Monday, December 23, 2024

‘ನಟಭಯಂಕರ’ನ ಸಾಮಾಜಿಕ ಕಾರ್ಯಕ್ಕೆ ಹೊಡಿರಿ ಹಲಗಿ

ಬಿಗ್​ಬಾಸ್ ಪ್ರಥಮ್ ನಟಭಯಂಕರ ಅನ್ನೋದ್ರಲ್ಲಿ ಯಾವುದೇ ಡೌಟ್ ಇಲ್ಲ. ತೆರೆ ಮೇಲೆ ಅವ್ರ ಟ್ಯಾಲೆಂಟ್​ಗೆ ತಲೆಬಾಗಿದವರೇ ಎಲ್ಲಾ. ಸದ್ಯ ಅವ್ರು ನಟ ಭಯಂಕರನಾಗಿಯೇ ಬೆಳ್ಳಿ ಪರದೆ ಬೆಳಗೋಕೆ ಬರ್ತಿದ್ದಾರೆ. ಆದ್ರೆ ಸಿನಿಮಾಗಾಗಿ ಸಾಲ ಸೋಲ ಮಾಡಿರೋ ಪ್ರಥಮ್, ಸಣ್ಣ ಪುಟ್ಟ ಕಾರ್ಯಕ್ರಮಗಳಿಂದ ಬರೋ ಹಣವನ್ನ ಸಾಮಾಜಿಕ ಕಾರ್ಯಗಳಿಗೆ ಬಳಸ್ತಿದ್ದಾರೆ.

  • ಚಾಪರ್ ಹತ್ತಿ ಫಂಕ್ಷನ್ ಹೋಗಿ ಬಂದ ಹಣ ಸತ್ಕಾರ್ಯಕ್ಕೆ..!
  • ನವೆಂಬರ್ ಫಸ್ಟ್ ವೀಕ್ ಟ್ರೈಲರ್.. ಕೊನೆ ವಾರದಲ್ಲಿ ಸಿನಿಮಾ
  • ಬಹುದೊಡ್ಡ ತಾರಾಗಣದ ಜೊತೆ ರಿಯಲ್ ಸ್ಟಾರ್ ಉಪ್ಪಿ ಕಂಠ

ಬಿಗ್​ಬಾಸ್ ಪ್ರಥಮ್ ಪಕ್ಕಾ ಓಪನ್ ಹಾರ್ಟ್​ ವ್ಯಕ್ತಿತ್ವದ ವ್ಯಕ್ತಿ. ಇಂದಿಗೂ ಟು ವ್ಹೀಲರ್​ನಲ್ಲೇ ಓಡಾಡ್ತಿರೋ ಸೀದಾ ಸಾದಾ ವ್ಯಕ್ತಿ. ಬಿಗ್​ಬಾಸ್​ಗೆ ಹೋಗಿ ಬಂದವ್ರೆಲ್ಲಾ ಕಾರ್​ಗಳಲ್ಲಿ ಓಡಾಡ್ತಿದ್ರೂ, ಕಂಡ ಕನಸು ನನಸು ಮಾಡೋಕೆ ಸಾಲ ಸೋಲ ಮಾಡಿಕೊಂಡಿದ್ದಾರೆ ಪ್ರಥಮ್. ಹೌದು.. ಆ ಕನಸು ಬೇರಾವುದೂ ಅಲ್ಲ, ಸಿನಿಮಾ. ನಟಭಯಂಕರ ಚಿತ್ರ ಸದ್ಯದಲ್ಲೇ ತೆರೆಗಪ್ಪಳಿಸಲಿದ್ದು, ತುಂಬಾ ಕಷ್ಟ ಮತ್ತು ಇಷ್ಟ ಪಟ್ಟು ಮಾಡಿದ್ದಾರೆ ಈ ಪ್ರಾಜೆಕ್ಟ್​.

ರಿಯಲ್ ಸ್ಟಾರ್ ಉಪೇಂದ್ರ ಗಾಯನದಲ್ಲಿ ಚಿತ್ರದ ಟೈಟಲ್ ಟ್ರ್ಯಾಕ್ ಇಂಪ್ರೆಸ್ಸೀವ್ ಆಗಿದೆ. ಌಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೂಡ ಸ್ಯಾಂಪಲ್ಸ್​ಗೆ ಹಿನ್ನೆಲೆ ಧ್ವನಿ ನೀಡಿದ್ದು, ಟೀಸರ್ ಹಾಗೂ ಟ್ರೈಲರ್​ಗೆ ಬಹುಪರಾಕ್ ಅಂದಿದ್ರು.

