ವಿರುದ್ದ ಮತ್ತೊಬ್ಬರು ಆರೊಪ ಪ್ರತ್ಯಾರೋಪಗಲನ್ನು ಮಾಡುತ್ತಿರುತ್ತಾರೆ. ಆದರೇ ಈಗ ಭವಾನಿ ರೇವಣ್ಣ ವಿರುದ್ಧ ಪ್ರೀತಂಗೌಡ ಅವಹೇಳನಕಾರಿ ಹೇಳಿಕೆ ವಿಚಾರ ಹಾಸನ ರಾಜಕೀಯದಲ್ಲಿ ತೀವ್ರ ಚಚೆ್ ನಡೆಯುತ್ತಿದೆ.

ಇನ್ನು ಭವಾನಿ ರೇವಣ್ಣ ವಿರುದ್ಧ ಪ್ರೀತಂಗೌಡ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ ಜೆಡಿಎಸ್ ಯುವ ಘಟಕದಿಂದ ಪ್ರತಿಭಟನೆ
ಹಾಸನದ ಹೇಮಾವತಿ ಪ್ರತಿಮೆ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆದಿದೆ. ಶಾಸಕ ಪ್ರೀತಂಗೌಡ ವಿರುದ್ಧ ದಿಕ್ಕಾರ ಕೂಗಿದ ಕಾರ್ಯಕರ್ತರು. ಪ್ರೀತಂಗೌಡ ವಿರುದ್ಧ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಕಾರ್ಯಕರ್ತರು.

RELATED ARTICLES

Related Articles

TRENDING ARTICLES