ಅನನ್ಯ ಭಟ್ ಹಾಡ್ತಿರೋ ಹಾಡಿನ ಮೇಕಿಂಗ್, ಥ್ರಿಲ್ಲರ್ ಮಂಜು ಫೈಟ್ ಮೇಕಿಂಗ್ ವಿಡಿಯೋ ಸಖತ್ ವೈರಲ್ ಆಗಿದ್ದು, ಸಂಜಿತ್ ಹೆಗ್ಡೆಯ ಗೀತಾ ಗೀತಾ ಸಾಂಗ್ ಕೂಡ ಎಲ್ಲರ ಬಾಯಲ್ಲಿ ಗುನುಗುವಂತಿದೆ. ಪ್ರಥಮ್ ಜೊತೆ ಸಾಕಷ್ಟು ಹಿರಿಯ ಹಾಗೂ ಕಿರಿಯ ಕಲಾವಿದರ ದಂಡಿದೆ. ಸಾಯಿಕುಮಾರ್, ಲೀಲಾವತಿ, ಕುರಿ ಪ್ರತಾಪ್, ಓಂ ಪ್ರಕಾಶ್ ರಾವ್, ಬಿರಾದಾರ್ ಹೀಗೆ ದಿಗ್ಗಜ ಕಲಾವಿದರು ಚಿತ್ರದ ಸ್ಟ್ರೆಂಥ್ ಹೆಚ್ಚಿಸಿದ್ದಾರೆ.

ಪ್ರಥಮ್ ನಿರ್ದೇಶಿಸಿ, ನಟಿಸಿ, ರಿಲೀಸ್ ಮಾಡ್ತಿರೋ ಈ ಸಿನಿಮಾಗೆ ಆರ್ಥಿಕ ಸಂಕಷ್ಟ ಉಂಟಾದಾಗ ಅವ್ರೇ ಬಡ್ಡಿಗೆ ಹಣ ತಂದು ಸಿನಿಮಾಗೆ ಹಾಕಿದ್ದಾರೆ. ಸಿನಿಮಾ ಮೇಲಿನ ಅವ್ರ ಪ್ರೀತಿಯನ್ನ ಕನ್ನಡಿಗರು ಗುರ್ತಿಸಿ, ಕೈ ಹಿಡಿಯಲಿದ್ದಾರೆ ಅನ್ನೋ ಭರವಸೆಯಲ್ಲಿದ್ದಾರೆ. ಸಿನಿಮಾಗಾಗಿ ಸಾಲ ಮಾಡಿದ್ರೂ ಸಹ, ಸಣ್ಣ ಪುಟ್ಟ ಕಾರ್ಯಕ್ರಮಗಳಿಗೆ ಮುಖ್ಯ ಅತಿಥಿಯಾಗಿ ಹೋಗಿ ಬರೋ ಪ್ರಥಮ್, ಅದ್ರಿಂದ ಬರೋ ಹಣವನ್ನು ಸಿನಿಮಾಗಾಗಲಿ ಅಥ್ವಾ ವೈಯಕ್ತಿಯ ಖರ್ಚುಗಳಿಗಾಗಲಿ ಬಳಸುವುದಿಲ್ಲ.

ಸಾಮಾಜಿಕ ಕಾರ್ಯಗಳಿಗೆ ಬಳಸೋ ಮೂಲಕ ನಿಜ ಜೀವನದಲ್ಲೂ ಹೀರೋ ಆಗಿರೋ ಪ್ರಥಮ್, ರೀಸೆಂಟ್ ಆಗಿ ರಾಯಚೂರಿನಲ್ಲಿ ಕನಸದಾಸರ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ತೆರಳಿದ್ದರು. ಚಾಪರ್​ನಲ್ಲಿ ತೆರಳಿ ಕಾರ್ಯಕ್ರಮದ ಅತಿಥಿಯಾಗಿ ಬಂದ ಪ್ರಥಮ್, ಅಲ್ಲಿ ಕೊಟ್ಟಂತಹ ಗೌರವ ಧನವನ್ನು ಇತ್ತೀಚೆಗೆ ಹತ್ಯೆಯಾದ ದಿವ್ಯ ಕುಟುಂಬಕ್ಕೆ ನೀಡಿದ್ದಾರೆ. ಇವ್ರ ಈ ಸಾರ್ಥಕ ಕಾರ್ಯ ನಿಜಕ್ಕೂ ಶ್ಲಾಘನೀಯ. ಕನ್ನಡಿಗರು ಕೂಡ ಇವ್ರ ಈ ಸಮಾಜಮುಖಿ ಕಾರ್ಯಗಳಿಗೆ ಭೇಷ್ ಅಂತಿದ್ದಾರೆ.

ಅಂದಹಾಗೆ ನಟಭಯಂಕರ ಚಿತ್ರದ ಟ್ರೈಲರ್, ನವೆಂಬರ್ ಮೊದಲ ವಾರದಲ್ಲಿ ಲಾಂಚ್ ಆಗ್ತಿದ್ದು, ಸಿನಿಮಾ ಇದೇ ನವೆಂಬರ್ ತಿಂಗಳಾಂತ್ಯಕ್ಕೆ ದೊಡ್ಡ ಪರದೆ ಆವರಿಸಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್  ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES